ಇನ್ಸ್ಟಾಗ್ರಾಮ್ ಆಶಾ ಪಂಡಿತ್ ನಿಧನ
Friday, January 23, 2026
ಮಂಗಳೂರು: ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ತುಳು ಭಾಷೆಯ ಬೈಗುಳದ ಮೂಲಕ ಪ್ರಸಿದ್ಧಿಯಾಗಿದ್ದ ಆಶಾ ಪಂಡಿತ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ತನ್ನದೇ ಶೈಲಿಯಲ್ಲಿ ವಿಡಿಯೋಗಳನ್ನು ಮಾಡಿ ಟ್ರೋಲ್ ಮಾಡುವವರಿಗೂ ನೆಚ್ಚಿನವರಾಗಿದ್ದರು. ಇತ್ತೀಚೆಗೆ ವಿಡಿಯೋವೊಂದರಲ್ಲಿ ತನ್ನ ಸಂಕಷ್ಟದ ಕುರಿತು ಹೇಳಿಕೊಂಡು ಸುದ್ದಿಯಾಗಿದ್ದರು. ತುಳು ರಂಗಭೂಮಿಯಲ್ಲೂ ಕೆಲಸ ಮಾಡಿದ್ದ ಪಂಡಿತ್ ಸಾಮಾಜಿಕ ತಾಣದಲ್ಲಿ ಆಶಾ ಅಕ್ಕ ಎಂದೇ ಸುದ್ದಿಯಾಗುತ್ತಿದ್ದರು.
ಆಶಾ ಪಂಡಿತ್ ಅಳಪೆ ಬಳಿ ಸಣ್ಣ ಕ್ಯಾಂಟೀನ್ ನಡೆಸುತ್ತಿದ್ದರು. ಬಿಡುವಿದಾಗಲೆಲ್ಲ ಇನ್ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಗಳನ್ನು ಮಾಡಿ ತನ್ನದೇ ಆದ ಅಭಿಮಾನಿವರ್ಗವನ್ನೂ ಹೊಂದಿದ್ದರು.