ಜ.9-11 ರವರೆಗೆ ಇತಿಹಾಸ ಪ್ರಸಿದ್ಧ ಕಟಪಾಡಿ ದರ್ಗಾ ಉರೂಸ್

ಜ.9-11 ರವರೆಗೆ ಇತಿಹಾಸ ಪ್ರಸಿದ್ಧ ಕಟಪಾಡಿ ದರ್ಗಾ ಉರೂಸ್

ಶಿರ್ವ: ಇತಿಹಾಸ ಪ್ರಸಿದ್ಧ ಉಡುಪಿ ಜಿಲ್ಲೆಯ ಕಟಪಾಡಿ ಜುಮ್ಮಾ ಮಸಿದಿ ಸಮೀಪ ಅಂತ್ಯ ವಿಶ್ರಮಗೊಳ್ಳುತ್ತಿರುವ ಕಟಪಾಡಿ ಅಶೈಕ್ ಫಕೀರ್ ಶಾಹ್ ವಲಿಯುಲ್ಲಾಹಿ ದರ್ಗಾದ ವಾರ್ಷಿಕ ಉರೂಸ್ ಯಾನೆ ಝಿಯಾರತ್ ಕಾರ್ಯಕ್ರಮವು ಜನವರಿ 9 ರಿಂದ 11 ರ ವರೆಗೆ ನಡೆಯಲಿದೆ.

ಜ.9 ರಂದು ಇಶಾ ನಮಾಝಿನ ಬಳಿಕ ಉದ್ಘಾಟನಾ ಸಮಾರಂಭ ಹಾಗೂ ಧಾರ್ಮಿಕ ಪ್ರವಚನ ನಡೆಯಲಿದ್ದು, ಮಲ್ಲಾರು ಖದೀಮ್ ಜಮಾ ಮಸಿದಿ ಇಮಾಂ ಧರ್ಮಗುರುಗಳಾದ ಮೌಲಾನಾ ಮುಫ್ತಿ ಹಾಫಿಝ್ ಮಹ್ಬೂಬ್ ಅಲಿಖಾನ್ ಉದ್ಘಾಟಿಸಲಿದ್ದಾರೆ. ತೈಬಾ ಗಾರ್ಡನ್ ಬಂಗ್ಲಗುಡ್ಡೆ ಯ ಉಸ್ತಾದ್ ಶರೀಫ್ ಸಅದಿ ಕಿಲ್ಲೂರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕಟಪಾಡಿ ಉರೂಸ್‌ನ ಉಸ್ತುವಾರಿಗಳಾದ ಬಿ.ಎಮ್. ಮುಹಿಯ್ಯುದ್ದೀನ್ ಎ.ಆರ್. ಉಡುಪಿ ಅಧ್ಯಕ್ಷತೆ ವಹಿಸಲಿದ್ದು, ಸರಕಾರಿಗುಡ್ಡೆ ಮಸೀದಿ ಖತೀಬರಾದ ಯೂಸೂಫ್ ಝಹ್ರಿ, ಅಚ್ಚಡ ಮಸೀದಿ ಖತೀಬರಾದ ಅಬ್ದುಲ್ ಹಖೀಂ ಸಖಾಫಿ ಉಪಸ್ಥಿತಲಿರುವರು.

ಜನವರಿ 10 ಶನಿವಾರ ಸಂಜೆ ಮಗ್ರಿಬ್ ನಮಾಝಿನ ಬಳಿಕ ಬ್ರಹತ್ ಸಂದಲ್ ಮೆರವಣಿಗೆ ಜರುಗಲಿದೆ. ಆ ನಂತರ ಇಶಾ ನಮಾಝಿನ ಬಳಿಕ ಜಲಾಲಿಯ್ಯ ಮಜ್ಲಿಸ್, ಬುರ್ದಾ ಆಲಾಪನೆ ಹಾಗೂ ಸಮಾರೋಪ ಸಮಾರಂಭ ಜರುಗಲಿದ್ದು, ಇದರ ನೇತ್ರತ್ವವನ್ನು ಅಸ್ಸಯ್ಯದ್ ಕೆ.ಎಸ್. ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್ ವಹಿಸಲಿದ್ದಾರೆ. ಕಟಪಾಡಿ ಉರೂಸ್ ಉಸ್ತುವಾರಿಯಾದ ವೈ.ಎಮ್. ಇಲ್ಯಾಸ್ ಅಧ್ಯಕ್ಷತೆ ವಹಿಸಲಿದ್ದು, ಜುಮ್ಮಾ ಮಸೀದಿ ಕಟಪಾಡಿ ಇದರ ಮುಖ್ಯ ಧರ್ಮಗುರುಗಳಾದ ಅಲ್ಹಾಜ್ ಬಶೀರ್ ಮದನಿ ಮುಖ್ಯ ಉಧ್ಬೋದನೆ ಮಾಡಲಿದ್ದಾರೆ. 

ಅಗ್ರಹಾರ ಮಸಿದಿ ಖತೀಬರಾದ ಅಬ್ದುರ್ರಶೀದ್ ರಝ್ವಿ, ಬಿ.ಎಮ್. ಮುಹಿಯ್ಯುದ್ದೀನ್ ಎ.ಆರ್. ಉಡುಪಿ, ಕೇಂದ್ರ ಮದ್ರಸ ಕಟಪಾಡಿಯ ಸದರ್ ಉಸ್ತಾದ್ ಅಲ್ ವಾರಿಸ್ ಸ್ವಾಲಿಹ್ ಸಖಾಫಿ, ಕಟಪಾಡಿ ಉರ್ದು ಮದ್ರಸ ಅಧ್ಯಾಪಕರಾದ ಮೌಲಾನಾ ಶಕೀಲ್ ಅಹ್ಮದ್ ಅಲೀಮಿ, ಕೇಂದ್ರ ಮದ್ರಸ ಕಟಪಾಡಿಯ ಮುಅಲ್ಲಿಂ ಅಬ್ದುಲ್ ಖಾದರ್ ಸಅದಿ, ಸರಕಾರಿಗುಡ್ಡೆ ಉರ್ದು ಮದ್ರಸ ಅಧ್ಯಾಪಕರಾದ ಅಬ್ದುಲ್ ಅಝೀಝ್ ಶಾಮಿಲ್ ಹಿಶಾಮಿ, ಅಚ್ಚಡ ಮದ್ರಸದ ಸದರ್ ಉಸ್ತಾದ್ ಮುಹಮ್ಮದ್ ಮುಆಝ್ ಸಅದಿ ರಝ್ವಿ, ಸರಕಾರಿಗುಡ್ಡೆ ಮದ್ರಸದ ಸದರ್ ಉಸ್ತಾದ್ ಅಬ್ದುಲ್ ಸತ್ತಾರ್ ಫಾಳಿಲಿ, ಕಟಪಾಡಿ ಮಸೀದಿ ಸಹಾಯಕ ಮುಅಝ್ವಿನ್ ಹುಸೈನರ್ ಕೋಟೆ, ಕಟಪಾಡಿ ಮಸೀದಿ ಕಚೇರಿ ನಿರ್ವಾಹಕರಾದ ಅಬ್ದುಲ್ ರಝಾಕ್ ಶಫಿ ಮತ್ತು ಅನ್ವರ್ ಸಾಹೇಬ್ ಉಪಸ್ಥಿತಲಿರುವರು. ಜನವರಿ 11ರ ಭಾನುವಾರ ಬೆಳಗ್ಗೆ ಮೌಲೂದ್ ಪಾರಾಯಣ ನಡೆಯಲಿದ್ದು, ನಂತರ ಅನ್ನದಾನ ಕಾರ್ಯಕ್ರಮ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article