ಜ.5 ರಂದು ಶೀರೂರು ಶ್ರೀಗಳಿಗೆ ಮಂಗಳೂರಿನಲ್ಲಿ ಗುರುವಂದನಾ ತುಲಾಭಾರ
Monday, January 5, 2026
ಮಂಗಳೂರು: ಪ್ರಥಮ ಬಾರಿಗೆ ಜಗದ್ಗುರು ಶ್ರೀ ಮಧ್ವಾಚಾರ್ಯ ಸಂಸ್ಥಾನ ಉಡುಪಿ ಪರ್ಯಾಯ ಸರ್ವಜ್ಞ ಪೀಠಾರೋಹಣ ಗೈಯ್ಯಲಿರುವ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ಶ್ರೀಪಾದಂಗಳವರಿಗೆ ಪಟ್ಟದ ದೇವರ ಸಹಿತವಾಗಿ ಜ.5 ರಂದು ಮಧ್ಯಾಹ್ನ 1.30ಕ್ಕೆ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯಲ್ಲಿರುವ ಮಂಜುಪ್ರಾಸಾದದ ಶ್ರೀ ವಿಶ್ವೇಶತೀರ್ಥ ವೇದಿಕೆಯಲ್ಲಿ ಗುರುವಂದನಾ ತುಲಾಭಾರ ನಡೆಯಲಿದೆ.
ವೇದ ವಿದ್ವಾಂಸರು, ಜನಪ್ರತಿನಿಧಿಗಳು ಹಾಗೂ ಧಾರ್ಮಿಕ ಮುಖಂಡರುಗಳ ಸಮ್ಮುಖದಲ್ಲಿ ಗುರುವಂದನಾ ತುಲಾಭಾರ ನಡೆಯಲಿರುವುದೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಉಡುಪಿ ಪರ್ಯಾಯ ಸ್ವಾಗತ ಸಮಿತಿಯ ಎಸ್. ಪ್ರದೀಪ ಕುಮಾರ ಕಲ್ಕೂರ (ಮೊ: 9845083736) ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಗಳಿಗೆ ನಾಣ್ಯ ಸಮರ್ಪಣೆ ಮಾಡಲು ಮತ್ತು ಶ್ರೀಪಾದರಿಗೆ ಪಾದಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.