ಜ್ಞಾನದ ಬೆಳಕಿನಿಂದ ಬೆಳಗುವ ಭೂಮಿ ಭಾರತ: ದಾಮೋದರ ಶರ್ಮಾ

ಜ್ಞಾನದ ಬೆಳಕಿನಿಂದ ಬೆಳಗುವ ಭೂಮಿ ಭಾರತ: ದಾಮೋದರ ಶರ್ಮಾ


ಮಂಗಳೂರು: ಜ್ಞಾನದ ಬೆಳಕಿನಿಂದ ಬೆಳಗುವ ಭೂಮಿ ಭಾರತ. ವೇದ ಅಂದ್ರೆ ಮಂತ್ರ ಅಲ್ಲ ಅಗಾಧವಾದ ಋಷಿ ಪರಂಪರೆಯಿಂದ ಜ್ಞಾನ ರಾಶಿ. ಇದು ಇರುವುದು ಭಾರತದಲ್ಲಿ ಮಾತ್ರ ಎಂದು ಖ್ಯಾತ ವಾಗ್ಮಿ ದಾಮೋದರ ಶರ್ಮಾ ಹೇಳಿದರು.

ಫೆ.1 ರಂದು ಮಣ್ಣಗುಡ್ಡೆ ಹಿಂದೂ ಸಂಗಮ ಮಂಗಳೂರಿನ ಉರ್ವಾ ಕೆನರಾ ಹೈ ಸ್ಕೂಲ್ ಗ್ರೌಂಡ್ಸ್‌ನಲ್ಲಿ ನಡೆದ ತಮ್ನ ಪ್ರಧಾನ ಭಾಷಣದಲ್ಲಿ ಹೇಳಿದರು.

ಸಮಗ್ರ ಜ್ಞಾನ ಪಡಕೊಂಡ ದೇಶ ನಮ್ಮ ಭಾರತ ಮಾತ್ರ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಷ್ಟ್ರದ ಉದ್ದೀಪನ ಕೆಲಸಮಾಡಿ ಕೊಂಡು ಬಂದಿದೆ. ಭಾರತ ಮಾತೆಯ ಚಿತ್ರ ಪ್ರತೀ ಮನೆಯಲ್ಲೂ ಇರಿಸಬೇಕು. ಪ್ರತೀ ದಿನ ದೇವರಿಗೆ ನಮಿಸುತ್ತಾ ತಾಯಿ ಭಾರತಾಂಬೆಗೂ ನಮಿಸಬೇಕು. ರಾಮ ಜಾನಕೀ ಸಾಧು ಸಂತರು ಸಂಚರಿಸಿದ ಈ ಪುಣ್ಯ ಭೂಮಿ ಯಲ್ಲಿ ಜನಿಸಿರುವ ನಾವು ಶ್ರೇಷ್ಠರು. ಮಾತೃ ದೇವೋಭವ ಎಂದು ನಮ್ಮ ಹೆತ್ತ ತಾಯಿಗೆ ಮಾತ್ರವಲ್ಲ ಅತ್ಯಂತ ಪುಣ್ಯಭೂಮಿ ಭಾರತದಲ್ಲಿ ಜನಿಸಿದ ನಾವು ತಾಯಿ ಭಾರತಾಂಬೆಗೂ ಅನುದಿನವೂ ವಂದಿಸಬೇಕು. ನಮ್ಮ ಮಕ್ಕಳಿಗೆ ಸನಾತನ ಧರ್ಮದ ಕಲೆಗಳನ್ನು ಬಾಲ್ಯದಿಂದಲೇ ಕಲಿಸಬೇಕು ದ್ವೇಷ ಸಾಧಿಸುವ ಸಂಸ್ಕೃತಿ ನಮ್ಮದಲ್ಲ ಎಲ್ಲಾ ಜಾತಿ ಸಂಸ್ಕೃತಿ ಗಳನ್ನು ಪ್ರೀತಿಸುವ ಸಂಸ್ಕೃತಿ ನಮ್ಮದು. ಹೀಗೆ ತಾಯಿ ಭಾರತಾಂಬೆಯ ವಿಚಾರ ಧಾರೆಗಳನ್ನು ಸವಿಸ್ತಾರ ಎಂದರು.

ಕಾರ್ಯಕ್ರಮದ ಮೊದಲು ಮಣ್ಣಗುಡ್ಡೆ ಗುರ್ಜಿ ಯಿಂದ ಕೆನರಾ ಹೈ ಸ್ಕೂಲ್ ಗ್ರೌಂಡ್ಸ್‌ವರೆಗೆ ಭಾರತದ ಇತಿಹಾಸ ಸಾರುವ ವೈಭವದ ಮೆರವಣಿಗೆ ಸಾಗಿತು. ನಂತರ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.

ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಮಾಜಿ ಎರಡನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷಚಾರಣೆ ಪ್ರಯುಕ್ತ ನಡೆಯುವ ಹಿಂದೂ ಸಂಘಮ ಕಾರ್ಯಕ್ರಮದ ಔಚಿತ್ಯವನ್ನು ಹೇಳಿ, ರಾಷ್ಟ್ರ ಪ್ರೇಮದ ಬಗ್ಗೆ ಮಾತಾನಾಡಿದರು. 

ನ್ಯಾಯವಾದಿ ಕೇಶವ ನಂದೋಡಿ ದಿಕ್ಸ್ಕೂಚಿ ಭಾಷಣ ಮಾಡಿದರು. ಸಿಎ ಚಂದ್ರಕಾಂತ್ ರಾವ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಿಂದೂ ಸಂಗಮ ಸಮಿತಿಯ ಉಪಾಧ್ಯಕ್ಷೆ ವಂದನಾ ನಾಯಕ್ ಸ್ವಾಗತಿಸಿದರು. ಮಾಜಿ ಮೇಯರ್ ಸುಧೀರ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿ, ಆರ್ಯ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article