ಹಿಂದೂ ಸಮಾಜ, ಸಂಸ್ಕೃತಿ ಅವಿನಾಶಿಯಾಗಿ ಎದ್ದು ನಿಂತಿದೆ: ಶ್ರೀ ಗುರುದೇವಾನಂದ ಸ್ವಾಮೀಜಿ
ಹಿಂದೂ ಸಂಗಮ ಆಯೋಜನ ಸಮಿತಿ ವಿಟ್ಲ ತಾಲೂಕಿನ ಸಜೀಪ ಮಂಡಲದ ವತಿಯಿಂದ ಸಜೀಪ ಮೂಡ ಸಜೀಪ ಮುನ್ನೂರು ಗ್ರಾಮದ ಸಂಯುಕ್ತ ಆಶ್ರಯದಲ್ಲಿ ಸುಭಾಷ್ ನಗರದ ಬೇಂಕ್ಯದಲ್ಲಿ ನಡೆದ ಹಿಂದೂ ಸಂಗಮದಲ್ಲಿ ಅವರು ಅಶೀರ್ವಚನಗೈದು ನಮ್ಮ ಭವ್ಯ ಭಾರತವು ಜಗತ್ತಿನಲ್ಲಿ ತನ್ನ ವಿಶ್ವಾಸವನ್ನು ಹೆಚ್ಚಿಸುತ್ತಿದೆ ಎಂದರು.
ದಿಕ್ಸೂಚಿ ಭಾಷಣಗೈದ ಪ್ರವೀಣ್ ಸರಳಾಯ ಮಾತನಾಡಿ, ಹಿಂದೂ ಕೌಟುಂಬಿಕ ಮೌಲ್ಯಗಳ ಪುನರ್ಜೀವನ, ಸಾಮಾಜಿಕ ಸಾಮರಸ್ಯದ ಭಾವ ಜಾಗೃತಿ, ಪರಿಸರ ಸಂರಕ್ಷಣೆ,ಸ್ವದೇಶಿ ಜೀವನ ಶೈಲಿ, ನಾಗರಿಕ ಕರ್ತವ್ಯದ ಪಾಲನೆ ಕುರಿತಾಗಿ ವಿವರಿಸಿದರು.
ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಧರ್ಮದ ಅಭಿಮಾನವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಧರ್ಮದ ರಕ್ಷಣೆ ಮಾಡುವವರನ್ನು ಧರ್ಮ ಕಾಪಾಡುತ್ತದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ನಿರತೆ ಬೇಬಿ ಅವರು ಕುಟುಂಬದಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು.
ಇದಕ್ಕು ಮೊದಲು ಗೋಪೂಜೆ ನೆರವೇರಿಸಲಾಯಿತು. ಬೊಕ್ಕಸ ಶಿವರಂಜಿನಿ ಕಲಾತಂಡದಿಂದ ಭಾವಗೀತೆ ಹಾಗೂ ಭರತನಾಟ್ಯ ಕಾರ್ಯಕ್ರಮ ನಢಯಿತು. ಸಜಿಪಮುನ್ನೂರು ಯುವಕ ಸಂಘದಿಂದ ಬೇಂಕ್ಯ ವರೆಗೆ ಭವ್ಯವಾದ ಶೋಭಾ ಯಾತ್ರೆ ನಢಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಸ್ಕ್ಯಾಡ್ಸ್ ಅಧ್ಯಕ್ಷ ಕೆ. ರವೀಂದ್ರ ಕಂಬಳಿ, ಬಿಜೆಪಿ ಮುಖಂಡ ಎಸ್. ಶ್ರೀಕಾಂತ್ ಶೆಟ್ಟಿ, ಜಯಪ್ರಕಾಶ್ ಪೆರ್ವ.ದಾಮೋದರ ಬಿ.ಎಂ. ಮತ್ತಿತರರು ಉಪಸ್ಥಿತರಿದ್ದರು.