‘ನಮ್ಮ ಮಗಳನ್ನು ಬ್ಲ್ಯಾಕ್‌ಮೇಲ್ ಮಾಡಿ ಇರಿಸಲಾಗಿದೆ’: ವಿಶ್ವನಾಥ

‘ನಮ್ಮ ಮಗಳನ್ನು ಬ್ಲ್ಯಾಕ್‌ಮೇಲ್ ಮಾಡಿ ಇರಿಸಲಾಗಿದೆ’: ವಿಶ್ವನಾಥ


ಮಂಗಳೂರು: ನಮ್ಮ ಜತೆ ಬರುತ್ತೇನೆ ಎಂದು ಹೇಳಿದ್ದ ಮಗಳನ್ನು ಅನ್ಯಮತೀಯ ಯುವಕ ಬ್ಲ್ಯಾಕ್‌ಮೇಲ್ ಮಾಡಿ ಇರಿಸಿಕೊಂಡಿದ್ದಾನೆ ಎಂಬ ಸಂಶಯವಿದೆ.  ಕೇರಳ ಪೊಲೀಸರು ಯುವಕನ ಪರವಾಗಿದ್ದಾನೆ. ನಾವು ಕಾಸರಗೋಡಿನವರಾದರೂ ಮಗಳು ಸುರತ್ಕಲ್‌ನಿಂದ ಕಾಣೆಯಾದ ಕಾರಣ ಇಲ್ಲಿ ದೂರು ನೀಡಿದ್ದೇವೆ. ಕರ್ನಾಟಕ ಪೊಲೀಸರು ನಮಗೆ ಸಹಕಾರ ನೀಡಬೇಕು ಎಂದು ಕಾಸರಗೋಡು ಕೂಡ್ಲು ಮೀಪುಗಿರಿ ನಿವಾಸಿ ವಿಶ್ವನಾಥ ಹೇಳಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರತ್ಕಲ್ ಶ್ರೀನಿವಾಸ ಕಾಲೇಜಿನಲ್ಲಿ ವ್ಯಾಸಂಗ ಪೂರೈಸಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ೨೩ ವರ್ಷ ಪ್ರಾಯದ ನನ್ನ ಮಗಳನ್ನು ವಯನಾಡು ಮೂಲದ ಅನ್ಯಮತೀಯ ಯುವಕ  ಕರೆದೊಯ್ದಿದ್ದಾನೆ. ಕಾಲೇಜಿಗೆ ತೆರಳುತ್ತಿದ್ದ ವೇಳೆ ಆಕೆ ಸುರತ್ಕಲ್‌ನ ಪಿಜಿಯೊಂದರಲ್ಲಿ ವಾಸವಿದ್ದಳು. ಕಳೆದ ಜೂನ್‌ನಿಂದ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಳು. ಆದರೆ, ಕಳೆದ ಶನಿವಾರ ಆಕೆ ಸುರತ್ಕಲ್‌ನ ಪಿಜಿಯಿಂದ ಯುವಕನೊಂದಿಗೆ ತೆರಳಿರುವುದು ಸಿಸಿ ಕ್ಯಾಮೆರಾ ಮೂಲಕ ತಿಳಿಯಿತು. ಆಕೆಯನ್ನು ವಯನಾಡ್‌ನಲ್ಲಿ ಯುವಕ ಇರಿಸಿಕೊಂಡಿದ್ದು, ಮಗಳನ್ನು ನಮ್ಮ ಮನೆಗೆ ಕರೆತರುವಲ್ಲಿ ಕರ್ನಾಟಕ ಸರಕಾರ ಹಾಗೂ ಪೊಲೀಸರು ಸಹಕಾರ ನೀಡಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮನವಿ ಮಾಡಿದರು.

ಯುವತಿಯ ತಾಯಿ ಲತಾ ಮಾತನಾಡಿ, ಸುರತ್ಕಲ್ ಪೊಲೀಸರ ಜತೆಗೆ ನಾವು ಕಳೆದ ಭಾನುವಾರ ವಯನಾಡ್‌ಗೆ ತೆರಳಿದ್ದೆವು. ಅಲ್ಲಿ ಯುವಕನ ಜತೆ ನಮ್ಮ ಮಗಳು ಇರುವುದನ್ನು ಪತ್ತೆಹಚ್ಚಲಾಯಿತು. ಆದರೆ, ಮರುದಿನ ರಾತ್ರಿ ೧೦ರ ವೇಳೆಗೆ ನಮಗೆ ವಯನಾಡ್ನ ಪೊಲೀಸ್ ಠಾಣೆಯಲ್ಲಿ ಮಗಳ ಜತೆ ಐದು ನಿಮಿಷ ಮಾತನಾಡಲು ಅವಕಾಶ ನೀಡಿದರು. ಈ ವೇಳೆ ಆಕೆ ನಮ್ಮೊಂದಿಗೆ ಬರುವುದಾಗಿ ಹೇಳಿದ್ದಾಳೆ. ಈ ಬಗ್ಗೆ ಬರವಣಿಗೆ ಮೂಲಕವೂ ತಿಳಿಸಿದ್ದಾಳೆ. ಆದರೆ, ಬಳಿಕ ಆಕೆಯ ಜತೆ ಯುವಕನಿಗೆ ಜತೆ ಮಾತನಾಡಲು ಅಲ್ಲಿನ ಪೊಲೀಸರು ಅವಕಾಶ ನೀಡಿದರು. ಬಳಿಕ ಆಕೆ ಯುವಕನ ಜತೆಗೇ ಹೋಗಲು ಇಚ್ಚಿಸಿದ್ದಾಳೆ ಎಂದು ಪೊಲೀಸರು ಆಕೆಯ ಹೇಳಿಕೆಯನ್ನು ಬದಲಾಯಿಸಿದ್ದಾರೆ. ನೀವು ಇಂದು ಹೋಗಿ ನಾನು ನಾಳೆ ಬರುತ್ತೇನೆ ಎಂದು ಮಗಳು ತಿಳಿಸಿದಳು. ಬಳಿಕ ಅಲ್ಲಿ ನಿಲ್ಲಲು ನಮ್ಮನ್ನು ಪೊಲೀಸರು ಬಿಡಲಿಲ್ಲ. ಯುವಕನ ಜತೆ ಸ್ಥಳೀಯ ೧೫ ಮಂದಿ ಸ್ಥಳದಲ್ಲಿದ್ದು, ಕೇರಳ ಪೊಲೀಸರು ನಮ್ಮನ್ನು ಅಲ್ಲಿಂದ ಓಡಿಸಿದರು ಎಂದರು.

ಹಿಂದು ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕ ನರಸಿಂಹ ಮಾಣಿ ಮಾತನಾಡಿ, ಹಿಂದು ಯುವತಿಯರನ್ನು ಪ್ರೀತಿಯ ಹೆಸರಿನಲ್ಲಿ ಮೋಸದ ಬಲೆಗೆ ಬೀಳಿಸಿ ಮತಾಂತರ ಮಾಡಲಾಗುತ್ತಿದೆ. ಕಾಸರಗೋಡಿನ ಯುವತಿಯ ನಾಪತ್ತೆ ಪ್ರಕರಣವೂ ಲವ್ ಜಿಹಾದ್ ಆಗಿದೆ. ಈ ಪ್ರಕರಣದಲ್ಲಿ ಕೇರಳದ ಅಽಕಾರಿಗಳು, ಪೊಲೀಸರ ನಡೆ ಖಂಡನೀಯ ಎಂದರು.

ಯುವತಿಯನ್ನು ಕರೆದೊಯ್ದ ಯುವಕ ಸುರತ್ಕಲ್ನ ಆಭರಣ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಆ ಅಂಗಡಿ ಮಾಲಕ ಎಸ್ಡಿಪಿಐ ಮುಖಂಡನಾಗಿದ್ದಾನೆ. ಯುವತಿಯ ಹೆತ್ತವರು ವಯನಾಡ್‌ಗೆ ತೆರಳಿದಾಗ ಅಲ್ಲಿ ಎಸ್ಡಿಪಿಐ ಮುಖಂಡರು ಯುವಕನ ಪರವಾಗಿ ಪೊಲೀಸ್ ಠಾಣೆಯಲ್ಲಿ ಸೇರಿದ್ದರು. ಯುವತಿ ಹೆತ್ತವರ ಬಳಿ ‘ನಾನು ನಿಮ್ಮ ಜತೆ ಬರುತ್ತೇನೆ’ ಎಂದು ಹೇಳಿದ ಬಳಿಕ ಆಕೆಗೆ ಬೆದರಿಕೆ ಹಾಕಿ ಆಕೆಯನ್ನು ಅಲ್ಲಿಯೇ ಇರಿಸಿಕೊಳ್ಳಲಾಗಿದೆ. ಆಕೆಯನ್ನು ಕರೆತರಲು ನಾವು ಎಲ್ಲ ಪ್ರಯತ್ನ ಮಾಡುತ್ತೇವೆ. ಕರ್ನಾಟಕ ರಾಜ್ಯ ಸರಕಾರ ಹಾಗೂ ಪೊಲೀಸರು ನ್ಯಾಯ ಒದಗಿಸಿಕೊಡಬೇಕು ಎಂದರು.

ಡ್ರಗ್ಸ್ ಮೂಲಕ ಇಂತಹ ಕೃತ್ಯಗಳು ನಡೆಯುತ್ತವೆ. ಶಾಂತಿ, ಸಾಮರಸ್ಯ ಹಾಳು ಮಾಡುತ್ತಿರುವ ಡ್ರಗ್ಸ್ ದಂಧೆ ವಿರುದ್ಧ ಮಂಗಳೂರು ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದು, ಪಿಜಿಗಳ ಮೇಲೆಯೂ ನಿಗಾ ಇರಿಸಬೇಕಿದೆ ಎಂದು ಹೇಳಿದರು.

ಹಿಂದು ಜಾಗರಣ ವೇದಿಕೆ ಪ್ರಾಂತ ಕಾರ್ಯಕಾರಿಣಿ ಸದಸ್ಯ ಅಮಿತ್ ಗುಂಡಳಿಕೆ, ಮಂಗಳೂರು ಮಹಾನಗರ ಜಿಲ್ಲಾ ಸಂಯೋಜಕ್ ಲಿಖಿತ್ರಾಜ್ ಮೂಡುಶೆಡ್ಡೆ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article