ನಮ್ಮ ಮನೆಗಳು ಸಾಮರಸ್ಯದ ಮನೆಗಳಾಗಬೇಕು: ಕೃಷ್ಣಪ್ರಸಾದ್

ನಮ್ಮ ಮನೆಗಳು ಸಾಮರಸ್ಯದ ಮನೆಗಳಾಗಬೇಕು: ಕೃಷ್ಣಪ್ರಸಾದ್

ಕಲ್ಲಬೆಟ್ಟು ಮಂಡಲದಲ್ಲಿ ಹಿಂದೂ ಸಂಗಮ 


ಮೂಡುಬಿದಿರೆ: ನಮ್ಮಲ್ಲಿ ನೂರಾರು ಜಾತಿಗಳಿವೆ. ನಾವೆಲ್ಲಾ ಹಿಂದೂ ರಾಷ್ಟ್ರಕ್ಕೆ ಸೇರಿದವರೆಂಬ ಭಾವನೆ ಎಲ್ಲರಲ್ಲಿಯೂ ಬಂದಾಗ ಜಾಗೃತಿ ಮೂಡುತ್ತದೆ. ಹಿಂದೂ ಸಮಾಜದ ಯಾವುದೇ ವಗ೯ಕ್ಕೆ ಸೇರಿದ ಜನರನ್ನು ನಾವು ಜಾತಿಯ ಗೆರೆಯನ್ನು ಬಿಟ್ಟು ನಮ್ಮ ಮನೆಯೊಳಗೆ ಪ್ರವೇಶ ಮಾಡಲು ಅವಕಾಶ ನೀಡುವ ಮೂಲಕ ಪರಿವತ೯ನೆ ಮಾಡಿದಾಗ ನಮ್ಮ ಮನೆಗಳು ಸಾಮರಸ್ಯದ ಮನೆಗಳಾಗುತ್ತವೆ ಎಂದು ಎಂದು  ಕಲ್ಲಡ್ಕ ಶ್ರೀರಾಮ ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಹೇಳಿದರು. 


ಅವರು ಹಿಂದೂ ಸಂಗಮ ಆಯೋಜನಾ ಸಮಿತಿ ಮೂಡುಬಿದಿರೆ ತಾಲೂಕಿನ ಕಲ್ಲಬೆಟ್ಟು ಮಂಡಲದ ವತಿಯಿಂದ ಭಾನುವಾರ ಕಲ್ಲಬೆಟ್ಟು ಮಹಮ್ಮಾಯಿ ದೇವಸ್ಥಾನದ ಆವರಣದಲ್ಲಿ ದಿ. ಸಂಜೀವ ಆಚಾಯ೯ ವೇದಿಕೆಯಲ್ಲಿ ನಡೆದ ಬೃಹತ್ ಹಿಂದೂ ಸಂಗಮ ಕಾಯ೯ಕ್ರಮದಲ್ಲಿ ಬೌಧಿಕ ಉಪನ್ಯಾಸ ನೀಡಿದರು. 


ಆರ್ ಎಸ್ ಎಸ್ ಸಂಘಟನೆಗೆ ನೂರು ವಷ೯ದ ತುಂಬಿದ ಹಿನ್ನೆಲೆಯಲ್ಲಿ ಹಿಂದೂಗಳಲ್ಲಿ ಕುಟುಂಬ ವ್ಯವಸ್ಥೆ, ಸಾಮರಸ್ಯ, ಪರಿಸರ ಸಂರಕ್ಷಣೆ, ಸ್ವದೇಶೀ ಅಚರಣೆ, ನಾಗರಿಕ ಶಿಷ್ಠಾಚಾರದ ಬಗ್ಗೆ ಜಾಗೃತಿ ಮೂಡಿಸಬೇಕೆಂಬ ನಿಟ್ಟಿನಲ್ಲಿ ಕಾಯ೯ಕ್ರಮವನ್ನು ಆಯೋಜಿಸಲಾಗಿದೆ ಹೊರತು ಯಾರನ್ನೂ ಹೆದರಿಸಲು ಅಥವಾ ಬೆದರಿಸಲು ಅಲ್ಲ ಎಂದು ಸ್ಪಷ್ಟಪಡಿಸಿದರು.


ಮಾರೂರು ಖಂಡಿಗದ ರಾಮದಾಸ ಅಸ್ರಣ್ಣ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಭವ್ಯ ಪರಂಪರೆಯ ದೇಶ ಭಾರತ. ನಾವು ಯಾವುದನ್ನು ಪರಿಶುದ್ಧ ಮನಸ್ಸಿನಿಂದ ಪಾಲನೆ ಮಾಡುತ್ತೇವೆಯೋ ಅದೇ ನಿಜವಾದ ಧಮ೯. ಹಿಂದೂ ಧಮ೯ ನಶಿಸದಂತೆ ಇಂತಹ ಸಂಘಟನೆಗಳು ಕೆಲಸ ಮಾಡಬೇಕು ಎಂದರು.


ಗೌರವ: ಆಯೋಧ್ಯೆ ಕರಸೇವೆಯಲ್ಲಿ ಪಾಲ್ಗೊಂಡಿರುವ ಕಲ್ಲಬೆಟ್ಟಿನ ಶೀನ ಸುವಣ೯, ನಾರಾಯಣ, ರವೀಂದ್ರ ಪೈ, ಸುರೇಶ್ ಆಚಾಯ೯ ಮತ್ತು ಕೃಷ್ಣಪ್ಪ ಅವರನ್ನು ಈ ಸಂದಭ೯ದಲ್ಲಿ ಗೌರವಿಸಲಾಯಿತು. 


ಕಲ್ಲಬೆಟ್ಟು ಮಹಮ್ಮಾಯಿ ದೇವಸ್ಥಾನದ ಆಡಳಿತ ಮೋಕ್ತೇಸರ ಶಿವಾನಂದ ಪೈ, ಶಂಭುಶೆಟ್ಟಿ ಮಾರೂರು ಗುತ್ತು, ಪಾಣರ ಯಾನೆ ನಲಿಕೆ ಸಂಘದ ಜಿಲ್ಲಾಧ್ಯಕ್ಷ ಎನ್. ಕೆ. ಸಾಲ್ಯಾನ್, ಮಹಮ್ಮಾಯಿ ದೇವಸ್ಥಾನದ ಅಧ್ಯಕ್ಷ ಸುಂದರ ಶೆಟ್ಟಿ,  ಗೋಪಾಲ ಪೂಜಾರಿ, ಪತ್ರಕತೆ೯ ಪ್ರೇಮಶ್ರೀ ಕಲ್ಲಬೆಟ್ಟು, ಕಲ್ಲಬೆಟ್ಟು ಹಿಂದೂ ಸಂಗಮ ಸಮಿತಿಯ ಸಂಚಾಲಕ ನವೀನ್ ಕುಮಾರ್, ಸಹ ಸಂಚಾಲಕ ಪ್ರವೀಣ್ ಶೆಟ್ಟಿ   ಉಪಸ್ಥಿತರಿದ್ದರು. 


ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ವಿವಿಧ ಕ್ರೀಡಾ ಸ್ಪಧೆ೯ಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಸಮಿತಿಯ ಕೋಶಾಧಿಕಾರಿ ಗೋಪಾಲಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಘಾ ಕಾಮತ್ ವಂದೇ ಮಾತರಂ ಹಾಡಿದರು. ಶೋಭಾ ಸುರೇಶ್ ಮತ್ತು ತುಷಿತಾ ಕಾಯ೯ಕ್ರಮ ನಿರೂಪಿಸಿದರು. ಸುಧೀರ್ ಪೈ ವಂದಿಸಿದರು. 

ಹಿಂದೂ ಸಂಗಮಕ್ಕೆ ಶೋಭಾಯಾತ್ರೆಯ ಮೆರಗು:

ನಿವೃತ್ತ ಶಿಕ್ಷಕ ಶಿಕಾರಿಪುರ ಈಶ್ವರ ಭಟ್ ಮಹಾವೀರ ಕಾಲೇಜು ಬಳಿ ಶೋಭಾಯಾತ್ರೆಗೆ ಚಾಲನೆಯನ್ನು ನೀಡಿದರು.

ಪ್ರಮುಖರಾದ ಬಾಹುಬಲಿ ಪ್ರಸಾದ್, ಯತೀಶ್ ಕೋಟ್ಯಾನ್, ಶಶಿಕಿರಣ್, ರೋಹನ್ ಅತಿಕಾರಬೆಟ್ಟು ಮತ್ತಿತರರು ಈ ಸಂದಭ೯ದಲ್ಲಿದ್ದರು. 

ವಿವಿಧ ಕುಣಿತ ಭಜನೆಯ ತಂಡಗಳು, ಕೇರಳ ಚೆಂಡೆ, ಭಾರತ ಮಾತೆಯ ವೇಷಧಾರಿಗಳು, ಪೂಣ೯ಕುಂಭ ಹಿಡಿದ ಮಹಿಳೆಯರು ಹಾಗೂ ಕಾಯ೯ಕತ೯ರು ಶೋಭಾಯಾತ್ರೆಯಲ್ಲಿ ಭಾಗವಹಿಸಿ ಮೆರಗು ನೀಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article