ಮಂಗಳೂರು-ಇಸ್ರೇಲ್ ವ್ಯಾಪಾರ ಸಂಬಂಧ ಮಹತ್ವದ ಸಭೆ
ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಮುಂದಾಳತ್ವದಲ್ಲಿ, ಕೆನರಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಶ್ರಯದಲ್ಲಿ ನಡೆದ ಈ ಸಭೆಯಲ್ಲಿ ಇಸ್ರೇಲ್ನ ಬೆಂಗಳೂರು ಹಾಗೂ ದಕ್ಷಿಣ ಭಾರತದ ಕಾನ್ಸುಲ್ ಜನರಲ್ ಮಿಸ್ ಓರ್ಲಿ ವೈಟ್ಜ್ಮನ್ ಭಾಗವಹಿಸಿದರು.
ಕೆಸಿಸಿಐ ಅಧ್ಯಕ್ಷ ಪಿ.ಬಿ. ಅಹ್ಮದ್ ಮುದಾಸಿರ್ ಮಾತನಾಡಿ, ಈ ಕಾರ್ಯಕ್ರಮ ಇಸ್ರೇಲ್ ಕಾನ್ಸುಲ್ ಜನರಲ್ ಜನರಲ್ ಜೊತೆಗಿನ ಸಂವಾದದ ಫಲವಾಗಿದ್ದು, ಇದರ ಇನಿಶಿಯೇಟಿವ್ ಸಂಸದ ಬ್ರಿಜೇಶ್ ಚೌಟ ಅವರದ್ದೇ" ಎಂದು ತಿಳಿಸಿದರು. "ದೇಶದಿಂದ ದೇಶಕ್ಕೆ ಸಂಬಂಧಗಳು ಸಾಮಾನ್ಯವಾಗಿದ್ದರೂ, ಒಂದೇ ರೀತಿಯ ಭೌಗೋಳಿಕ ಹಾಗೂ ಆರ್ಥಿಕ ಸಮಸ್ಯೆಗಳಿರುವ ನಿರ್ದಿಷ್ಟ ಪ್ರದೇಶದೊಂದಿಗೆ ನೇರ ಸಂಪರ್ಕ ಸಾಧಿಸುವುದು ಈ ಕಾರ್ಯಕ್ರಮದ ಉದ್ದೇಶ" ಎಂದು ಹೇಳಿದರು.
ಮಂಗಳೂರು ಮತ್ತು ಇಸ್ರೇಲ್ ನಡುವಿನ ಮತ್ತೊಂದು ಪ್ರಮುಖ ಸಾಮ್ಯತೆ ಭೌಗೋಳಿಕತೆಯಾಗಿದೆ. ಎರಡೂ ಕರಾವಳಿ ಪ್ರದೇಶಗಳಾಗಿದ್ದು, ನೀರಿನ ಕೊರತೆ, ಕರಾವಳಿ ಸಮಸ್ಯೆಗಳು ಎರಡೂ ಕಡೆ ಒಂದೇ ರೀತಿಯವು. ಇಸ್ರೇಲ್ ಈ ಸಮಸ್ಯೆಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಮೊದಲೇ ಕಂಡುಕೊಂಡಿದೆ. ಡಿಸ್ಯಾಲಿನೇಷನ್ ಆಫ್ ವಾಟರ್, ವಾಟರ್ ಕನ್ಸರ್ವೇಶನ್, ಅಗ್ರಿಕಲ್ಚರಲ್ ಮಾಡೆಲಿಂಗ್ ಮೊದಲಾದ ಕ್ಷೇತ್ರಗಳಲ್ಲಿ ಇಸ್ರೇಲ್ ತಂತ್ರಜ್ಞಾನವನ್ನು ಮಂಗಳೂರಿನ ಕರಾವಳಿ ಪ್ರದೇಶಗಳಲ್ಲಿ ಅಳವಡಿಸಬಹುದಾದ ಸಾಧ್ಯತೆಗಳ ಕುರಿತು ಚರ್ಚೆ ನಡೆಯಿತು. ಇಂತಹ ತಂತ್ರಜ್ಞಾನಗಳನ್ನು ಇಲ್ಲಿ ಅಳವಡಿಸುವ ಮೂಲಕ ವಾಣಿಜ್ಯೀಕರಣಕ್ಕೂ ಅವಕಾಶವಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ತಂತ್ರಜ್ಞಾನ ಕ್ಷೇತ್ರದಲ್ಲಿ ಸೈಬರ್ ಸೆಕ್ಯುರಿಟಿ ಮತ್ತು ಕೃತಕ ಬುದ್ಧಿಮತ್ತೆಯಲ್ಲೂ ಇಸ್ರೇಲ್ ಬಹಳ ಮುಂದಿದೆ. ಈ ಕ್ಷೇತ್ರಗಳಲ್ಲಿ ಸಹಕಾರವು ಕೇವಲ ತಂತ್ರಜ್ಞಾನ ಹಂಚಿಕೆಗೆ ಮಾತ್ರ ಸೀಮಿತವಾಗದೆ, ಜ್ಞಾನ ವಿನಿಮಯದ ಹಂತಕ್ಕೂ ವಿಸ್ತರಿಸಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಇದು ಉದ್ಯಮಗಳಷ್ಟೇ ಅಲ್ಲದೆ ಆಡಳಿತಾತ್ಮಕ ಹಾಗೂ ಭದ್ರತಾ ವಲಯಕ್ಕೂ ಉಪಯುಕ್ತವಾಗಲಿದೆ ಎಂದು ತಿಳಿಸಲಾಯಿತು.
ಈ ಸಂವಾದದಲ್ಲಿ ಸುಮಾರು 30-40 ಪ್ರಮುಖ ಉದ್ಯಮ ಸಂಸ್ಥೆಗಳು ಭಾಗವಹಿಸಿದ್ದವು.
ಇಸ್ರೇಲ್ ಕಾನ್ಸುಲ್ ಜನರಲ್ ಜನರಲ್ ಮಿಸ್ ಓರ್ಲಿ ವೈಟ್ಜ್ಮನ್ ತಮ್ಮ ಮೊದಲ ಮಂಗಳೂರು ಭೇಟಿಯ ಅನುಭವ ಹಂಚಿಕೊಂಡು, ನಗರದ ಹಸಿರು ಪರಿಸರ, ಕರಾವಳಿ ವೈಶಿಷ್ಟ್ಯ ಹಾಗೂ ಉದ್ಯಮಶೀಲತೆಯನ್ನು ಮೆಚ್ಚಿದರು. ಡಿಜಿಟಲ್ ಸ್ಮಾರ್ಟ್ ಬೋರ್ಡ್ಗಳ ಕುರಿತು ಮಾತನಾಡಿದ ಅವರು, ಈ ತಂತ್ರಜ್ಞಾನ ಮಕ್ಕಳಿಗೆ ತರಗತಿಯ ಹೊರಗಿನ ಜಗತ್ತನ್ನು ಪರಿಚಯಿಸುವ ಕಿಟಕಿಯಾಗಿದ್ದು, ಜಾಗತಿಕ ಜ್ಞಾನಕ್ಕೆ ಸಂಪರ್ಕ ಕಲ್ಪಿಸುತ್ತದೆ ಎಂದು ಹೇಳಿದರು.
ಭಾರತ ದೊಡ್ಡ ದೇಶವಾಗಿರುವುದರಿಂದ ಎಲ್ಲ ಮಕ್ಕಳಿಗೂ ಒಂದೇ ಮಟ್ಟದ ಅವಕಾಶ ಸಿಗುವುದು ಸವಾಲಾಗಿದ್ದು, ಇಂತಹ ಡಿಜಿಟಲ್ ತಂತ್ರಜ್ಞಾನಗಳು ಆ ಅಂತರವನ್ನು ಕಡಿಮೆ ಮಾಡಬಲ್ಲವು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.
ಸಂಸದ ಬ್ರಿಜೇಶ್ ಚೌಟ ಅವರ ಃಚಿಛಿಞ ಣo ಒಚಿಟಿgಚಿಟoಡಿe, ಃಔಐPU ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ, ಅಗ್ರಿ ಟೆಕ್, ಪಾಲಿಹೌಸ್ ತಂತ್ರಜ್ಞಾನ, ಗ್ರಾಮೀಣ ಮಹಿಳೆಯರಿಗೆ ಉದ್ಯಮ ಅವಕಾಶ, ತರಕಾರಿ ಮತ್ತು ಹಣ್ಣುಗಳ ರಫ್ತು ಮುಂತಾದ ಕ್ಷೇತ್ರಗಳಲ್ಲಿ ಇಸ್ರೇಲ್ ತಂತ್ರಜ್ಞಾನ ಬಳಕೆಯ ಸಾಧ್ಯತೆಗಳ ಕುರಿತು ಸಹ ಚರ್ಚೆ ನಡೆಯಿತು. ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಡಿ. ವೇದವ್ಯಾಸ ಕಾಮತ್ ಮೊದಲಾದವರಿದ್ದರು.