ವಿವಿಧ ಯೋಜನೆಗಳಿಗೆ ಗ್ರಾಮ ಪಂಚಾಯತಿಗೆ 4.46 ಎಕ್ರೆ ಜಮೀನು ಹಸ್ತಾಂತರ

ವಿವಿಧ ಯೋಜನೆಗಳಿಗೆ ಗ್ರಾಮ ಪಂಚಾಯತಿಗೆ 4.46 ಎಕ್ರೆ ಜಮೀನು ಹಸ್ತಾಂತರ


ಬಂಟ್ವಾಳ: ತುಂಬೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ತುಂಬೆ ಗ್ರಾಮದ ಮಲ್ಲಿ ಎಂಬಲ್ಲಿ ವಿವಿಧ ಯೋಜನೆಗಳಿಗೆ 4.46 ಎಕ್ರೆ ಜಮೀನನ್ನು ಮಂಗಳೂರು ಸಹಾಯಕ ಕಮೀಷನರ್ ಅವರ ಆದೇಶದನ್ವಯ ಮಂಜೂರಾತಿ ಪಡೆದು ಗ್ರಾಮ ಆಡಳಿತಾಧಿಕಾರಿಯವರು ಗ್ರಾಮ ಪಂಚಾಯತ್‌ಗೆ ಹಸ್ತಾಂತರಿಸಿದರು.

ತುಂಬೆ ಗ್ರಾಮದ ಮಲ್ಲಿ ಎಂಬಲ್ಲಿನ ಸರ್ವೇ ನಂಬ್ರ 9/2 ರಲ್ಲಿ ಒಟ್ಟು 4.46 ಎಕ್ರೆ ಜಮೀನಿನ ಪೈಕಿ 3.3.30 ಎಕ್ರೆ ಕ್ರೀಡಾಂಗಣ, 0.34 ಎಕ್ರೆ ಒಣತ್ಯಾಜ್ಯ ಘಟಕ, 0.40 ಎಕ್ರೆ ಗ್ರಾಮ ಆಡಳಿತಾಧಿಕಾರಿ ವಸತಿ ಗೃಹ, 0.42 ಎಕ್ರೆ ಗ್ರಾಮ ಪಂಚಾಯತ್ ಸಿಬ್ಬಂದಿಗಳ ವಸತಿ ಗೃಹಕ್ಕೆ ಕಾದಿರಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಕೇಶವ, ಉಪಾಧ್ಯಕ್ಷ ಗಣೇಶ್ ಸಾಲ್ಯಾನ್, ಮಾಜಿ ಅಧ್ಯಕ್ಷ ಪ್ರವೀಣ್ ಬಿ. ತುಂಬೆ, ಪಂಚಾಯತ್ ಸದಸ್ಯರಾದ ಹೇಮಾಲತ, ಅರುಣ್ ಕುಮಾರ್, ಕಿಶೋರ್, ಮಹಮದ್ ಝಹೂರ್, ಅಬ್ದುಲ್ ಅಝೀಜ್, ಇಬ್ರಾಹಿಂ, ಶಶಿಕಲಾ, ಮುನೀರಾ, ಅತಿಕ ಬಾನು, ಜಯಂತಿ ಶ್ರೀಧರ, ಜಯಂತಿ ನಾಗೇಶ್, ಗ್ರಾಮದ ಪ್ರಮುಖರಾದ ಇರ್ಫಾನ್, ತುಂಬೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶಿವುಲಾಲ್ ಚವ್ಹಾಣ್, ಲೆಕ್ಕ ಸಹಾಯಕಿ ಚಂದ್ರಕಲಾ ಜಿ, ಸಿಬ್ಬಂದಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article