ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸೋನಾ ಅಡ್ಕಾರ್‌ಗೆ ತೃತೀಯ ಸ್ಥಾನ
ಸ್ಪರ್ಧೆಯಲ್ಲಿ ಭಾಗವಹಿಸಿ ಸುಳ್ಯಕ್ಕೆ ಆಗಮಿಸಿದ ಸಂದರ್ಭ ಸುಳ್ಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಅವರನ್ನು ಸುಳ್ಯ ಗೌಡರ ಯುವ ಸೇವಾ ಸಂಘ, ನಗರ ಘಟಕ, ಮಹಿಳಾ ಘಟಕ, ಯುವ ಘಟಕ, ಸುಳ್ಯ ಲಯನ್ಸ್ ಕ್ಲಬ್, ಜೆಸಿ ವತಿಯಿಂದ ಸ್ವಾಗತಿಸಿ ಸನ್ಮಾನಿಸಲಾಯಿತು.
ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ, ಲಯನ್ಸ್ ಕ್ಲಬ್ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಜೆಸಿ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ಮತ್ತಿತರರು ಸೋನಾ ಅಡ್ಕಾರ್‌ರನ್ನು ಸನ್ಮಾನಿಸಿದರು. ಎಂ.ಜಿ.ಎಂ. ಶಾಲಾ ಸಂಚಾಲಕ ದೊಡ್ಡಣ್ಣ ಬರೆಮೇಲು ಅಭಿನಂದಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶರತ್ ಅಡ್ಕಾರು-ಶೋಭಾ ದಂಪತಿ ಹಾಗೂ ಸೋನಾ ಅಡ್ಕಾರ್‌ರ ಶಿಕ್ಷಕಿ ಶೋಭಾರನ್ನು ಗೌರವಿಸಲಾಯಿತು.
ನಗರ ಗೌಡ ಸಂಘದ ಅಧ್ಯಕ್ಷ ರಾಕೇಶ್ ಕುಂಟಿಕಾನ, ಕಾರ್ಯದರ್ಶಿ ರಾಧಾಕೃಷ್ಣ ಕುಂತಿನಡ್ಕ, ಯುವ ಗೌಡ ಸಂಘದ ಅಧ್ಯಕ್ಷ ಪ್ರೀತಮ್ ಡಿ.ಕೆ., ಎಸ್.ಆರ್. ಸೂರಯ್ಯ ಸೂಂತೋಡು, ಜಯರಾಮ ದೇರಪ್ಪಜ್ಜನಮನೆ, ಸುಪ್ರೀತ್ ಮೋಂಟಡ್ಕ, ಎಸ್.ಆರ್. ಹೂವಯ್ಯ ಸೂಂತೋಡು, ಜಯಂತ್ ರೈ ಗೋಂಟಡ್ಕ, ಹರಿಪ್ರಕಾಶ್ ಅಡ್ಕಾರ್, ಐ.ಬಿ. ಚಂದ್ರಶೇಖರ್, ತಿಮ್ಮಯ್ಯ ಎಂ.ಎಂ., ರಾಮಕೃಷ್ಣ ರೈ, ಬಲರಾಜ್ ದೇಂಗೋಡಿ, ಶ್ರೀನಿವಾಸ ಮಾಸ್ತರ್ ಹಳೆಗೇಟು, ಜತ್ತಪ್ಪ ರೈ ಸುಳ್ಯ, ಮಲ್ಲಿಕಾರ್ಜುನ ಪ್ರಸಾದ್, ಆನಂದ ಪೂಜಾರಿ ಸುಳ್ಯ, ನಿರಂಜನ್ ಎಂ.ಡಿ., ಬೂಡು ರಮೇಶ್ ಶೆಟ್ಟಿ, ರಾಮಕೃಷ್ಣ ಆಲಂಕಲ್ಯ, ರಿಯಾಜ್ ಕಟ್ಟೆಕಾರ್, ಶೈಲೇಶ್ ಅಂಬೆಕಲ್ಲು, ಲೋಕೇಶ್ ಅಂಬೆಕಲ್ಲು, ಚೈತ್ರಾ ದಿನೇಶ್ ಅಡ್ಕಾರ್, ಜಯಲಕ್ಷ್ಮೀ, ಅಶ್ವಿನಿ ಅಂಬೆಕಲ್ಲು, ಚಿತ್ರಾಲೇಖ ಮಡಪ್ಪಾಡಿ, ಹರ್ಷ ಕರುಣಾಕರ, ಮೀನಾಕ್ಷಿ ರಾಮಕಜೆ, ವೀಣಾ ಹರಿಪ್ರಕಾಶ್, ಅಬ್ದುಲ್ ಖಾದರ್ ಮತ್ತಿತರರು ಉಪಸ್ಥಿತರಿದ್ದರು.
ಸೋನಾ ಯೋಗಾಭ್ಯಾಸವನ್ನು ಯೋಗಗುರುಗಳಾದ ನವೀನ್ ಪುತ್ತೂರು, ಸ್ನೇಹಮಯಿ ವಿವೇಕಾನಂದ ಯೋಗಕೇಂದ್ರದ ನವೀನ್ ಕಡೂರು, ರಂಜಿತ್, ವಿಷ್ಣು, ಕಿಶೋರ್ ಮತ್ತು ತಂಡದವರಿಂದ ತರಬೇತಿ ಪಡೆದಿದ್ದರು.