ನಾಳೆ ತುಳು ಅಕಾಡೆಮಿಯಲ್ಲಿ ಬರಹಗಾರರ ಸಭೆ

ನಾಳೆ ತುಳು ಅಕಾಡೆಮಿಯಲ್ಲಿ ಬರಹಗಾರರ ಸಭೆ

ಮಂಗಳೂರು:  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು  ಪ್ರಸ್ತಕ ಸಾಲಿನ ಪುಸ್ತಕ ಪ್ರಕಟಣೆಯ ಬಗ್ಗೆ ಸಮಾಲೋಚನೆ ನಡೆಸುವ ಸಲುವಾಗಿ ತುಳು ಬರಹಗಾರರ ಸಭೆಯನ್ನು ಮಂಗಳೂರಿನ ಉರ್ವಸ್ಟೋರ್ ನ ತುಳು ಭವನದಲ್ಲಿ ಶನಿವಾರ ಸಂಜೆ 4 ಗಂಟೆಗೆ ಆಯೋಜಿಸಿದೆ.

 ಈ ಸಭೆಯಲ್ಲಿ ಮಂಗಳೂರು , ಸುರತ್ಕಲ್, ಮುಲ್ಕಿ, ಉಳ್ಳಾಲ ವ್ಯಾಪ್ತಿಯ ತುಳು ಬರಹಗಾರರು ಪಾಲ್ಗೊಳ್ಳುವರು. 

ದಕ್ಷಿಣ ಕನ್ನಡ,  ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮುಂದಿನ ದಿನಗಳಲ್ಲಿ ತುಳು ಲೇಖಕರ ಸಮಾಲೋಚನಾ ಸಭೆ ನಡೆಯಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್  ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article