ಧರ್ಮ, ಸಂಸ್ಕೃತಿ ಉಳಿದರೆ ಲೋಕ ಸುಭೀಕ್ಷೆ: ಕೇಮಾರು ಶ್ರೀ

ಧರ್ಮ, ಸಂಸ್ಕೃತಿ ಉಳಿದರೆ ಲೋಕ ಸುಭೀಕ್ಷೆ: ಕೇಮಾರು ಶ್ರೀ


ಮೂಡುಬಿದಿರೆ: ಹರಿಹರ ಪುತ್ರ ಅಯ್ಯಪ್ಪನಿಗೆ ದೇಶಾದ್ಯಂತ ಲಕ್ಷಾಂತರ ಭಕ್ತರಿದ್ದು,ಅವರುಗಳ ಕಠಿಣ ಉಪವಾಸ ವ್ರತ ನಿಯಮ ಪಾಲನೆಯಿಂದ ಊರೂರಲ್ಲಿ ಧರ್ಮ ಜಾಗೃತಿಯ ಕಾರ್ಯ ನಿರಂತರವಾಗಿ ಆಗುತ್ತಿದೆ. ಧರ್ಮ, ಸಂಸ್ಕೃತಿ ಉಳಿದರೆ ಮಾತ್ರ ಈ ದೇಶದ ಉಳಿವು ಸಾಧ್ಯ ಎಂದು ಸಾಂದೀಪನಿ ಸಾಧನಾಶ್ರಮ ಶ್ರೀ ಕ್ಷೇತ್ರ ಕೇಮಾರಿನ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.

ಬೆಳುಜೀರ್ಣೋದ್ಧಾರಗೊಂಡ ನೂತನ ಶ್ರೀ ಹರಿಹರ ಪುತ್ರ ಮಂದಿರವನ್ನು ಲೋಕಾರ್ಪಣೆ ಗೊಳಿಸಿ ಧಾರ್ಮಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು. 

ಬೆಳುವಾಯಿಯಲ್ಲಿ ಜೀರ್ಣೋದ್ಧಾರಗೊಂಡ ನೂತನ ಶ್ರೀ ಹರಿಹರ ಪುತ್ರ ಮಂದಿರವನ್ನು ಲೋಕಾರ್ಪಣೆ ಗೊಳಿಸಿ  ಆಶೀರ್ವಚನ ನೀಡಿದರು.  ಭವ್ಯವಾದ ಶ್ರೀ ಅಯ್ಯಪ್ಪನ ಸಾನ್ನಿಧ್ಯ ಜೀರ್ಣೋದ್ಧಾರಗೊಂಡು ಧರ್ಮಜಾಗೃತಿ, ಸಂಸ್ಕೃತಿಯ ಸಾನ್ನಿಧ್ಯವಾಗುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದರು. 

ಸಾರ್ವಜನಿಕ ಶ್ರೀ ಶಾರದೋತ್ಸವ ಟ್ರಸ್ಟ್ (ರಿ)ಬನ್ನಡ್ಕದ ಅಧ್ಯಕ್ಷ, ಜಿಲ್ಲಾ ಹಿರಿಯ ಸಹಕಾರೀ ಧುರೀಣ  ಎಂ.ದಯಾನಂದ ಪೈ ಅವರು ಮಾತನಾಡಿ 40 ವರ್ಷಗಳ ಹಿಂದೆ  ಗೋಪಾಲ ಪೈ ಅವರು ತಮ್ಮ ಸ್ವಂತ ಪರಿಶ್ರಮ ಮತ್ತು ತ್ಯಾಗ  ತಪಸ್ಸಿನ ಫಲದಿಂದ ಈ ಅಯ್ಯಪ್ಪ ಮಂದಿರವನ್ನು  ಸ್ಥಾಪಿಸಿದ್ದು ,ನಂತರ  ಅವರ ಪುತ್ರ ಸುರೇಶ್ ಪೈಯವರ ನಿರಂತರ ಸೇವೆ,ಸಹಕಾರ,ಪ್ರೋತ್ಸಾಹ ಹಾಗೂ ಭಕ್ತರ ಒಗ್ಗೂಡುವಿಕೆಯಿಂದ ಅಯ್ಯಪ್ಪ ಮಂದಿರದ ಜೀರ್ಣೋದ್ಧಾರವಾಗಿ ಇದೀಗ ಊರ ಪರವೂರ ಭಕ್ತರ ಶ್ರದ್ಧಾ ಕೇಂದ್ರವಾಗಿ ಕಂಗೊಳಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬೆಳುವಾಯಿ ಸೋಮನಾಥ ಕೋಟ್ಯಾನ್ ಅವರು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸಮಿತಿಯ ಗೌರವಾಧ್ಯಕ್ಷರಾದ ಸುರೇಶ್ ಪೈ,ವಿಶ್ವ ಹಿಂದೂ ಪರಿಷತ್ ಮೂಡುಬಿದಿರೆ ಪ್ರಖಂಡದ ಕಾರ್ಯಾಧ್ಯಕ್ಷ ಶ್ಯಾಮ ಹೆಗ್ಡೆ, ಮರಾಠಿ ಸಮಾಜ ಸೇವಾ ಸಂಘ (ರಿ) ಕುಕ್ಕುಡೇಲು ಸಂಚಾಲಕ ಬಿ.ಕೃಷ್ಣ ನಾಯ್ಕ, ಗಣೇಶ ಗುರುಸ್ವಾಮಿ, ಅಣ್ಣಿ ಬಿ ಪೂಜಾರಿ ಅವರು  ಶುಭಾಂಶನೆಗೈದರು.

ಅತೀ ಸುಂದರವಾಗಿ ಮಂದಿರ ನಿರ್ಮಾಣ ಮಾಡಿದ ಸುರಕ್ಷಾ ಕನ್ಸ್ಟ್ರಕ್ಷನ್ ನ ಸುರೇಶ್ ಕುಮಾರ್ ಅವರನ್ನು ಸಮಿತಿಯ ವತಿಯಿಂದ  ಫಲ ಪುಷ್ಪ ,ಹಾರ ಹಾಕಿ ಗೌರವಿಸಿ ಸನ್ಮಾನಿಸಲಾಯಿತು.

ಬೆಳುವಾಯಿ ಭಾಸ್ಕರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ನಂತರ ಪಂಚ ಭಜನಾ ತಂಡಗಳಿಂದ ಪಂಚ  ಭಜನಾ ಮಂಡಳಿ ಮಂಗಲೋತ್ಸವ ಜರುಗಿತು.ಈ ಸಂದರ್ಭದಲ್ಲಿ ಸಾರ್ವಜನಿಕ ಅನ್ನ  ಸಂತರ್ಪಣೆ ನೆರವೇರಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article