ನೆಲ್ಲಿಕಾರು: 1.50 ಕೋ.ರೂ. ವೆಚ್ಚದಲ್ಲಿ ನಿಮಾ೯ಣಗೊಳ್ಳಲಿರುವ ರಸ್ತೆಗೆ ಶಾಸಕ ಕೋಟ್ಯಾನ್ ಶಿಲಾನ್ಯಾಸ

ನೆಲ್ಲಿಕಾರು: 1.50 ಕೋ.ರೂ. ವೆಚ್ಚದಲ್ಲಿ ನಿಮಾ೯ಣಗೊಳ್ಳಲಿರುವ ರಸ್ತೆಗೆ ಶಾಸಕ ಕೋಟ್ಯಾನ್ ಶಿಲಾನ್ಯಾಸ


ಮೂಡುಬಿದಿರೆ: 1.50 ಕೋ.ರೂ. ವೆಚ್ಚದ ಅನುದಾನದಲ್ಲಿ ನಿಮಾ೯ಣಗೊಳ್ಳಲಿರುವ ಶಿತಾ೯ಡಿ-ಗುಂಡಾವು-ನೆಲ್ಲಿಕಾರು ಮುಖ್ಯ ರಸ್ತೆಗೆ  ಶಾಸಕ ಉಮಾನಾಥ ಎ. ಕೋಟ್ಯಾನ್ ಮಂಗಳವಾರ ನೆಲ್ಲಿಕಾರು ಗ್ರಾ. ಪಂ. ನ ಗುಂಡಾವುನಲ್ಲಿ ಶಿಲಾನ್ಯಾಸಗೈದರು.

ನಂತರ ಮಾತನಾಡಿದ ಕೋಟ್ಯಾನ್ ಅವರು ಲೋಕೋಪಯೋಗಿ ಇಲಾಖೆಯ ಸಂಬಂಧಿಸಿದ ಶಿತಾ೯ಡಿ-ಹೊಸ್ಮಾರು ರಸ್ತೆಯು ಗುಂಡಾವಿನಂದ ತೀರ ಹದಗೆಟ್ಟಿದ್ದು ಇದನ್ನು ದುರಸ್ಥಿಗೊಳಿಸಬೇಕೆಂಬುದು ಈ ಭಾಗದ ಜನರ ಬಹು ದಿನದ ಬೇಡಿಕೆಯಾಗಿತ್ತು ಈ ನಿಟ್ಟಿನಲ್ಲಿ 1.2  ಕಿ. ಮೀ ಉದ್ದಕ್ಕೆ 5.5 ಮೀ ಅಗಲೀಕರಣಗೊಳಿಸಲಾಗುವುದು ಕಾಮಗಾರಿಯನ್ನು ತಕ್ಷಣ ಆರಂಭಿಸಲಾಗುವುದು ಎಂದು ತಿಳಿಸಿದರು. 

 ನೆಲ್ಲಿಕಾರು ಗ್ರಾ.ಪಂ.ನ ಮಾಜಿ ಅಧ್ಯಕ್ಷರಾಗಿದ್ದ ಉದಯ ಪೂಜಾರಿ,ಜಯಂತ ಹೆಗ್ಡೆ, ಮಾಜಿ ಉಪಾಧ್ಯಕ್ಷೆ ಸುಶೀಲಾ, ಸದಸ್ಯರಾದ ಸುಶೀಲ, ಆಶಾಲತಾ, ಊರಿನ ಹಿರಿಯರಾದ ಶಿವಪ್ಪ ಪೂಜಾರಿ, ಜಯಪೂಜಾರಿ, ಕಮಲ ಪೂಜಾರ್ತಿ, ಸ್ಥಳೀಯರಾದ ಗಣೇಶ್ ನೆಲ್ಲಿಕಾರು, ರಾಘು ಪೂಜಾರಿ ನೆಲ್ಲಿಕಾರು, ರಾಕೇಶ್ ಪೂಜಾರಿ ಮತ್ತು ಗುತ್ತಿಗೆದಾರರು ಈ ಸಂದಭ೯ದಲ್ಲಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article