ಕ್ರಿಸ್ಮಸ್ ಅಬ್ಬದ ವೇಳೆ ನಡೆದ ದಾಳಿ ಖಂಡಿಸಿ ಕ್ರೈಸ್ತ ಸಮುದಾಯದಿಂದ ಪ್ರತಿಭಟನೆ

ಕ್ರಿಸ್ಮಸ್ ಅಬ್ಬದ ವೇಳೆ ನಡೆದ ದಾಳಿ ಖಂಡಿಸಿ ಕ್ರೈಸ್ತ ಸಮುದಾಯದಿಂದ ಪ್ರತಿಭಟನೆ


ಮಂಗಳೂರು: ಕ್ರಿಸ್ಮಸ್ ಹಬ್ಬದ ವೇಳೆ ದೇಶಾದ್ಯಂತ ಮೇಲೆ ನಡೆದ ದಾಳಿಯನ್ನು ಖಂಡಿಸಿ ನಗರದ ಬೆಂದೂರ್‌ವೆಲ್‌ನಲ್ಲಿರುವ ಸಂತ ಸೆಬಾಸ್ಟಿಯನ್ ಚರ್ಚ್‌ನ ಪ್ಯಾರಿಸ್ ಕೌನ್ಸಿಲ್ ವತಿಯಿಂದ ಚರ್ಚ್‌ನ ಮುಂಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರು ಮೊಂಬತ್ತಿ ಬೆಳಗಿಸಿ ಪ್ರಾರ್ಥನೆ ಮಾಡಿ ನೋವು ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಚರ್ಚ್‌ನ ಧರ್ಮಗುರು ವಂ.ಫಾ. ವಾಲ್ಟರ್ ಡಿಸೋಜ ಶಾಂತಿಯುತವಾಗಿ ಕ್ರಿಸ್ಮಸ್ ಹಬ್ಬ ಆಚರಿಸುವಾಗ ಕಿಡಿಗೇಡಿಗಳು ದಾಳಿ ಮಾಡಿದ್ದಾರೆ. ಹಬ್ಬಕ್ಕಾಗಿ ಮಾಡಿದ ಅಲಂಕಾರದ ವಸ್ತುಗಳನ್ನು ನಾಶಪಡಿಸಿದ್ದಾರೆ. ಹಬ್ಬ ಆಚರಿಸಲು ಬಿಡದೆ ಸಂಭ್ರಮ ಕಸಿದಿದ್ದಾರೆ. ಭಯದ ವಾತಾವರಣ ಸೃಷ್ಟಿಸಿದ್ದಾರೆ. ಮುಂದೆ ಎಂದೂ ಕೂಡ ಇಂತಹ ಕೃತ್ಯಗಳು ನಡೆಯದಂತೆ ಸರಕಾರ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. 

ಯಾರಿಗೂ ತೊಂದರೆ ಕೊಡದೆ ನಾವು ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಸಂವಿಧಾನದ ಪ್ರಕಾರ ನಮಗೂ ಈ ದೇಶದಲ್ಲಿ ಬಾಳಲು ಹಕ್ಕಿದೆ. ಹಾಗಾಗಿ ನಮ್ಮನ್ನು ನಮ್ಮಷ್ಟಕ್ಕೆ ಬಿಡಿ. ದೇಶದಲ್ಲಿ ಶಾಂತಿಯ ವಾತಾವರಣ ರೂಪಿಸಲು ಜೊತೆಗೂಡೋಣ ಎಂದು ವಂ. ಫಾ ವಾಲ್ಟರ್ ಡಿಸೋಜ ಹೇಳಿದರು.

ರು.ಚರ್ಚ್‌ನ ಸಹಾಯಕ ಧರ್ಮಗುರುಗಳಾದ ವಂ. ಫಾ. ವಿವೇಕ್ ಪಿಂಟೋ, ವಂ. ಫಾ. ಓಜ್ಮೊಂಡ್ ಡಿಸೋಜ, ಪ್ರಾಂಶುಪಾಲ ವಂ. ಫಾ. ಅರುಣ್ ಲೋಬೊ, ಮಾಜಿ ಶಾಸಕ ಜೆ.ಆರ್. ಲೋಬೊ, ಡೆನ್ನಿಸ್ ಡಿಸಿಲ್ವ, ಉಪಾಧ್ಯಕ್ಷ ದೀಪಕ್ ಡಿಸೋಜ, ಕಾರ್ಯದರ್ಶಿ ರಾಸ್ಟನ್ ಪ್ಯಾರಿಸ್, ಲಾಯ್ ರೇಗೋ ಮತ್ತಿತರರು ಪ್ರತಿಭಟನೆಗೆ ನೇತೃತ್ವ ನೀಡಿದ್ದರು.

ಶಾಂತಿ ಮತ್ತು ನ್ಯಾಯಕ್ಕಾಗಿ ನಡೆದ ಪ್ರತಿಭಟನೆಯಲ್ಲಿ ಚರ್ಚ್ ವ್ಯಾಪ್ತಿಯ ಭಕ್ತಾಧಿಗಳು, ಭಗಿನಿಯರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಭಾಗವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article