ಅಲ್ ಬಿರ್ರ್ ಶಾಲೆಗಳ ವಿದ್ಯಾರ್ಥಿಗಳ ‘ಕಿಡ್ಸ್ ಫೆಸ್ಟ್’
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಅವರು ವಿಡಿಯೋ ಟೆಲಿಕಾಸ್ಟ್ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಯ್ಯಿದ್ ಅಲೀ ತಂಙಳ್ ಕುಂಬೋಳ್ ಅವರು ಧ್ವಜಾರೋಹಣ ನೆರವೇರಿಸಿ ಶಾಲೆಯ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು.
ದ.ಕ.ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್,ಅಲ್ ಬಿರ್ರ್ ಶಾಲೆಗಳ ಜನರಲ್ ಕನ್ವೀನರ್ ಹಾಗೂ ಸಮಸ್ತ ಕೇಂದ್ರ ಮುಶಾವರ ಜೊತೆ ಕಾರ್ಯದರ್ಶಿ ಶೈಖುನಾ ಉಮರ್ ಫೈಝಿ ಮುಕ್ಕಂ, ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ,ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಎ.ಗಫೂರ್,ಮಾಜಿ ಸಚಿವರಾದ ಕೆ.ಅಭಯಚಂದ್ರ, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ,ಸಂಸ್ಥೆಯ ಗೌರವಾಧ್ಯಕ್ಷರಾದ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ, ಶೈಖುನಾ ಸುಲೈಮಾನ್ ಫೈಝಿ ಚುಂಗತ್ತರ,ಇರ್ಷಾದ್ ದಾರಿಮಿ ಅಲ್ ಜಝರಿ ಮಿತ್ತಬೈಲ್, ಅಲ್ ಬಿರ್ರ್ ಆಡಳಿತ ನಿರ್ದೇಶಕ ಡಾ.ಕೆ.ಪಿ.ಮುಹಮ್ಮದ್, ಅಲ್ ಬಿರ್ರ್ ದ.ಕ.ಜಿಲ್ಲಾ ಕೋರ್ಡಿನೇಟರ್ ಅಬ್ದುಲ್ ಶುಕೂರ್ ದಾರಿಮಿ ಕರಾಯ,ಸುಲ್ತಾನ್ ಗೋಲ್ಡ್ ನ ಮ್ಯಾನೇಜರ್ ಡಾ.ಅಬ್ದುಲ್ ರವೂಫ್,ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನ ಮುಖ್ಯಸ್ಥ ರಫೀಕ್ ಮಾಸ್ಟರ್, ಅಲ್ ಬಿರ್ರ್ ಸ್ಕೂಲ್ಸ್ ರಾಜ್ಯ ಉಸ್ತುವಾರಿ ನವಾಝ್ ವಯತ್ತಲ ಮತ್ತಿತರರು ಈ ಸಂದರ್ಭದಲ್ಲಿ ಭಾಗವಹಿಸಿ ಶುಭಹಾರೈಸಿದರು.
ಅಲ್ ಬಿರ್ರ್ ಶಾಲೆಯ ಅಧ್ಯಕ್ಷ ಉಸ್ಮಾನ್ ಅಬ್ದುಲ್ಲಾ,ಉಪಾಧ್ಯಕ್ಷ ರಝಾಕ್ ಸಚ್ಚರಿಪೇಟೆ,ಪ್ರಧಾನ ಕಾರ್ಯದರ್ಶಿ ಅಝೋಝ್ ಮಾಲಿಕ್ ,ಜೊತೆ ಕಾರ್ಯದರ್ಶಿ ಅಬ್ದುಲ್ ಹಮೋದ್ ಉಡುಪಿ,ಕೋಶಾಧಿಕಾರಿ ಯು.ಕೆ.ಇರ್ಫಾನ್,ಟ್ರಸ್ಟಿಗಳಾದ ಅಲ್ತಾಫ್ ಗಂಟಾಲ್ಕಟ್ಟೆ, ಆರಿಫ್ ಬೆಳುವಾಯಿ, ಶಮೀವುಲ್ಲಾ ಅಳಿಯೂರು,ಸ್ವಾಗತ ಸಮಿತಿಯ ಕನ್ವೀನರ್ ಅಬ್ದುಲ್ ರಝಾಕ್ ಮದನಿ,ಕೋಶಾಧಿಕಾರಿ ಅಶ್ರಫ್ ಮರೋಡಿ,ಸದಸ್ಯರಾದ ಅಬ್ದುಲ್ ಗಫೂರ್ ಕೋಟೆಬಾಗಿಲು,ಹಾಜಿ ಅಹ್ಮದ್ ಹುಸೇನ್ ಗಂಟಾಲ್ಕಟ್ಟೆ,ಅಶ್ರಫ್ ದುಗ್ಗೋಡಿ,ಅಬ್ದುಲ್ ಹಮೀದ್ ವಾಲ್ಪಾಡಿ, ಲಿಖಾಯತ್ ಆಲಿ ಮೂಡುಬಿದಿರೆ, ವಿಖಾಯ ಅಧ್ಯಕ್ಷ ಮನ್ಸೂರ್ ಪಡ್ಡಂದಡ್ಕ,ಶಾಲಾ ಪ್ರಾಂಶುಪಾಲರಾದ ಶಾಹಿನಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಡ್ಡೂರು ಶಾಲೆ ಚಾಂಪಿಯನ್:
ಇದೇ ದಿನ ನಡೆದ ದ.ಕ.ಜಿಲ್ಲಾ ಮಟ್ಟದ ಕಿಡ್ಸ್ ಫೆಸ್ಟ್ ನಲ್ಲಿ ಅಡ್ಡೂರಿನ ಅಲ್ ಬಿರ್ರ್ ಶಾಲೆ ಫ್ರೀ ಪ್ರೈಮರಿ ಹಾಗೂ ಪ್ರೈಮರಿ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಪ್ರೈಮರಿ ವಿಭಾಗದಲ್ಲಿ ಪ್ರಥಮ ರನ್ನರ್ ಅಪ್ ಚಾಂಪಿಯನ್ ಆಗಿ ಅಜುಮ್ ಅಲ್ ಬಿರ್ರ್ ಮೂಡುಬಿದಿರೆ ಹಾಗೂ ದ್ವಿತೀಯ ಸ್ಥಾನವನ್ನು ಕೈಕಂಬ ಅಲ್ ಬಿರ್ರ್ ಶಾಲೆ ಪಡೆಯಿತು .ಫ್ರೀ ಪ್ರೈಮರಿ ವಿಭಾಗದಲ್ಲಿ ಕೈಕಂಬ ಮತ್ತು ತೋಡಾರು ಶಾಲೆಗಳು ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆಯಿತು.
ಮುಹಮ್ಮದ್ ಫಾಯಿಝ್ ಫೈಝಿ ಅವರ ಕಿರಾಅತ್ ಮೂಲಕ ಆರಂಭಗೊಂಡ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಅಬ್ದುಲ್ ಸಲಾಮ್ ಬೂಟ್ ಬಝಾರ್ ಸ್ವಾಗತಿಸಿದರು.