ಅಕಾಲಿಕ ಮಳೆ
Sunday, February 22, 2026
ಬೆಳ್ತಂಗಡಿ: ಬೆಳ್ತಂಗಡಿ-ಕಾರ್ಕಳ ಗಡಿ ಗ್ರಾಮಗಳ ಹಲವೆಡೆ ಫೆ.21ರ ಶನಿವಾರ ಮಳೆ ಸುರಿದಿದೆ.
ಬೆಳ್ತಂಗಡಿ ಹಾಗೂ ಕಾರ್ಕಳ ತಾಲೂಕಿನ ಗಡಿ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶನಿವಾರ ಸಂಜೆ ವೇಳೆ ಉತ್ತಮ ಮಳೆಯಾಗಿದೆ.
ಕಾರ್ಕಳದ ನೆಲ್ಲಿಕಾರು, ಬೆಳ್ತಂಗಡಿಯ ನಾರಾವಿ, ಕಡಿರುದ್ಯಾವರ, ಕಾಶಿಪಟ್ಣ ಮೊದಲಾದ ಭಾಗಗಳಲ್ಲಿ ಮಧ್ಯಾಹ್ನ ೩ರ ಸುಮಾರಿಗೆ ಅನಿರೀಕ್ಷಿತ ಮಳೆಯಾಗಿದೆ.