ದುರುದ್ದೇಶದ ವಿಚ್ಛೇದನಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ: ವಕೀಲೆ ರೂಪಾ ಬಲ್ಲಾಳ್

ದುರುದ್ದೇಶದ ವಿಚ್ಛೇದನಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ: ವಕೀಲೆ ರೂಪಾ ಬಲ್ಲಾಳ್

ಪಡುಮಾನಾ೯ಡಿನಲ್ಲಿ ಮಹಿಳಾ ಗ್ರಾಮಸಭೆ


ಮೂಡುಬಿದಿರೆ: ಮಹಿಳೆಯರು ಅಥವಾ ಪುರುಷರು ಮನಸ್ಸಿನ ನೆಮ್ಮದಿಗಾಗಿ ವಿಚ್ಛೇದನಕ್ಕೆ ಅರ್ಜಿಯ ಮೊರೆ ಹೋಗಬೇಕೇ ಹೊರತು ದುರುದ್ದೇಶದಿಂದ ಹೋದರೆ ಕಾನೂನಿನಲ್ಲಿಯೂ ಅವಕಾಶ ಇರುವುದಿಲ್ಲ ಎಂದು ವಕೀಲೆ ರೂಪಾ ಬಲ್ಲಾಳ್ ಹೇಳಿದರು. 


ಅವರು ಶುಕ್ರವಾರ ಪಡುಮಾರ್ನಾಡು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಮಾರ್ನಾಡು ಮತ್ತು ಮೂಡುಮಾರ್ನಾಡು ಗ್ರಾಮದ ಮಹಿಳಾ ಗ್ರಾಮ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾನೂನಿನ ಬಗ್ಗೆ ಮಾಹಿತಿ ನೀಡಿದರು.


ಗ್ರಾಮ ಪಂಚಾಯತ್ ಅಧ್ಯಕ್ಷ ವಾಸುದೇವ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು.  

ಸಿಡಿಪಿಒ ವೀಣಾ ಹೆಗ್ಡೆ ಮಾತನಾಡಿ ಪ್ರಸ್ತುತ ಕಾಘಟ್ಟದ ಮಹಿಳೆಯರು ಸಮಾಜದಲ್ಲಿ ನೀರಿನಂತೆ ಹೊಂದಾಣಿಕೆಯ ಜೀವನ ನಡೆಸಬೇಕು. ಹಾಗೆಯೇ ಮಹಿಳೆಯರ ರಕ್ಷಣೆಗೆ ಇಲಾಖೆ ಇದೆ ಎಂದು ಅವರು ತಾವು ತಪ್ಪು ಮಾಡಿ ಇಲಾಖೆಯನ್ನು ದುರುಪಯೋಗ ಪಡಿಸುವ ಕೆಲಸ ಮಾಡಬಾರದು ಎಂದು ತಿಳಿಸಿದರು. 

ಸನ್ಮಾನ: ನಾಟಿ ವೈದ್ಯೆ ಸುನಂದಾ ಶೆಟ್ಟಿ ಬೇಂಗೂರಿ ಹಾಗೂ ತುಳುನಾಡ ಧಾರ್ಮಿಕ ಹಾಗೂ ಜಾನಪದ ಕಲೆ ದೈವಾರಾಧನೆಯ ಸಂಧಿ ಪಾದ೯ನದಲ್ಲಿ ಸಾಧನೆ ಮಾಡಿದ ಶೋಭಾ ಅಚ್ಚರ ಕಟ್ಟೆ ಅವರನ್ನು ಸನ್ಮಾನಿಸಲಾಯಿತು. 

ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಕರ್ಕೇರಾ, ಸಿ.ಎಸ್. ಕಲ್ಯಾಣಿ ವೇದಿಕೆಯಲ್ಲಿ ಹಾಜರಿದ್ದರು. ಆರೋಗ್ಯ ಇಲಾಖೆಯ ಸಿಬ್ಬಂದಿ ವಿನೋದ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಸಜೀವಿನಿ ಒಕ್ಕೂಟದ ಸದಸ್ಯರು, ಸ್ವ ಸಹಾಯ ಗುಂಪಿನ ಸದಸ್ಯರು, ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಿಳೆಯರು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

 ಪಂಚಾಯತ್ ಸಿಬಂದಿ ನಿಶಾ ಶೆಟ್ಟಿ ಸ್ವಾಗತಿಸಿದರು. ಪಿಡಿಒ ಸಾಯೀಶ ಚೌಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯತ್ ಸಿಬ್ಬಂದಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.  ಗ್ರಂಥಾಲಯ ಮೇಲ್ವಿಚಾರಕಿ ವನಿತಾ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article