ಶಾಸಕಿ ಭಾಗೀರಥಿ ಮುರುಳ್ಯರವರ ಅವಹೇಳನ: ಶಾಸಕ ಕೋಟ್ಯಾನ್ ಆಕ್ರೋಶ
Wednesday, January 7, 2026
ಮೂಡುಬಿದಿರೆ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಅವಹೇಳನವನ್ನು ಖಂಡಿಸಿ ಮೂಲ್ಕಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯತ್ ನಿಂದ ಪ್ರಾರಂಭಿಸಿ ಹಂತ ಹಂತವಾಗಿ ಸಂಘಟನೆಯಲ್ಲಿ ಕೆಲಸ ಮಾಡಿ ಇಂದು ಶಾಸಕ ಸ್ಥಾನಕ್ಕೆರಿರುವ ಸಹೋದರಿ ಭಾಗೀರಥಿ ಮುರುಳ್ಯ ಅವರ ವಿರುದ್ಧ ಈ ರೀತಿಯ ಟೀಕೆ ಸಹಿಸಲಸಾಧ್ಯವಾದುದು.
ರಾಜಕಾರಣದಲ್ಲಿ ಟೀಕೆಗಳು ಸಹಜ ಆದರೆ ಒಬ್ಬರ ಸಾವಿನ ಕುರಿತು ಮಾತನಾಡುವ ಟೀಕೆಗಳು ಸಮಾಜದಲ್ಲಿ ಇಲ್ಲದಾಗಲಿ. ಈ ಟೀಕೆ ಮಾಡಿರುವ ವ್ಯಕ್ತಿಯ ವಿರುದ್ಧ ಕಠಿಣಾತಿ ಕಠಿಣ ಕ್ರಮ ಕೈಗೊಳ್ಳಲೇಬೇಕೆಂದು ಅಗ್ರಹಿಸುತ್ತೇನೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.