ಶ್ರೀ ಕಾರಿಂಜೇಶ್ವರ ದೇವಸ್ಥಾನ ಜಾತ್ರೋತ್ಸವ, ಶಿವ-ಪಾರ್ವತಿ ಭೇಟಿ

ಶ್ರೀ ಕಾರಿಂಜೇಶ್ವರ ದೇವಸ್ಥಾನ ಜಾತ್ರೋತ್ಸವ, ಶಿವ-ಪಾರ್ವತಿ ಭೇಟಿ


ಬಂಟ್ವಾಳ: ಇತಿಹಾಸ ಪ್ರಸಿದ್ಧ ಭೂಕೈಲಾಸ ಪ್ರತೀತಿಯ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ, ಜಾತ್ರೋತ್ಸವ ಪ್ರಯಕ್ತ ಸೋಮವಾರ ಮಧ್ಯರಾತ್ರಿ ವಿಶೇಷ ಕಾರ್ಯಕ್ರಮದಲ್ಲೊಂದಾದ ಶ್ರೀ ಪಾರ್ವತಿ-ಪರಮೇಶ್ವರರ ಭೇಟಿ ನಡೆಯಿತು.

ಕ್ಷೇತ್ರದ ಅರ್ಚಕರಾದ ಮಿಥುನ್ ರಾಜ್ ನಾವಡ ಮತ್ತು ಜಯಶಂಕರ ಉಪಾಧ್ಯಾಯ ಹಾಗೂ ಶ್ಯಾಮ ಉಡುಪ ಅವರ ಸಹಕಾರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ರಾತ್ರಿ ಬಲ್ಲೋಡಿ ಮಾಗಣೆ ಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಆಗಮಿಸಿತು. ಸಂಜೆ ತಾಳಮದ್ದಳೆ, ಮಕ್ಕಳಿಂದ ಯಕ್ಷಗಾನ ನಡೆಯಿತು. ರಾತ್ರಿ ಜಾತ್ರೋತ್ಸವದಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಪಾರ್ವತಿ-ಪರಮೇಶ್ವರ ದೇವರ ಭೇಟಿಯ ದೃಶ್ಯವನ್ನು ಸಾವಿರಾರು ಭಕ್ತಾದಿಗಳು ಕಣ್ತುಂಬಿಕೊಂಡರು. ಮಂಗಳವಾರ ಬೆಳಗ್ಗೆ ಶಯನೋತ್ಸವ ಕವಾಟ ಬಂಧನ, ರಥೋತ್ಸವ, ಪ್ರಸಾದ ವಿತರಣೆ ನಡೆಯಿತು.

ಮಾಜಿ ಸಚಿವ ರಮಾನಾಥ ರೈ, ಜಿ.ಪಂ. ಮಜಿ ಸದಸ್ಯ ಪದ್ಮಶೇಖರ ಜೈನ್, ಬೂಡಾ ಅಧ್ಯಕ್ಷ ಬೇಬಿಕುಂದರ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೀರೇಂದ್ರ ಬಿ. ಅಮೀನ್, ಗ್ರಾಮಣಿ ಗಣೇಶ ಮುಚ್ಚಿನ್ನಾಯ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರೇಮನಾಥ ಪೀರ್ಯಗುತ್ತು, ಉದಯ ನಾಯಕ್ ಮಾಂಗಾಜೆ, ದಯಾನಂದ ಶೆಟ್ಟಿ ಅಮೈ, ಪ್ರಶಾಂತ ನಾಯ್ಕ ಕೆದ್ದಳಿಕೆ, ಜನಾರ್ದನ ಆಚಾರ್ಯ ಬಾಳ್ತಬೈಲ್, ಧನಲಕ್ಷ್ಮಿ ಬಂಗೇರ, ರಾಧಾ ಆಚಾರ್ಯ, ಕ್ಷೇತ್ರದ ಮ್ಯಾನೇಜರ್ ವಿನಯ ಕುಮಾರ್, ಭಕ್ತಾಧಿಗಳು ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article