ಮಿಜಾರು ಕೆ.ಪಿ.ಎಸ್. ವಿದ್ಯಾಲಯದಲ್ಲಿ ಗ್ರಾಹಕ ಹಿತರಕ್ಷಣಾ ಮಾಹಿತಿ

ಮಿಜಾರು ಕೆ.ಪಿ.ಎಸ್. ವಿದ್ಯಾಲಯದಲ್ಲಿ ಗ್ರಾಹಕ ಹಿತರಕ್ಷಣಾ ಮಾಹಿತಿ


ಮೂಡುಬಿದಿರೆ: ತಾಲೂಕಿನ ಮಿಜಾರು ಕರ್ನಾಟಕ ಪಬ್ಲಿಕ್ ವಿದ್ಯಾಲಯದಲ್ಲಿ ಶುಕ್ರವಾರದಂದು ಗ್ರಾಹಕ ಹಿತರಕ್ಷಣಾ ಮಾಹಿತಿ ಕಾಯ೯ಕ್ರಮ ನಡೆಯಿತು. 

ದ.ಕ.ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜೊತೆ ಕಾರ್ಯದರ್ಶಿ ರಾಯಿ ರಾಜ ಕುಮಾರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ  ಮಾಹಿತಿ ಹಕ್ಕು ಕಾಯಿದೆ, ಗ್ರಾಹಕ ಹಿತ ರಕ್ಷಣಾ ಕಾಯಿದೆ, ಆಯ್ಕೆ, ಮಾಹಿತಿ, ಇತ್ಯಾದಿ ಹಕ್ಕುಗಳ ಮಾಹಿತಿಯನ್ನು ಹಲವಾರು ಉದಾಹರಣೆಗಳೊಂದಿಗೆ ನೀಡಿದರು. ವಸ್ತುಗಳ ಗುಣಮಟ್ಟ, ದಾಖಲೆ ಇಟ್ಟುಕೊಳ್ಳುವ ಅಗತ್ಯಗಳು, ಆಯೋಗಕ್ಕೆ ದೂರು ನೀಡುವ ವಿಧಾನಗಳ, ಪರಿಹಾರ ಪಡೆಯುವ ಕ್ರಮಗಳು ಬಗೆಗೂ ಮಾಹಿತಿಯನ್ನು ನೀಡಿದರು. 

ವಿದ್ಯಾಸಂಸ್ಥೆಯ ಉಪ ಪ್ರಾಂಶುಪಾಲೆ ಪುಷ್ಪ ಅಧ್ಯಕ್ಷತೆ ವಹಿಸಿದ್ದರು. 

ಗ್ರಾಹಕ ಕ್ಲಬ್ ಸಂಯೋಜಕ ಶಿಕ್ಷಕಿ ಜಯಶ್ರೀ , ಇಕೋ ಕ್ಲಬ್ ನ ಸಂಚಾಲಕಿ  ಪವಿತ್ರ ಕುಮಾರಿ  ಉಪಸ್ಥಿತರಿದ್ದರು. ಶಿಕ್ಷಕಿಯರಾದ ವಿದ್ಯಾ ಕಾರ್ಯಕ್ರಮ ನಿರ್ವಹಿಸಿದರು. ಅನಿತಾ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article