ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾಯ೯: ಜಗದೀಶ್ಚಂದ್ರ ಡಿ.ಕೆ.
ಮೂಡುಬಿದಿರೆ ಲಯನ್ಸ್ ಪ್ರಾಂತೀಯ ಸಮ್ಮೇಳನ
ಅವರು ಬೆಳುವಾಯಿ ಖಂಡಿಗ ಗ್ರೀನ್ಸ್ ಆವರಣದಲ್ಲಿ ನಡೆದ ಲಯನ್ಸ್ ಕ್ಲಬ್ ಜಿಲ್ಲೆ 317ಡಿ ರೀಜಿಯನ್ 10 ಇದರ ಲಯನ್ಸ್ ಪ್ರಾಂತೀಯ ಸಮ್ಮೇಳನ ‘ಸ್ಪಂದನಾ’ದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಲಯನ್ಸ್ ಪ್ರಾಂತ್ಯ ಪ್ರಥಮ ಮಹಿಳೆ ಸುಮತಿ ಜೆ. ಕಾಯ೯ಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿ ಹೆಚ್.ಆರ್. ಕೇಶವ ಮಾತನಾಡಿ, ಮಾನವೀಯತೆ ಮತ್ತು ಸೇವೆ ಒಗ್ಗೂಡಿದಾಗ ಮೌಲ್ಯಗಳಿಗೆ ಹೆಚ್ಚಿನ ಮಹತ್ವ ಸಿಗುತ್ತದೆ ಎಂದರು. ಸೇವೆಗೆ ಶಿಕ್ಷಣ ಅಗತ್ಯ ಅಲ್ಲ ಎಂಬುದನ್ನು ಉಲ್ಲೇಖಿಸಿದರು.
ಮುಖ್ಯ ಅತಿಥಿ ಮಂಗಳೂರು ಐಎಂಎ ಅಧ್ಯಕ್ಷ ಡಾ. ಸದಾನಂದ ಪೂಜಾರಿ ಮಾತನಾಡಿ, ಜೀವನದ ಯಶಸ್ಸಿಗೆ ಯೋಗದೊಂದಿಗೆ ಯೋಗ್ಯತೆ ಅಗತ್ಯ. ನುಡಿದಂತೆ ನಡೆದಾಗ ನಮ್ಮ ವ್ಯಕ್ತಿತ್ವಕ್ಕೆ ಮಾನ್ಯತೆ ಸಿಗುತ್ತದೆ ಎಂದರು.
ಲಯನ್ಸ್ ವಲಯ ಅಧ್ಯಕ್ಷ ಕುಡ್ಪಿ ಅರವಿಂದ ಶೆಣೈ ಅಭಿನಂದನ ಮಾತುಗಳೊಂದಿಗೆ ಶುಭ ಹಾರೈಸಿದರು.
ಲಯನ್ಸ್ ವಲಯ ಅಧ್ಯಕ್ಷರಾದ ಮೆಲ್ವಿನ್ ಸಲ್ದಾನ, ಜೊಸ್ಸಿ ಮಿನೇಜಸ್, ಪ್ರಾಂತೀಯ ಸಮ್ಮೇಳನ ಅಧ್ಯಕ್ಷ ಪ್ರವೀಣ್ ಕುಮಾರ್ ಇಂದ್ರ, ಕಾರ್ಯದರ್ಶಿ ಹೆರಾಲ್ಡ್ ತಾವ್ರೋ, ಉಪಾಧ್ಯಕ್ಷ ವೆಂಕಟೇಶ್ ಹೆಬ್ಬಾರ್, ಖಜಾಂಚಿ ಹರೀಶ್ ಪೂಜಾರಿ, ಸಂಚಾಲಕ ಓಸ್ವಾಲ್ಡ್, ಲಯನ್ಸ್ ಅಧ್ಯಕ್ಷರಾದ ಶಿವಪ್ರಸಾದ್ ಹೆಗ್ಡೆ, ಪ್ರತಿಭಾ ಹೆಬ್ಬಾರ್, ಸುಧೀರ್ ಭಂಡಾರಿ, ಮುರಳಿ ಬಲಿಪ, ಜಾನೆಟ್ ಡಿ., ಅರುಣ್ ಕಾರ್ಡೋಜ ಹಾಗೂ ಲಿಯೋ ಕ್ಲಬ್ ಅಧ್ಯಕ್ಷರುಗಳು, ವೇಣೂರು ಲಯನ್ಸ್ ಕಾರ್ಯದರ್ಶಿ ಜಯರಾಮ್ ಹೆಗ್ಡೆ, ಕೋಶಾಧಿಕಾರಿ ಸತೀಶ್ ಚಿಗುರು ಉಪಸ್ಥಿತರಿದ್ದರು.
ಕೃಷಿಕ ವಿ.ಎಸ್. ಜಯರಾಜ್ ಹಾಗೂ ಅತಿಥಿ ಗಣ್ಯರು ಮತ್ತು ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಲಯನ್ಸ್ ಸೇವಾ ಕಾರ್ಯಗಳನ್ನು ನಡೆಸಿಕೊಡಲಾಯಿತು. ಮಂಗಳೂರಿನ ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.