ಸರಕಾರಿ ನೌಕರರ ಸಾಂಸ್ಕೃತಿಕ ಸ್ಪಧೆ೯: ಮೂಡುಬಿದಿರೆಯ ಜಾನಪದ ತಂಡ ರಾಜ್ಯಮಟ್ಟಕ್ಕೆ
Saturday, January 24, 2026
ಮೂಡುಬಿದಿರೆ: 2025-26ನೆಯ ಸಾಲಿನ ಕರ್ನಾಟಕ ಸರಕಾರಿ ನೌಕರರಿಗೆ ಆಯೋಜಿಸಲ್ಪಟ್ಟ ವಿವಿಧ ಕ್ರೀಡಾಸ್ಪರ್ಧೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮೂಡುಬಿದಿರೆ ತಾಲೂಕಿನಿಂದ ಭಾಗವಹಿಸಿದ್ದ ಅನಿತಾ ಶೆಟ್ಟಿ ಮೂಡುಬಿದಿರೆ ಕೆಪಿಎಸ್ ಮಿಜಾರು ಪ್ರೌಢಶಾಲೆ, ನಾಗರತ್ನ ಶಿರೂರು ಕೆಪಿಎಸ್ ಮಿಜಾರು ಪ್ರಾಥಮಿಕ ಶಾಲೆ, ಪ್ರಶಾಂತ್ ಆಚಾರ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಳಿಯೂರು ಇವರ ಜಾನಪದ ನೃತ್ಯ ತಂಡವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.
ಸರಕಾರಿ ನೌಕರರ ನಾಟಕ ಸ್ಪರ್ಧೆಯಲ್ಲಿ ಅನಿತಾ ಶೆಟ್ಟಿ ಮೂಡುಬಿದಿರೆ ಇವರು ಸ್ಪರ್ಧಿಸಿದ್ದ ನಾಟಕ "ಯೋಗ ಶಾಪ"ಯಶಸ್ವಿ ನಾಟಕ ತಂಡಗಳೊಂದಿಗೆ ಸ್ಪರ್ಧಿಸಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
ಈ ನಾಟಕಕ್ಕೆ ರಮೇಶ್ ಉಳಯ ಶಿಕ್ಷಕರು ನಿರ್ದೇಶನ ಮಾಡಿದ್ದರು. ತಂಡದಲ್ಲಿ ಪ್ರಶಾಂತ್ ಆಚಾರ್ಯ ಅಳಿಯೂರು ತೇಜಸ್ವಿನಿ ಅಂಬೆಕಲ್ಲು ಇಂದಿರಾ. ಕೆ ಸುರತ್ಕಲ್, ನಯನ ಗೌರಿ ಬಂಟ್ವಾಳ ತಾಲೂಕು, ಹೀಗೆ ಒಟ್ಟು 12 ಸ್ಪರ್ಧಿಗಳು ವಿವಿಧ ತಾಲೂಕುಗಳಿಂದ ಭಾಗವಹಿಸಿದ್ದರು.
