ವೃದ್ಧಗೆ 1.77 ಕೋಟಿ ಡಿಜಿಟಲ್ ವಂಚನೆ

ವೃದ್ಧಗೆ 1.77 ಕೋಟಿ ಡಿಜಿಟಲ್ ವಂಚನೆ

ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ದುಡ್ಡು ದುಪ್ಪಟ್ಟು ಮಾಡಲು ಹೋದ 74 ವರ್ಷದ ವೃದ್ಧ ವ್ಯಕ್ತಿಯೊಬ್ಬರು ಬರೋಬ್ಬರಿ ಒಂದು ಕೋಟಿ 77 ಲಕ್ಷ ಹಣ ಕಳಕೊಂಡಿದ್ದು ವಂಚನೆ ಬಗ್ಗೆ ಮಂಗಳೂರಿನಲ್ಲಿ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  

ವೃದ್ಧ ವ್ಯಕ್ತಿಗೆ 2025ರ ಡಿಸೆಂಬರ್ 24ರಂದು ಯಾರೋ ಅಪರಿಚಿತರು +447902527164 ನೇ ನಂಬ್ರದಿಂದ ಕರೆ ಮಾಡಿದ್ದಾರೆ. ಈ ವೇಳೆ Shoib ghauri from Ventrade ನಿಂದ ಕರೆ ಮಾಡುವುದಾಗಿ ಹೇಳಿ ಆನ್ ಲೈನ್ ನಲ್ಲಿ ಅಮೆರಿಕನ್ ಷೇರಿನ ಮೇಲೆ ಇನ್ವೆಸ್ಟ್ ಮಾಡಿದರೆ ಅಧಿಕ ಲಾಭ ಬರುವುದಾಗಿ ತಿಳಿಸಿದ್ದಾರೆ. ನೀವು ಭಾರತೀಯ ರುಪಾಯಿಯಲ್ಲಿ ಹಣ ವರ್ಗಾಯಿಸಿದರೆ ನಾವು ಅದನ್ನು ಅಮೇರಿಕನ್ ಡಾಲರ್ ಗೆ ಪರಿವರ್ತಿಸಿ ಇನ್ವೆಸ್ಟ್ ಮೆಂಟ್ ಮಾಡುವುದಾಗಿ ತಿಳಿಸಿದ್ದಾರೆ. 

ಅಲ್ಲದೆ, ವೃದ್ದರ ಮೊಬೈಲ್ ಗೆ ಈ-ಮೇಲ್(shoaib.ghauri@ventratrade.com, aahan.shah@ventratrade.com), ವಾಟ್ಸಾಪ್ (+447902527164) ಹಾಗೂ ಫೋನ್ ಕರೆಯ (+447441930793, +447441958382) ಮೂಲಕ ಮಾತುಕತೆ ನಡೆಸಿದ್ದಾರೆ. ನಂಬಿಕೆ ಬರಲು ಮೊದಲು ಅಜ್ಜ ಹೂಡಿದ ಹಣಕ್ಕೆ ಸ್ವಲ್ಪಮಟ್ಟಿಗೆ ಲಾಭವನ್ನು ಹಿಂತಿರುಗಿಸಿದ್ದಾರೆ. ಇದನ್ನು ನಂಬಿದ ವ್ಯಕ್ತಿ ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ಅವರು ಹೇಳಿದ್ದನ್ನು ನಂಬಿದ್ದು ಜನವರಿ 05ರಿಂದ ಫೆ.2ರ ವರೆಗೆ ಅವರೇ ತಿಳಿಸಿದ ಬ್ಯಾಂಕ್ ಖಾತೆಗಳಿಗೆ RTGS & NEFT& IMPS ಮೂಲಕ ಒಟ್ಟು 1,77,64,668.22/- ಹಣವನ್ನು ವರ್ಗಾವಣೆ ಮಾಡಿದ್ದಾರೆ.

ಆದರೆ ತಾನು ಹಾಕಿದ ಹಣ ರಿಟರ್ನ್ ಬಾರದೇ ಇದ್ದಾಗ ಮೋಸ ಹೋಗಿರುವುದು ಗೊತ್ತಾಗಿ ಇದೀಗ ಅಪರಿಚಿತ ವ್ಯಕ್ತಿ ಆನ್ ಲೈನ್ ಅಮೆರಿಕನ್ ಕೊಮೊಡಿಟಿಸ್ ಇನ್ ವೆಸ್ಟ್ ಮೆಂಟ್ ಹೆಸರಿನಲ್ಲಿ ಮೋಸದಿಂದ ಹಣ ವರ್ಗಾಯಿಸಿ ವಂಚನೆ ಎಸಗಿದ್ದಾರೆ ಎಂದು ದೂರು ನೀಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article