ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯನ್ನು ಭೇಟಿಯಾದ ಉಪಮುಖ್ಯಮಂತ್ರಿ ಡಿಕೆಶಿ

ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯನ್ನು ಭೇಟಿಯಾದ ಉಪಮುಖ್ಯಮಂತ್ರಿ ಡಿಕೆಶಿ


ಬಂಟ್ವಾಳ: ಕೇಂದ್ರದ ಮಾಜಿ ವಿತ್ತ ಸಚಿವ ಚಿ. ಜನಾರ್ದನ ಪೂಜಾರಿಯವರ ಬಂಟ್ವಾಳದ ಮನೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಭೇಟಿ ನೀಡಿದರು. 

ಡಿಸಿಎಂಗೆ ಶಾಲು ಹಾಕಿ ಪೂಜಾರಿಯವರು ಬರಮಾಡಿಕೊಂಡರು. ಪೂಜಾರಿಯವರ ಆರೋಗ್ಯ ಕ್ಷೇಮ ವಿಚಾರಿಸಿದ ಡಿಕೆಶಿ ಕೆಲಹೊತ್ತುಗಳ ಕಾಲ ಅವರೊಂದಿಗೆ ಮಾತುಕತೆ ನಡೆಸಿದರು.

ಪುತ್ರೂರಿನಲ್ಲಿ ಪಕ್ಷದ ಕಾರ್ಯಕ್ರಮದ ನಿಮಿತ್ತ ಅಗಮಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದಾರಿ ಮಧ್ಯೆ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರನ್ನು ಭೇಟಿಯಾದರು.

ನಾಲ್ಕು ದಿನಗಳ ಹಿಂದೆಯಷ್ಠೆ ರಾಜಕಾರಣ ವಿಶ್ರಾಂತ ಜೀವನದಲ್ಲಿರುವ ಹಳೇ ಕಲಿಗಳು ಕೇಂದ್ರದ ಮಾಜಿ ಸಚಿರಾದವ ವೀರಪ್ಪ ಮೊಯಿಲಿಯವರು ಹಾಗೂ ಜನಾರ್ದನ  ಪೂಜಾರಿಯವರು ಸುದೀರ್ಘ ಅವಧಿಯ ಬಳಿಕ ಮುಖಾಮುಖಿಯಾಗಿ ಕುಶಲೋಪಚರಿ ನಡೆಸಿದ್ದರು.

ಇವರಿಬ್ಬರ ದಿಡೀರ್ ಮುಖಾಮುಖಿ ಕಾಂಗ್ರೆಸ್ ಪಡಸಾಲೆಯಲ್ಲಿ ಹೆಬ್ಬೇರಿಸಿತ್ತು.

ಶುಕ್ರವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಮಾಜಿ ಅಧ್ಯಕ್ಷರು ಆದ ಜನಾರ್ದನ ಪೂಜಾರಿಯವರನ್ನು ಭೇಟಿಯಾಗಿ ಒಂದಷ್ಟು ಹೊತ್ತು ಮಾತುಕತೆ ನಡೆಸಿದ್ದಾರೆ.

ಈ ಸಂದರ್ಭ ಮಾಜಿ ಸಚಿವರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಬೂಡ ಅಧ್ಯಕ್ಷ ಬೇಬಿ ಕುಂದರ್. ಪಕ್ಷದ ಮುಖಂಡರಾದ ಇನಾಯತ್ ಆಲಿ, ಇಬ್ರಾಹಿಂ ನವಾಝ್, ರಮಾನಾಥ ಕಾರಂದೂರು ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article