ಬಿ.ಸಿ.ರೋಡಿನಲ್ಲಿ ‘ಮಹಿಳಾ ಮತ್ತು ಮಕ್ಕಳ ಸಂಭ್ರಮೋತ್ಸವ’-‘ಗಿರಿಜಾರತ್ನ’ ರಾಜ್ಯಪ್ರಶಸ್ತಿ ಪ್ರದಾನ

ಬಿ.ಸಿ.ರೋಡಿನಲ್ಲಿ ‘ಮಹಿಳಾ ಮತ್ತು ಮಕ್ಕಳ ಸಂಭ್ರಮೋತ್ಸವ’-‘ಗಿರಿಜಾರತ್ನ’ ರಾಜ್ಯಪ್ರಶಸ್ತಿ ಪ್ರದಾನ


ಬಂಟ್ವಾಳ: ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನ ಸಂಸ್ಥೆ (ರಿ.) ಬಾಳ್ತಿಲ ಮತ್ತು ಜವಾಹರ್ ಬಾಲ್ ಮಂಚ್ ದ.ಕ. ಇದರ ಸಂಯುಕ್ತಾಶ್ರಯದಲ್ಲಿ ‘ಮಹಿಳಾ ಮತ್ತು ಮಕ್ಕಳ ಸಂಭ್ರಮೋತ್ಸವ’ ಹಾಗೂ ‘ಗಿರಿಜಾರತ್ನ’ ರಾಜ್ಯಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಂಗಳವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು.

ಬಿ.ಸಿ.ರೋಡಿನ ನೋಟರಿ ಹಾಗೂ ಹಿರಿಯ ವಕೀಲರಾದ ಎಂ.ಅಶ್ವನಿಕುಮಾರ್ ರೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜೀವನದ ಪ್ರತೀ ಕ್ಷಣದಲ್ಲಿ ಮಹಿಳೆಯರು ಸಂತೋಷ-ಸಂತಸ ಪಡೆಯುವ ಸನ್ನಿವೇಶಗಳು ಸಮಾಜದಲ್ಲಿ ನಿರ್ಮಾಣಗೊಳ್ಳಲಿ, ಮಹಿಳೆಯರು ಸಾಮಾಜಿಕವಾಗಿ ಹೆಚ್ಚು ತೊಡಗಿಸಿಕೊಳ್ಳುವಂತಹ ಅವಕಾಶಗಳು ಒದಗಿಬರಲಿ ಇಂತಹಾ ಕಾರ್ಯಕ್ರಮಗಳು ಹೆಚ್ಚುಹೆಚ್ಚು ನಡೆಯಲಿ ಎಂದು ಅಶಯ ವ್ಯಕ್ತಪಡಿಸಿದರು.

ಮಾಜಿಸಚಿವ ಬಿ. ರಮಾನಾಥ ರೈ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್, ಉದ್ಯಮಿ ಶೈಲೇಂದ್ರ, ಮಾಜಿ ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಬೂಡಾ ಮಾಜಿ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಡಾ.ಶಶಿಕಲಾ ಆರ್ ಸೋಮಯಾಜಿ, ಶಿಕ್ಷಕಿ ಸಂಗೀತಾ ಶರ್ಮ, ಡಾ.ಸಂಶದ್ ಕುಂಜತ್ತ್ ಬೈಲ್, ಪ್ರಭಾ ನಾರಾಯಣ ಸುವರ್ಣ, ಜವಾಹರ್ ಬಾಲ್ ಮಂಚ್ ಇದರ ರಾಜ್ಯಾಧ್ಯಕ್ಷ ಶೌರ್ಯ, ಪ್ರಕಾಶ್ ಕೆರ್ವಾಸೆ, ಕೃಷ್ಣ ಸುವರ್ಣ, ಬಾಲಕೃಷ್ಣ ಅಂಚನ್, ರಾಜೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಗಿರಿಜಾರತ್ನ’ ರಾಜ್ಯಪ್ರಶಸ್ತಿ ಪ್ರದಾನ

ಇದೇ ವೇಳೆ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಸಂಶೋಧನಾ ಸಂಸ್ಥೆಯಿಂದ ಅರಿವಳಿಕೆ ತಜ್ಞೆ ಡಾ. ಶಶಿಕಲಾ ಆರ್. ಸೋಮಾಯಾಜಿ, ಸಮಾಜಸೇವಕಿ ಸುಜಿತಾ ವಿ.ಬಂಗೇರ ಬೆಳ್ತಂಗಡಿ, ಶಿಕ್ಷಕಿ ಸಂಗೀತಾ ಶರ್ಮ, ಸಮಾಜ ಸೇವಕಿ ಡಾ. ಸಂಶದ್ ಕುಂಜತ್ ಬೈಲ್, ಸಮಾಜ ಸೇವಕಿ ಪ್ರಭಾ ನಾರಾಯಣ ಸುವರ್ಣ ಅವರಿಗೆ ಗಿರಿಜಾ ರತ್ನ ಪ್ರಶಸ್ತಿ ಪ್ರದಾನಗೈದು ಸನ್ಮಾನಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article