ಕಾವಳಮೂಡೂನಲ್ಲಿ ಹಿಂದೂ ಸಂಗಮ
ಮಂಗಳೂರು ಇಸ್ಕಾನ್‌ನ ನಕುಲ ಕೃಷ್ಣ ದಾಸ್ ಅವರು ಮಾತನಾಡಿ, ಸತ್ ಗ್ರಂಥ ಪಠಣದಿಂದ ಸಮಾಜದ ಉನ್ನತಿ ಸಾಧ್ಯ, ಸನಾತನ ಧರ್ಮವು ಸಾವಿರಾರು ವರ್ಷಗಳು ಬದುಕಿದ ಸ್ಥಿತಿಯನ್ನು ಗೀತೆಯು ಸರಳವಾಗಿ ತಿಳಿಸುತ್ತದೆ ಎಂದರು.
ಮಂಗಳೂರು ಗ್ರಾಮಂತರ ಜಿಲ್ಲೆಯ ಆರ್‌ಎಸ್‌ಎಸ್ ಕಾರ್ಯವಾಹರಾದ ನಾಗೇಶ್ ಕುಂಪಲ ಅವರು ದಿಕ್ಸೂಚಿ ಭಾಷಣಗೈದು ಹಿಂದು ರಾಷ್ಟ್ರದ ಪುನರುತ್ಥಾನವೇ ಸಂಘದ ಪ್ರಧಾನ ಗುರಿಯಾಗಿದೆ. ಮುಂದಿನ ದಿನದಲ್ಲಿ ಪ್ರತಿ ಮನೆಯಲ್ಲು ಸಮಾಜಮುಖಿ ಚಿಂತನೆ ಅಗಬೇಕಿದೆ ಎಂದರು.
ಅತಿಥಿಯಾಗಿದ್ದ ರಶ್ಮಿ ಸಂದೇಶ್ ರೈ ಮಧ್ವಗುತ್ತು ಮಾತನಾಡಿ, ಮಹಿಳೆ ಗೌರವಕ್ಕೆ ಪಾತ್ರರಾಗುವಳೋ ಅಲ್ಲಿ ಸಮೃದ್ದಿ ನೆಲೆಸುತ್ತದೆ. ತಾಯಿ ಜಗತ್ತಿನ ಮೊದಲ ಗುರುವಾಗಿದ್ದು, ಇಲ್ಲಿ ತಾಯಿ ಪಾತ್ರ ಅಮೂಲ್ಯವಾಗಿದೆ. ವೈಧಿಕ ಕಾಲದಿಂದಲು ಮಾತೆಯರು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ಹಿಂದೂ ಸಂಗಮ ಕಾವಳ ಮೂಡೂರು ಮಂಡಲದ ಸಂಯೋಜಕ ಚಂದ್ರ ಶೇಖರ ಶೆಟ್ಟಿ ಪುಳಿಮಜಲು ಸ್ವಾಗತಿಸಿದರು. ಪ್ರಮೋದ್ ಕುಮಾರ್ ರೈ ಕಾಡಬೆಟ್ಟು ಪ್ರಸ್ತಾವಿಕವಾಗಿ ಮಾತನಾಡಿದರು. ಉಮೇಶ್ ವಂದಿಸಿ, ಜಯಪ್ರಸನ್ನ ನಿಡ್ವಾಳ, ಕೀರ್ತಿ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.