ಸಜ್ಜನ ಶಕ್ತಿಯ ಜಾಗ್ರತಿಯಿಂದ ಹಿಂದುತ್ವ-ಹಿಂದು ರಾಷ್ಟ್ರ ಬಲಿಷ್ಟವಾಗುತ್ತಿದೆ: ಭಾಗ್ಯಲಕ್ಷ್ಮೀ ಐತಾಳ್ ಬ್ರಹ್ಮಾವರ

ಸಜ್ಜನ ಶಕ್ತಿಯ ಜಾಗ್ರತಿಯಿಂದ ಹಿಂದುತ್ವ-ಹಿಂದು ರಾಷ್ಟ್ರ ಬಲಿಷ್ಟವಾಗುತ್ತಿದೆ: ಭಾಗ್ಯಲಕ್ಷ್ಮೀ ಐತಾಳ್ ಬ್ರಹ್ಮಾವರ


ಶಿರ್ವ: ಭಾರತ ಹಿಂದುತ್ವವನ್ನು ಒಡಲ್ಲಿಟ್ಟು ಪೂಜಿಸಿದ ಪುಣ್ಯಭೂಮಿ. ಹಿಂದುತ್ವವೇ ಭಾರತದ ಆತ್ಮ. ಭಾರತವಿಲ್ಲದೆ ಹಿಂದುತ್ವ ಉಳಿಯಲು ಸಾಧ್ಯವಲ್ಲ. ವೇದ, ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಯೋಗ, ಆಯುರ್ವೇದಗಳಂತಹ ಹಲವು ಇತಿಹಾಸಗಳ ಸರ್ವ ಅಂತ: ಸತ್ವವನ್ನು ಒಳಗೊಂಡಿರುವುದೇ ಹಿಂದುತ್ವ. ಅನಾದಿಕಾಲದಿಂದ ಇಂದಿನವರೆಗೂ ಅವಿನಾಶಿಯಾಗಿ ಉಳಿದು ಜೀವನದಲ್ಲಿ ಸೇರಿಕೊಂಡಿರುವ ಹಿಂದೆ ಅನೇಕ ದೇಶಭಕ್ತರ, ಹೋರಾಟಗಾರರ ತ್ಯಾಗ, ಬಲಿದಾನದ ಕೊಡುಗೆ ಇದೆ. ರಾಷ್ಟ್ರ ಚಿಂತನೆಗಳನ್ನು ನಮ್ಮ ಜೀವನದ ಮೌಲ್ಯಗಳನ್ನಾಗಿ ಬೆಳೆಸಿದ ಕೀರ್ತಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಇದೆ. ಸಜ್ಜನ ಶಕ್ತಿಯ ಜಾಗ್ರತಿಯಿಂದ ಹಿಂದುತ್ವ-ಹಿಂದು ರಾಷ್ಟ್ರ ಬಲಿಷ್ಟವಾಗುತ್ತಿದೆ ಎಂದು ಚೇರ್ಕಾಡಿ ರಾಷ್ಟ್ರೋತ್ಥಾನ ಪ.ಪೂ.ಕಾಲೇಜಿನ ಪ್ರಾಚಾರ್ಯರಾದ ಭಾಗ್ಯಲಕ್ಷ್ಮೀ ಐತಾಳ್ ಬ್ರಹ್ಮಾವರ ಹೇಳಿದರು.

ಅವರು ರವಿವಾರ ಕಾಪು ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ, ಮಾಡಬೆಟ್ಟು, ಏಣಗುಡ್ಡೆ, ಕುರ್ಕಾಲು ಗ್ರಾಮಗಳನ್ನು ಒಳಗೊಂಡ ಮೂಡಬೆಟ್ಟು ವಲಯದ ವತಿಯಿಂದ (ಕುರ್ಕಾಲು)ಸುಭಾಸ್‌ನಗರ ಗ್ರಾಮ ಪಂಚಾಯತ್ ಮುಂಭಾಗದ ಸಾರ್ವಜನಿಕ ವೇದಿಕೆಯಲ್ಲಿ ಜರುಗಿದ ‘ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣದಲ್ಲಿ ವ್ಯಕ್ತಿಯನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ನಿರ್ಮಿಸುವ ಶಕ್ತಿ ಪಂಚಸೂತ್ರಗಳ ಬಗ್ಗೆ ಮಾಹಿತಿ ನೀಡಿ, ಸಾಮಾಜಕ ಸಾಮರಸ್ಯ, ಕುಟುಂಬ ಪ್ರಭೋದನ ಸ್ವದೇಶಿಚಿಂತನೆ, ನಾಗರಿಕ ಶಿಷ್ಠಾಚಾರಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಾರಂಭದಲ್ಲಿ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಹಿರಿಯ ಜ್ಯೋತಿಷಿಗಳಾದ ವಿದ್ವಾನ್ ಬಾಲಕೃಷ್ಣ ಭಟ್ ನೂಜಿ, ಮಂಡಲ ಪ್ರಮುಖರು, ಮಾತೆಯರು ಸೇರಿ ಗೋಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಸಮಾರಂಭದ ಅಧ್ಯಕ್ಷತೆಯನ್ನು ಹಿಂದೂ ಸಂಗಮ ಆಯೋಜನಾ ಸಮಿತಿ ಕಾಪು ತಾಲೂಕು ಉಪಾಧ್ಯಕ್ಷ ಶಶಿಧರ ಪುರಾಣಿಕ್ ವಹಿಸಿದ್ದರು. ಗ್ರಾ.ಪಂ. ಸದಸ್ಯೆ ಮಲ್ಲಿಕಾ ಉಪಸ್ಥಿತರಿದ್ದರು. ಸಂಚಾಲಕ ಅಶೋಕ್ ರಾವ್ ಪ್ರಾಸ್ತಾವಿಕ ಮಾತುಗಳೊಂಗೆ ಸ್ವಾಗತಿಸಿದರು. ವಿಜೇತಾ ಶೆಟ್ಟಿ ನಿರೂಪಿಸಿ, ಪ್ರವೀಣ್ ಕುರ್ಕಾಲು ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article