ಜ.25 ರಂದು ಮೂಡುಬಿದಿರೆಯಲ್ಲಿ ‘ಹಿಂದೂ ಸಂಗಮ’: ಆಮಂತ್ರಣ ಪತ್ರಿಕೆ ಬಿಡುಗಡೆ

ಜ.25 ರಂದು ಮೂಡುಬಿದಿರೆಯಲ್ಲಿ ‘ಹಿಂದೂ ಸಂಗಮ’: ಆಮಂತ್ರಣ ಪತ್ರಿಕೆ ಬಿಡುಗಡೆ


ಮೂಡುಬಿದಿರೆ: ರಾಷ್ಟ್ರೀಯ ಸ್ವಯಂಸೇವಕ ಸಂಘ ಆರಂಭವಾಗಿ ಇದೀಗ ನೂರು ವರ್ಷಗಳು ಪೂರ್ತಿಯಾಗಿರುವ ಸಂದರ್ಭದಲ್ಲಿ ವಿಶ್ವದಾದ್ಯಂತ ಎಲ್ಲಾ ಕಡೆಗಳಲ್ಲಿ ಜ.25 ರಂದು ‘ಹಿಂದು ಸಂಗಮ’ ಕಾರ್ಯಕ್ರಮವನ್ನು ಸ್ವರಾಜ್ಯ ಮೈದಾನದಲ್ಲಿ ಹಮ್ಮಿಕೊಂಡಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಕೋಟೆಬಾಗಿಲು ಶ್ರೀ ವೀರ ಮಾರುತಿ ದೇವಸ್ಥಾನದಲ್ಲಿ ನಡೆಯಿತು.


ಮೂಡುಬಿದಿರೆ ಜೈನಮಠದ ಶ್ರೀ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಮಂತ್ರಣ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಮನೆ ಮನೆಗಳಲ್ಲಿ ಪವಿತ್ರವಾದ ಭಗವಾಧ್ವಜವನ್ನು ಅರಳಿಸಿರಿ. ಪ್ರತಿ ಮನೆಯಿಂದ ಕನಿಷ್ಠ ಎರಡು ಮಂದಿಯಾದರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದು ಧರ್ಮದ ಔನ್ನತ್ಯವನ್ನು ಸಾರಬೇಕು. ಆ ಮೂಲಕ ನಾವೆಲ್ಲಾ ಹಿಂದು, ನಾವೆಲ್ಲಾ ಒಂದು ಎಂಬ ರಾ.ಸ್ವ.ಸೇ. ಸಂಘದ ಮಾನನೀಯರಾದ ಡಾ. ಹೆಡಗೆವಾರ್ ಗುರೂಜಿಯವರ ಚಿಂತನೆಯನ್ನು  ಕಾರ್ಯಗತಗೊಳಿಸಬೇಕು ಎಂದು ಹಾರೈಸಿದರು.

ರಾ.ಸ್ವ. ಸಂಘದ ಸೋಂದಾ ಭಾಸ್ಕರ್ ಭಟ್ ಅವರು, ‘೪೪ರಷ್ಟು ವಿದೇಶಗಳಲ್ಲೂ ವ್ಯಾಪಿಸಿರುವ ಸಂಘವು ಇಂದು ಶತಮಾನೋತ್ಸವ ಆಚರಿಸುತ್ತಿದ್ದು, ಸಂಘವು ಎಲ್ಲಾ ಹಿಂದುಗಳಲ್ಲಿ ಸಮಾನತೆಯ ತತ್ವ ಬೋಧಿಸುವಲ್ಲಿ ಸಫಲವಾಗಿದೆ ಎಂದರು.

ಮೂಡುಬಿದಿರೆ ಪ್ರಖಂಡದ ವಿಶ್ವ ಹಿಂದು ಪರಿಷತ್‌ನ ಕಾರ್ಯಾಧ್ಯಕ್ಷ ಶಾಮ ಹೆಗ್ಡೆ, ಉಪಾಧ್ಯಕ್ಷ ಎಂ. ಶಾಂತರಾಮ ಕುಡ್ವ, ಹಿಂದು ಸಂಗಮ ಮೂಡುಬಿದಿರೆ ನಗರದ ಸಂಚಾಲಕ ನಾಗರಾಜ ಹೆಗ್ಡೆ, ರಾ.ಸ್ವ. ಸಂಘದ ಪ್ರಮುಖ್ ಮಂಜುನಾಥ ಶೆಟ್ಟಿ, ರಾಷ್ಟ್ರೀಯ ಸ್ವಯಂಸೇವಿಕಾ ಸಮಿತಿಯ ಮೂಕಾಂಬಿಕಾ ಭಟ್ ಸಹಿತ ಸಂಘದ ಹಿರಿಯರು   ಉಪಸ್ಥಿತರಿದ್ದರು.

ರಾ.ಸ್ವ. ಸಂಘದ ಪ್ರಮುಖರಾದ ರೋಹನ್ ಬಂಗೇರಾ ಅವರು ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article