ಸಾವಿತ್ರಿಬಾಯಿ ಪುಲೆ ಜನ್ಮದಿನವನ್ನು ಶಿಕ್ಷಕಿಯರ ದಿನಾಚರಣೆಯನ್ನಾಗಿ ಆಚರಣೆಯಾಗಲಿ: ರೆನ್ನಿ ಡಿಸೋಜ
ಅವರು ಇಂದು ಪಡಿ ಕಚೇರಿಯಲ್ಲಿ ಭಾರತದ ಮೊದಲ ಮಹಿಳಾ ಶಿಕ್ಷಕಿ, ಸಮಾಜ ಸುಧಾರಕಿ ಹಾಗೂ ಮಹಿಳಾ ಶಿಕ್ಷಣದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಅವರ ಜನ್ಮದಿನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಇಂದಿನ ದಿನದಲ್ಲಿ, ಅವರ ಜೀವನ ಮತ್ತು ಕಾರ್ಯಗಳು ಯುವ ಪೀಳಿಗೆಗೆ ಶಿಕ್ಷಕರಿಗೆ ಪ್ರೇರಣೆಯಾಗಿದ್ದು, ಸಮಾನತೆ, ನ್ಯಾಯ ಮತ್ತು ಶಿಕ್ಷಣದ ಮಹತ್ವವನ್ನು ನೆನಪಿಸುತ್ತವೆ. ಸಾವಿತ್ರಿಬಾಯಿ ಪುಲೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಶಿಕ್ಷಣದ ಮೂಲಕ ಸಮಾನ ಹಾಗೂ ಪ್ರಗತಿಶೀಲ ಸಮಾಜ ನಿರ್ಮಿಸುವ ಸಂಕಲ್ಪವನ್ನು ನಾವು ಎಲ್ಲರೂ ಕೈಗೊಳ್ಳಬೇಕಾಗಿದೆ ಎಂದರು.
ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿಯ ಅಧ್ಯಕ್ಷ ಮಹಮ್ಮದ್ ರಫೀಕ್, ಸಂಚಲನ ಸಮಿತಿಯ ಅಧ್ಯಕ್ಷೆ ಸುನೀತಾ, ಸದಸ್ಯರಾದ ಪ್ರೇಮಿ ಫೆರ್ನಾಂಢೀಸ್, ಪ್ರಮೀಳಾ, ಸಮಾಜ ಸೇವಕಿ ಆಶಾಲತಾ, ಪ್ಯಾರ ಲೀಗಲ್ ಸದಸ್ಯೆ ಹರ್ಷಿತಾ, ಪಡಿ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ವಿವೇಕ ಸ್ವಾಗತಿಸಿ, ಸುನೀತಾ ವಂದಿಸಿದರು.
ಸಭೆಯಲ್ಲಿ ಕೈಗೊಂಡ ನಿರ್ಣಯಗಳು:
ಸಾವಿತ್ರಿ ಬಾಯಿ ಪುಲೆಯವರ ಜನ್ಮದಿನವನ್ನು, ಕರ್ನಾಟಕ ಸರಕಾರ ಶಿಕ್ಷಕಿಯರ ದಿನಾಚರಣೆಯನ್ನಾಗಿ ಮಾಡಬೇಕು., ಸಾವಿತ್ರಿ ಬಾಯಿ ಪುಲೆಯವರು ನೀಡಿದ ಸಾಮಾಜಿಕ ನ್ಯಾಯ ಲಿಂಗ ಸಮಾನತೆ ಹಾಗೂ ವೈಜ್ಞಾನಿಕ ಮನೋಭಾವ ಮಕ್ಕಳಲ್ಲಿ ಮೂಡಿಸುವ ನಿಟ್ಟಿನಲ್ಲಿ ಶಿಕ್ಷಕರಿಗೆ ವಿಶೇಷವಾದ ತರಬೇತಿ ನೀಡಬೇಕು., ಶಾಲಾ ಪಠ್ಯದಲ್ಲಿ ಮಕ್ಕಳಿಗೆ, ಸಾವಿತ್ರಿಬಾಯಿ ಬಾಯಿ ಪುಲೆಯವರು ನೀಡಿದ ಸಾಮಾಜಿಕ ನ್ಯಾಯ ಲಿಂಗ ಸಮಾನತೆ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಪಠ್ಯವನ್ನು ಸೇರಿಸಿಕೊಳ್ಳಬೇಕು., ಡಿ.ಎಡ್ ಮತ್ತು ಬಿ.ಎಡ್ ಶಿಕ್ಷಣದಲ್ಲಿ ಸಾವಿತ್ರಿ ಬಾಯಿ ಪುಲೆಯವರ ಶಿಕ್ಷಕ ವೃತ್ತಿಯ ಬಗ್ಗೆ ತರಬೇತಿಯಲ್ಲಿ ಅಳವಡಿಸಬೇಕು., ಅವರ ಜನುಮದಿನದಂದು ಮತ್ತು ಪುಣ್ಯದಿನದಂದು, ಶಾಲೆಯ ಎಸೆಂಬ್ಲಿಯಲ್ಲಿ ಅವರ ಬಗ್ಗೆ ಸ್ಮರಣೆ ಮಾಡುವ ಕುರಿತು ಶಿಕ್ಷಣ ಇಲಾಖೆಯು ಸುತ್ತೋಲೆಯನ್ನು ಹೊರಡಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.