ಮದುವೆಯಾಗುವುದಾಗಿ ನಂಬಿಸಿ ವಂಚನೆ : ಆರೋಪಿಗೆ ಜಾಮೀನು
Monday, February 9, 2026
ಕುಂದಾಪುರ: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಮಾಡಿ ನಂತರ ಮದುವೆಗೆ ನಿರಾಕರಿಸಿ, ಜೈಲು ಸೇರಿದ್ದ ಆರೋಪಿಯನ್ನು ಕುಂದಾಪುರ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜಾಮೀನಿನಲ್ಲಿ ಬಿಡುಗಡೆಗೊಳಿಸಿದೆ.
ಆರೋಪಿ ಹಾವೇರಿ ನಿವಾಸಿ ಹನುಮಂತ ಯಂಕಪ್ಪ ಲಮಾಣಿ ಪ್ರಸ್ತುತ ಕೊಲ್ಲೂರು ನಿವಾಸಿಯಾಗಿದ್ದು, ಅಲ್ಲಿನ ಯುವತಿಯೊಡನೆ ಪ್ರೀತಿಯ ನಾಟಕವಾಡಿ ದೈಹಿಕ ಸಂಪರ್ಕ ನಡೆಸಿದ್ದ. ನಂತರ ಮದುವೆಯಾಗಲು ನಿರಾಕರಿಸಿರುತ್ತಾನೆ. ನಂತರ ಆ ಯುವತಿ ರಶ್ಮಿತಾ ಕೊಲ್ಲೂರು ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದರು. ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ನಂತರ ಆರೋಪಿಯನ್ನು ಬಂಧಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು.
ಆರೋಪಿಯು ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದು ನ್ಯಾಯಾಲಯ ಶರ್ತಬದ್ಧ ಜಾಮೀನು ಮಂಜೂರು ಮಾಡಿರುತ್ತದೆ.
ಆರೋಪಿಯ ಪರವಾಗಿ ಕುಂದಾಪುರ ನ್ಯಾಯವಾದಿ ಹಂದಕುಂದ ಅಶೋಕ್ ಶೆಟ್ಟಿ ವಾದಿಸಿದ್ದರು.