ರಥಬೀದಿಯಲ್ಲಿ ಹೊಡೆದಾಟ: ವಿಡಿಯೋ ವೈರೆಲ್

ರಥಬೀದಿಯಲ್ಲಿ ಹೊಡೆದಾಟ: ವಿಡಿಯೋ ವೈರೆಲ್

ಮಂಗಳೂರು: ನಗರದ ರಥಬೀದಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರು ವ್ಯಕ್ತಿಗಳು ರಸ್ತೆಯಲ್ಲಿ ಕಲ್ಲಿನಿಂದ ಹೊಡೆದಾಡಿಕೊಂಡ ಘಟನೆ ನಡೆದಿದ್ದು, ಇದರ ವಿಡಿಯೋ ಎರಡು ದಿನದ ಬಳಿಕ ವೈರಲ್ ಆಗಿದೆ.

ರಸ್ತೆ ಬದಿ ಮೂಡೆ ಮಾರಾಟಕ್ಕೆ ಇರಿಸಿದ್ದನ್ನು ಅಪರಿಚಿತ ವ್ಯಕ್ತಿ ತುಳಿದುಕೊಂಡು ಹೋಗಿದ್ದಾನೆ. ಇದನ್ನು ಆಕ್ಷೇಪಿಸಿದ ಸ್ಥಳೀಯರೊಬ್ಬರ ಮೇಲೆ ಅಪರಿಚಿತ ವ್ಯಕ್ತಿ ಅಲ್ಲೇ ಇದ್ದ ಕಲ್ಲನ್ನು ಎತ್ತಿ ಹಲ್ಲೆ ನಡೆಸಿದ್ದಾನೆ. ಈ ಗಲಾಟೆ ತಾರಕಕ್ಕೇರಿಪರಸ್ಪರ ಹೊಡೆದಾಡಿ, ಹೊರಳಾಡಿಕೊಂಡು ಹಲ್ಲೆ ನಡೆಸಿದ್ದಾರೆ.

ಇಬ್ಬರು ವ್ಯಕ್ತಿಗಳು ಗಂಭೀರವಾಗಿ ಹೊಡೆದಾಡಿಕೊಳ್ಳುತ್ತಿದ್ದರೂ ಅದನ್ನು ತಡೆಯಲು ಪ್ರಯತ್ನಪಡದ ವ್ಯಕ್ತಿಯೊಬ್ಬ ಘಟನೆಯನ್ನು ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ. ಮಹಿಳೆಯೊಬ್ಬರು ಇವರಿಬ್ಬರ ಗಲಾಟೆಯನ್ನು ಬಿಡಿಸುವ ಪ್ರಯತ್ನ ಮಾಡಿದರೆ, ವಿಡಿಯೋ ಮಾಡುವ ವ್ಯಕ್ತಿ ಚಿತ್ರೀಕರಣದಲ್ಲಿ ಮಗ್ನನಾಗಿದ್ದ. ಈ ವಿಚಾರ ಪೊಲೀಸರ ಗಮನಕ್ಕೂ ಬಂದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article