ಕೂಟ ಮಹಾಜಗತ್ತು ಮೂಡುಬಿದಿರೆ ಅಂಗಸಂಸ್ಥೆ ಉದ್ಘಾಟನೆ

ಕೂಟ ಮಹಾಜಗತ್ತು ಮೂಡುಬಿದಿರೆ ಅಂಗಸಂಸ್ಥೆ ಉದ್ಘಾಟನೆ


ಮೂಡುಬಿದಿರೆ: ಸಾಲಿಗ್ರಾಮದ ಕೂಟ ಮಹಾ ಜಗತ್ತು ಸಂಸ್ಥೆಯ 38ನೇ ಅಂಗ ಸಂಸ್ಥೆಯ ಸ್ಥಾಪನೆ ಮತ್ತು ಉದ್ಘಾಟನೆ ಇತ್ತೀಚೆಗೆ ಮೂಡುಬಿದಿರೆ ಶ್ರೀ ಗೋಪಾಲಕೃಷ್ಣ ದೇವಳದ ಪ್ರಾಂಗಣದಲ್ಲಿ ನಡೆಯಿತು. 

ಕೂಟ ಮಹಾ ಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷರಾದ ಎಚ್‌. ಸತೀಶ್‌ ಹಂದೆ ಅವರು ಉದ್ಘಾಟಿಸಿದರು. 

ಡಾ. ಎನ್‌. ಸೋಮಶೇಖರ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಗುರು ನರಸಿಂಹ ದೇವಳದ ಆಡಳಿತ ಮಂಡಳಿಯ ಸದಸ್ಯರೂ, ಕೇಂದ್ರ ಸಂಸ್ಥೆಯ ಉಪಾಧ್ಯಕ್ಷರೂ ಆಗಿರುವ ಪಿ. ಸದಾಶಿವ ಐತಾಳ್ ಅವರು ಈ ಶುಭಾಂಶನೆಗೈದರು. 

ಕೇಂದ್ರ ಸಂಸ್ಥೆಯ ಪದಾಧಿಕಾರಿಗಳ ಪೈಕಿ ಉಪಾಧ್ಯಕ್ಷರಾದ ಸಿಎ ಚಂದ್ರಶೇಖರ ಐತಾಳರು , ಹಾಗೂ  ಪ್ರಧಾನ ಕಾರ್ಯದರ್ಶಿ ಗಳಾದ  ಸುರೇಶ್ ತುಂಗ, ಸಂಘಟನಾ ಕಾರ್ಯದರ್ಶಿ  ವಿಶ್ವನಾಥ ಹೊಳ್ಳ, ಜೊತೆ ಕಾರ್ಯದರ್ಶಿ ಗಳಾದ  ಭಾರತಿ ಶ್ರೀಧರ್ ತುಂಬೆ,ಮತ್ತು ಹೆಚ್. ಕೆ ಕುಮಾರ ಹೊಳ್ಳ ಶುಭ ಹಾರೈಸಿದರು. 

ಬಿಲಿಯನ್ ಫೌಂಡೇಷನ್ ಟ್ರಸ್ಟ್ ನ ಗೌರವ ಕೋಶಾಧಿಕಾರಿ ವಿಶ್ವನಾಥ ಸೋಮಯಾಜಿ ಅವರು ಟ್ರಸ್ಟ್ ಬಗ್ಗೆ ಮಾಹಿತಿ ನೀಡಿದರು. ರಮೇಶ್ ಹೊಳ್ಳ ಕೋರ್ಯ,ಶ್ರೀಧರ ಹೊಳ್ಳ , ವಾಸುದೇವ ಸೋಮಯಾಜಿ  ವಿನಯ ಕಾರಂತ್, ಆರ್.ಕೆ. ಎಂಟರ್ ಪ್ರೈಸಸ್ ನ ರಾಮಕೃಷ್ಣ ಭಟ್, ದೇವಳದ ಆನುವಂಶಿಕ ಮೊಕ್ತೇಸರ ಗುರು ಪ್ರಸಾದ್ ಹೊಳ್ಳ ಉಪಸ್ಥಿತರಿದ್ದರು.

ಸುದರ್ಶನ್ ರಾವ್ ಕಾಯ೯ಕ್ರಮ ನಿರೂಪಿಸಿದರು. 

ಕೂಟ ಮಹಾಜಗತ್ತು ಸಾಲಿಗ್ರಾಮ ಸಂಸ್ಥೆಯ ನಿಬಂಧನೆಗಳನ್ನು   ಡಾ. ಎನ್.ಸೋಮಶೇಖರ್ ಮಯ್ಯ ರಿಗೆ  ವಿದ್ಯುಕ್ತವಾಗಿ  ಹಸ್ತಾಂತರಿಸಿ, ಹೊಸ ಶಾಖೆಯ ಅಧ್ಯಕ್ಷತೆ ವಹಿಸುವಂತೆ ಸೂಚಿಸಲಾಯಿತು. 

ಗೌರವ ಅಧ್ಯಕ್ಷರಾಗಿ ರಾಮಕೃಷ್ಣ ಭಟ್, ಉಪಾದ್ಯಕ್ಷ ರುಗಳಾಗಿ ಚಂದ್ರಶೇಖರ್ ಮಯ್ಯ ಮತ್ತು ಅನಂತ ಪದ್ಮನಾಭ ಹೊಳ್ಳ  , ಕಾರ್ಯದರ್ಶಿಯಾಗಿ  ಸುದರ್ಶನ್ ರಾವ್, ಖಜಾಂಚಿಯಾಗಿ  ಜಯರಾಮ ರಾವ್ ಅವರು  ಆಯ್ಕೆಯಾದರು. 

ಸ್ಥಾಪಕ ಸಮಿತಿಯ ಗೌರವ ಸದಸ್ಯರಾಗಿ, ವಾಸುದೇವ ಉಪಾಧ್ಯ,ರವಿ ಶಂಕರ ಕಾರಂತ್, ಪರಶುರಾಮ ಐತಾಳ್,ಉದಯ ಕುಮಾರ್,ನರಸಿಂಹ ಕಾರಂತ್, ಸೀತಾರಾಮ ರಾವ್, ರಾಮಕೃಷ್ಣರಾವ್ ಅವರನ್ನು ಅಭಿನಂದಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article