ಎಸ್‌ಸಿಡಿಸಿಸಿ ಬ್ಯಾಂಕ್ ಬೈಂದೂರು ಶಾಖೆಯ ನೂತನ ಕಟ್ಟಡಕ್ಕೆ ಭೂಮಿ ಪೂಜೆ
Sunday, February 22, 2026
ಮಂಗಳೂರು: ಎಸ್‌ಸಿಡಿಸಿಸಿ ಬ್ಯಾಂಕ್‌ನ ಬೈಂದೂರು ಶಾಖೆಗೆ ಯೆಡ್ತರೆ ಗ್ರಾಮದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಕಟ್ಟಡದ ಭೂಮಿಪೂಜೆ ಕಾರ್ಯಕ್ರಮವು ಶುಕ್ರವಾರ ವಿಧಿವಿಧಾನಗಳೊಂದಿಗೆ ನೆರವೇರಿತು.
ಬ್ಯಾಂಕ್‌ನ ನಿರ್ದೇಶಕ ಎಂ. ಮಹೇಶ್ ಹೆಗ್ಡೆ ಅವರು ಭೂಮಿಪೂಜೆಯನ್ನು ನೆರವೇರಿಸಿದರು. ಪುರೋಹಿತರಾದ ಕೆರೆಕಟ್ಟೆ ಸುಬ್ರಹ್ಮಣ್ಯ ಅಡಿಗ ಅವರು ಪೂಜಾವಿಧಿ ವಿಧಾನಗಳನ್ನು ನೆರವೇರಿಸಿದರು.
ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ರಾಜು ಪೂಜಾರಿ, ಎಸ್‌ಸಿಡಿಸಿಸಿ ಬ್ಯಾಂಕ್‌ನ ಮಹಾಪ್ರಬಂಧಕ ಯು. ಸುನೀಲ್ ಕುಮಾರ್ ಹೊಳ್ಳ, ಗುತ್ತಿಗೆದಾರ ಉದಯ ಕುಮಾರ್ ಶೆಟ್ಟಿ, ಬ್ಯಾಂಕ್‌ನ ಪ್ಯಾನೆಲ್ ಇಂಜಿನಿಯರ್ ತಾರನಾಥ ಹೆಚ್.ಟಿ., ಬೈಂದೂರು ಶಾಖಾ ವ್ಯವಸ್ಥಾಪಕ ಸತೀಶ್ ಹೆಚ್., ಬೈಂದೂರು ವಲಯ ಮೇಲ್ವಿಚಾರಕ ಶಿವರಾಮ ಪೂಜಾರಿ ಸೇರಿದಂತೆ ಬ್ಯಾಂಕ್‌ನ ಅಧಿಕಾರಿಗಳು ಉಪಸ್ಥಿತರಿದ್ದರು.