‘ಓದುವ ಸಂಸ್ಕೃತಿ ಉಳಿಸುವ ಜವಾಬ್ದಾರಿ ಯುವ ಜನಾಂಗದ ಮೇಲಿದೆ’
ಬಿ.ಎಂ. ರೋಹಿಣಿ ಅಭಿನಂದನೆ
ಈ ವೇಳೆ ಬಿ.ಎಂ. ರೋಹಿಣಿ ಅವರನ್ನು ಅಭಿನಂದಿಸಿ, ಆರೋಹಿಣಿ ಗ್ರಂಥ ಸಮರ್ಪಣೆ ಮಾಡಲಾಯಿತು. ಗ್ರಂಥಾವಲೋಕನ ಮಾಡಿದ ಹಿರಿಯ ಲೇಖಕಿ, ಸಂಘಟಕಿ ಡಾ.ಎಚ್.ಎಸ್. ಅನುಪಮಾ, ಇರುವೆ ಗೋಡೆಯ ಮೇಲೆ ಒಬ್ಬಂಟಿಯಾಗಿದ್ದರೂ ಮುಂದೆ ತನ್ನವರ ಜತೆ ಸೇರುವೆನೆಂದು ನಿರ್ಭೀತಿಯಿಂದ ನಿರಂತರ ಚಲನೆಯನ್ನು ಮುಂದುವರಿಸುತ್ತದೆ. ಅಂತಹ ಇರುವೆಯ ರೀತಿಯ ಬದುಕು- ಸಾಧನೆ ಬಿ.ಎಂ. ರೋಹಿಣಿ ಅವರದ್ದು ಎಂದರು.
ಕೌಟುಂಬಿಕ ಮಹಿಳೆ ಸಾಮಾಜಿಕ ಮಹಿಳೆಯಾಗಿ ಮಹಾ ಜಿಗಿತವನ್ನು ಕಂಡುಕೊಂಡ ಬದುಕು ರೋಹಿಣಿಯವರದ್ದು. ಬಾಲ್ಯದಿಂದಲೇ ಹೆತ್ತವರ ಪಾಲಿನ ‘ಒಳ್ಳೆಯ ಹುಡುಗಿ’ ಗುಡ್‌ಗರ್ಲ್ ಎಂಬ ಹಣೆಪಟ್ಟಿಯಿಂದಾಚೆಗೆ ಸರಿದು, ನಿರ್ಭೀತಿ, ನಿರಂತರ ಚಲನೆಯ ಬದುಕನ್ನು ರೂಪಿಸಿಕೊಂಡು ಸಮಾಜದ ಜತೆ ಗುರುತಿಸಿಕೊಂಡವರು ರೋಹಿಣಿ. ಬದುಕಿನ ಬಿಕ್ಕಟ್ಟಿನ ಸನ್ನಿವೇಶಗಳಲ್ಲಿಯೂ ಎದೆಗುಂದದೆ, ಬೌದ್ಧಿಕ ಸಮಗ್ರತೆಯನ್ನು ಕಳೆದುಕೊಳ್ಳದೆ ಮುನ್ನಡೆದಿರುವ ಅವರ ಬದುಕನ್ನು ಆರೋಹಿಣಿ ಗ್ರಂಥ ತೆರೆದಿಟ್ಟಿದೆ ಎಂದು ಅನುಪಮಾ ಗ್ರಂಥದ ಬಗ್ಗೆ ವಿವರ ನೀಡಿದರು.
ಗ್ರಂಥ ಅನಾವರಣಗೊಳಿಸಿದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಡಾ. ನಾಗಪ್ಪ ಗೌಡ ಆರ್. ಶುಭ ಹಾರೈಸಿದರು.
ಕೆಥೋಲಿಕ್ ಧರ್ಮ ಪ್ರಾಂತ್ಯದ ಸಂಪರ್ಕಾ?ಕಾರಿ ರಾಯ್ ಕ್ಯಾಸ್ತಲಿನೋ ಅಭಿನಂದನಾ ನುಡಿಗಳನ್ನಾಡಿದರು. ಅತಿಥಿಗಳಾಗಿ ಪ್ರಜ್ಞಾ ರೋಹನ್ ಕುಮಾರ್ ನೆಲ್ಲಿಂಗೇರಿ, ಮಂಗಳೂರು ಜಿಲ್ಲಾ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕಿ ಪ್ರಣೀತಾ ಮೊಂತೆರೋ ಭಾಗವಹಿಸಿದ್ದರು.
ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಗೌಡ ಶುಭ ಹಾರೈಸಿದರು. ಬಿ.ಎಂ. ರೋಹಿಣಿ ಅಭಿಂದನಾ ಸಮಿತಿ ಅಧ್ಯಕ್ಷೆ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಸಮಿತಿಯ ಕಾರ್ಯದರ್ಶಿ ಡಾ. ಜ್ಯೋತಿ ಚೇಳ್ಯಾರು, ಆಶಾ ಸುವರ್ಣ, ರೆನ್ನಿ ಡಿಸೋಜ, ಸಿ. ಸಿಂತಿಯಾ, ಗೋಕುಲ್‌ದಾಸ್, ಮಂಜುಳಾ ಸುನಿಲ್, ನರೇಶ್, ವಾಣಿ ಪೆರಿಯೋಡಿ ಉಪಸ್ಥಿತರಿದ್ದರು. ಮರ್ಲಿನ್ ಮಾರ್ಟಿಸ್ ಸ್ವಾಗತಿಸಿದರು. ಸುಮಲತಾ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.