ಬಿ.ಸಿ. ರೋಡಿನಲ್ಲಿ ಹಿಂದೂ ಸಂಗಮ

ಬಿ.ಸಿ. ರೋಡಿನಲ್ಲಿ ಹಿಂದೂ ಸಂಗಮ


ಬಂಟ್ವಾಳ: ಹಿಂದು ಸಂಗಮ ಆಯೋಜನಾ ಸಮಿತಿ ವತಿಯಿಂದ ಬಿ.ಸಿ.ರೋಡಿನ ಮಹಾಕಾಳಿಬೆಟ್ಟು ಮೈದಾನದಲ್ಲಿ ಭಾನುವಾರ ಸಂಜೆ ಹಿಂದು ಸಂಗಮ ಕಾರ್ಯಕ್ರಮ ನಡೆಯಿತು.

ಆರಂಭದಲ್ಲಿ ಶಂಖ, ಕಲಶ, ಭಾರತಮಾತೆಯ ಭಾವಚಿತ್ರದ ವಾಹನ, ವೀರ ಪುರುಷರ ವೇಷ, ಚೆಂಡೆ, ಹುಲಿವೇಷ, ಗೊಂಬೆ, ಕುಣಿತ ಭಜನೆಯನ್ನು ಒಳಗೊಂಡ ಆಕರ್ಷಕ ಶೋಭಾಯಾತ್ರೆ ಕೈಕಂಬದಿಂದ ಕಾರ್ಯಕ್ರಮ ನಡೆಸುವ ವೇದಿಕೆವರೆಗೆ ನಡೆಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಡ್ ಉಳಿಪ್ಪಾಡಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ರಾಷ್ಟ್ರೀಯ ಸ್ವಯಂಸೇವಾ ಸಂಘದ ಮಂಗಳೂರು ವಿಭಾಗ ಸಹಸೇವಾ ಪ್ರಮುಖ್ ಡಾ. ಮನೋಜ್ ಸುಳ್ಯ ಮಾತನಾಡಿ, ಹಿಂದು ಅಂದರೆ ಭಾರತದ ಅಸ್ಮಿತೆ, ಅದನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಾವು ಯಾವ ರೀತಿ ಜೀವನ ಮಾಡಬೇಕು ಎಂಬುದನ್ನು ಹಿಂದು ಸಂಸ್ಕೃತಿ ಕಲಿಸುತ್ತದೆ. ಹಿಂದು ಎನ್ನಲು ಕೀಳರಿಮೆ ಬೇಡ. ನಮ್ಮ ಆತ್ಮವಿಸ್ಮೃತಿಯನ್ನು ತೊಡೆದುಹಾಕಬೇಕಾಗಿದೆ. ಸಾಮರಸ್ಯದ ಸಹಬಾಳ್ವೆ, ಪರಿಸರದ ಕಾಳಜಿ ಸಹಿತ ಜಾಗೃತಿ ನಮ್ಮಲ್ಲಿರಬೇಕಾಗಿದೆ ಎಂದರು.

ಈ ಸಂದರ್ಭ ಆಯೋಜನಾ ಸಮಿತಿ ಗೌರವಾಧ್ಯಕ್ಷ ಐತಪ್ಪ ಆಳ್ವ ಸುಜೀರ್ ಗುತ್ತು ಶುಭ ಹಾರೈಸಿದರು. 

ಹಿಂದು ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಸತೀಶ್ ಭಂಡಾರಿ ಕುಳತ್ತಬೆಟ್ಟು, ಶ್ರೀ ರಕೇಶ್ವರಿ ದೇವಿ ದೇವಸ್ಥಾನ ಅಧ್ಯಕ್ಷ ವಿಶ್ವನಾಥ ಬಿ, ಶ್ರೀ ಚಂಡಿಕಾಪರಮೇಶ್ವರಿ ದೇವಸ್ಥಾನ ಅಧ್ಯಕ್ಷ ಲೋಕನಾಥ ಶೆಟ್ಟಿ, ಕುಂಭೋದರಿ ದೇವಿ ದೇವಸ್ಥಾನ ಕುಲಾಲರ ಮಠ ಟ್ರಸ್ಟಿ ಯೋಗೀಶ್ ಮಠ, ಸಾಮಾಜಿಕ ಮುಖಂಡ ರಮೇಶ್ ನಾಯಕ್, ಹಿಂದು ರುದ್ರಭೂಮಿ ಸಮಿತಿ ಅಧ್ಯಕ್ಷ ದುರ್ಗಾದಾಸ್ ಶೆಣೈ, ಶ್ರೀ ರಾಮ ಭಜನಾ ಮಂದಿರ ಮೈರಾನ್ ಪಾದೆ ಅಧ್ಯಕ್ಷ ಸಂತೋಷ್ ಮೈರಾನ್ ಪಾದೆ, ಬಿ.ಸಿ.ರೋಡ್ ಅಜ್ಜಿಬೆಟ್‌ಉವಿನ ವಿದ್ವಾನ್ ಮಹೇಶ್ ಭಟ್, ಅಲೆತ್ತೂರು ಶ್ರೀ ಧೂಮಾವತಿ ಬಂಟ ಪಂಜುರ್ಲಿ ದೈವಸ್ಥಾನದ ಪರಿಚಾರಕ ಬಾಬು ಗಟ್ಟಿ, ಕಿರಣ್ ಮಹಾಕಾಳಿಬೆಟ್ಟು, ಪ್ರಮುಖರಾದ ಸುಗುಣ ಕಿಣಿ, ಉಮೇಶ್ ಎಲ್, ನಾಯಕ್, ಬಿ.ಮೂಡ ಮಂಡಲ ಕಾರ್ಯವಾಹ ಗಣೇಶ್ ಕಾಮಾಜೆ ಉಪಸ್ಥಿತರಿದ್ದರು.

ಈ ವೇಳೆ ವಾರಿಜಾ ಆಚಾರ್ತಿ, ದಾಮೋದರ ಸಂಚಯಗಿರಿ, ರಮೇಶ್ ಶೆಣೈ ಅವರಿಗೆ ಗೌರವಾರ್ಪಣೆ ನಡೆಯಿತು. ಲಕ್ಷ್ಮಣ ಅಗ್ರಬೈಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮವಿಕಾಸ ಗತಿವಿಧಿ ತಾಲೂಕು ಗೋಸೇವಾ ಪ್ರಮುಖ್ ಸತೀಶ್ ಪಲ್ಲಮಜಲು ವಂದನಾರ್ಪಣೆ ನೆರವೇರಿಸಿದರು. ರಮ್ಯಾ ಕಾರ್ಯಕ್ರಮ ನಿರ್ವಹಿಸಿದರು. ವರ್ಷಾ ಅಜ್ಜಿಬೆಟ್ಟು ವೈಯಕ್ತಿಕ ಗೀತೆ ಹಾಡಿದರು. ಭಾಸ್ಕರ ದಾಸ್ ಮತ್ತು ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article