ಉಜಿರೆ ಗ್ರಾ.ಪಂ. ಸಮಗ್ರ ಒಣತ್ಯಾಜ್ಯ ನಿರ್ವಹಣಾ ಕೇಂದ್ರಕ್ಕೆ ಎಸ್‌ಡಿಎಂ ಪ.ಪೂ. ಕಾಲೇಜು ವಿದ್ಯಾರ್ಥಿಗಳ ಅಧ್ಯಯನ ಪ್ರವಾಸ

ಉಜಿರೆ ಗ್ರಾ.ಪಂ. ಸಮಗ್ರ ಒಣತ್ಯಾಜ್ಯ ನಿರ್ವಹಣಾ ಕೇಂದ್ರಕ್ಕೆ ಎಸ್‌ಡಿಎಂ ಪ.ಪೂ. ಕಾಲೇಜು ವಿದ್ಯಾರ್ಥಿಗಳ ಅಧ್ಯಯನ ಪ್ರವಾಸ


ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ವ್ಯುತ್ಪತ್ತಿ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವ ನೀಡುವ ಉದ್ದೇಶದಿಂದ ಉಜಿರೆ ಗ್ರಾಮ ಪಂಚಾಯತ್‌ಗೆ ಶೈಕ್ಷಣಿಕ ಅಧ್ಯಯನ ಪ್ರವಾಸ ಹಮ್ಮಿಕೊಳ್ಳಲಾಯಿತು. 

ಈ ವೇಳೆ ಗ್ರಾಮೀಣ ಆಡಳಿತ ವ್ಯವಸ್ಥೆ, ಸ್ಥಳೀಯ ಸ್ವರಾಜ್ಯ ಸಂಸ್ಥೆಗಳ ಕಾರ್ಯಪದ್ಧತಿ ಹಾಗೂ ವಿವಿಧ ಜನಕಲ್ಯಾಣ ಯೋಜನೆಗಳ ಜಾರಿಗೆ ಸಂಬಂಧಿಸಿದ ಕ್ಷೇತ್ರಮಟ್ಟದ ಅಧ್ಯಯನಕ್ಕೆ ಭೇಟಿ ಅನುವು ಮಾಡಿಕೊಟ್ಟಿತು.

ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತ್‌ನ ಕಾರ್ಯಚಟುವಟಿಕೆ, ಘನತ್ಯಾಜ್ಯ ವಿಲೇವಾರಿ ಘಟಕ, ಅತ್ತಾಜೆ ಕೆರೆ, ಮಲತ್ಯಾಜ್ಯ ನಿರ್ವಹಣೆ ಹಾಗೂ ಜೈವಿಕಗೊಬ್ಬರ ತಯಾರಿ ಘಟಕ, ಅರಿವು ಡಿಜಿಟಲ್ ಗ್ರಂಥಾಲಯ ಮತ್ತು ಕೂಸಿನ ಮನೆ ಮುಂತಾದ ವಿನೂತನ ಯೋಜನೆಗಳ ಯಶಸ್ವೀ ಕಾರ್ಯನಿರ್ವಹಣೆ ಕುರಿತು ಮಾಹಿತಿ ಹಂಚಿಕೊಂಡರು.

ಉಜಿರೆ ಗ್ರಾಮ ಪಂಚಾಯತ್ ಪಂಚಾಯತ್ ಅಧ್ಯಕ್ಷೆ ಉಷಾಕಿರಣ ಕಾರಂತ್ ಮಾತನಾಡಿ, ಪಂಚಾಯತ್ ವ್ಯಾಪ್ತಿಯ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ, ಸ್ವಚ್ಛ ಭಾರತ ಮಿಷನ್, ಜಲ ಸಂರಕ್ಷಣೆ, ಗೃಹ ನಿರ್ಮಾಣ ಯೋಜನೆ, ಸಾನಿಟೇಷನ್ ಇತ್ಯಾದಿ ಸರ್ಕಾರಿ ಯೋಜನೆಗಳನ್ನು ಗ್ರಾಮ ಮಟ್ಟದಲ್ಲಿ ಹೇಗೆ ಅನುಷ್ಠಾನಗೊಳಿಸಲಾಗುತ್ತಿದೆ ಎಂಬುದನ್ನು ವಿವರವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ. ಹಾಗೂ ವ್ಯುತ್ಪತ್ತಿ ಸಂಘದ ಉಪನ್ಯಾಸಕರ ಸಮ್ಮುಖದಲ್ಲಿ ಗ್ರಾಮ ಪಂಚಾಯತ್ ನಲ್ಲಿ ದಿನನಿತ್ಯದ ಆಡಳಿತ ಕಾರ್ಯವೈಖರಿಯನ್ನು ಕುರಿತು ಚರ್ಚಿಸಿ, ಪಂಚಾಯತ್ ಯಶಸ್ವಿಯಲ್ಲಿ ಯುವ ಜನರ ಪಾತ್ರ, ಮತದಾರರ ಜಾಗೃತಿ, ಸುಸ್ಥಿರ ಅಭಿವೃದ್ಧಿ ಮತ್ತು ಗ್ರಾಮೀಣ ಸ್ವಚ್ಛತೆ, ಸ್ಥಳೀಯ ಆಡಳಿತ ವ್ಯವಸ್ಥೆಯ ಪಾರದರ್ಶಕತೆ, ಜನಸಹಭಾಗಿತ್ವವು ಪ್ರಜಾಪ್ರಭುತ್ವದ ಬಲವರ್ಧನೆಗೆ ಹೇಗೆ ಸಹಕರಿಸುತ್ತದೆ ಎಂಬ ವಿಚಾರಗಳ  ಕುರಿತು ಸಂವಾದ ನಡೆಸಲಾಯಿತು.

ಅಧ್ಯಯನ ಪ್ರವಾಸದ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಜಿರೆ ಗ್ರಾಮ ಪಂಚಾಯತ್ ಆಡಳಿತಕ್ಕೆ ಒಳಪಟ್ಟಿರುವ ಸಮಗ್ರ ಒಣತ್ಯಾಜ್ಯ ನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡಿ, ತ್ಯಾಜ್ಯ ವಿಲೇವಾರಿ ಮತ್ತು ಪರಿಷ್ಕರಣೆಯ ವಿವಿಧ ಹಂತಗಳನ್ನು ಪರಿಶೀಲಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ರವಿ ಕುಮಾರ್ ಬರಮೇಲು, ಸಿಬ್ಬಂದಿಗಳಾದ ನಾಗೇಶ್ ಹಾಗೂ ಉಮೇಶ್ ಉಪಸ್ಥಿತರಿದ್ದರು. ಶೈಕ್ಷಣಿಕ ಅಧ್ಯಯನ ಭೇಟಿಯನ್ನು ಕಾಲೇಜಿನ ವ್ಯುತ್ಪತ್ತಿ ಸಂಘದ ಸಂಯೋಜಕರಾದ ದಿವ್ಯಾ ಕುಮಾರಿ, ಡಾ. ಸಾಜಿದಾ ಹಾಗೂ ಶ್ಯಾಮಿಲಾ ಸಂಯೋಜಿಸಿದರು. ಕಾಲೇಜಿನ ಗ್ರಂಥಪಾಲಕ ಮನೋಹರ್ ಶೆಟ್ಟಿ ಸಹಕರಿಸಿದರು.


ಗ್ರಾ.ಪಂ. ಕಾರ್ಯನಿರ್ವಹಣೆಯನ್ನು ನೇರವಾಗಿ ನೋಡಿ, ಪ್ರಜಾಪ್ರಭುತ್ವವೆಂದರೆ ಅದು ಕೇವಲ ಮತದಾನವಲ್ಲ, ನಿರಂತರ ಭಾಗವಹಿಸುವಿಕೆಯ ಪ್ರಕ್ರಿಯೆ ಎಂದು ಮನದಟ್ಟಾಯಿತು. ಗ್ರಾಮೀಣ ಜನರ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಸರಕಾರ ಏನೆಲ್ಲಾ ಯೋಜನೆಗಳನ್ನು ಕಲ್ಪಿಸಿಕೊಟ್ಟಿದೆ ಎಂಬುದನ್ನು ಅರಿತೆವು. ಸರ್ಕಾರಿ ಯೋಜನೆಗಳು ಕೇವಲ ಪತ್ರಿಕೆಯಲ್ಲಿ ಪ್ರತಿನಿತ್ಯ ಓದುವ ವಿಷಯವಾಗದೆ, ಗ್ರಾಮದ ಜನರ ಸಹಭಾಗಿತ್ವದಿಂದ ಚಾಲನೆಗೆ ಬರುವ ಕ್ರಿಯಾ ತಂತ್ರಗಳು. -ಪ್ರಣವ ಕೃಷ್ಣ ಕೆ.ಜಿ.(ದ್ವಿತೀಯ ಕಲಾ ವಿದ್ಯಾರ್ಥಿ).

ಮೌಲ್ಯ ಶಿಕ್ಷಣ ಮತ್ತು ನಾಗರಿಕತೆ, ಸಾಮಾಜಿಕ ಜವಾಬ್ದಾರಿ, ಸ್ಥಳೀಯ ಸಂಪನ್ಮೂಲಗಳ ಸಂರಕ್ಷಣೆ, ಗ್ರಾಮಸಭೆಯಲ್ಲಿ ಯುವಜನರ ಪಾತ್ರ ಇತ್ಯಾದಿ ವಿಷಯಗಳ ಕುರಿತು  ಭೇಟಿ ಜಾಗೃತಿ ಮೂಡಿಸಿತು. ಮುಂದಿನ ದಿನಗಳಲ್ಲಿ ಮಾದರಿ ಯುವ ಗ್ರಾಮಸಭೆ, ಯುವ ನಾಯಕತ್ವ ತರಬೇತಿ ಇತ್ಯಾದಿ ಚಟುವಟಿಕೆಯಲ್ಲಿ ಭಾಗವಹಿಸಬೇಕೆಂಬ ಪ್ರೇರಣೆ ಮೂಡಿಸಿತು. ಈ ಅಧ್ಯಯನ ಪ್ರವಾಸಕ್ಕೆ ಅನುವು ಮಾಡಿಕೊಟ್ಟ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಮತ್ತು ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗಕ್ಕೆ ಧನ್ಯವಾದಗಳು. -ನಿಜಾ ಕುಲಾಲ್(ದ್ವಿತೀಯ ಕಲಾ ವಿದ್ಯಾರ್ಥಿನಿ)

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article