ಜಿ. ಪಾಂಡುರಂಗ ಪ್ರಭು ನಿಧನ
Thursday, January 29, 2026
ಮೂಡುಬಿದಿರೆ: ಇಲ್ಲಿನ ಅಲಂಗಾರು ಜಂಕ್ಷನ್ ಬಳಿ ನಿವಾಸಿ ಪ್ರಭು ಕ್ಯಾಂಟೀನ್ ಮಾಲೀಕರು, ಆಮ್ಲೆಟ್ ಪಾಂಡುರಂಗ ಮಾಮ ಎಂದೇ ಜನಾನುರಾಗಿಯಾಗಿದ್ದ ಜಿ.ಪಾಂಡುರಂಗ ಪ್ರಭು (67) ಅಸೌಖ್ಯದಿಂದ ಸ್ವಗೃಹದಲ್ಲಿ ಬುಧವಾರ ನಿಧನ ಹೊಂದಿದರು.
ಗಂಜಿ ಊಟ ಮತ್ತು ಆಮ್ಲೆಟ್ ವ್ಯವಹಾರದಲ್ಲಿ ಅತೀ ಕಡಿಮೆ ದರದಲ್ಲಿ ರುಚಿಕರ ಆಹಾರವನ್ನು ಗ್ರಾಹಕರಿಗೆ ನೀಡುತ್ತಿದ್ದ ಪ್ರಭುಗಳು ಊರ ಮತ್ತು ಪರ ಊರ ಗಣ್ಯ ವ್ಯಕ್ತಿಗಳು ಕೂಡ ಬಂದು ಇಲ್ಲಿ ಆಹಾರ ಸೇವಿಸುತ್ತಿದ್ದರು.ಪತ್ನಿ, ಓರ್ವ ಪುತ್ರ ,ಪುತ್ರಿ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅವರು ಅಗಲಿದ್ದಾರೆ .