ಫೆ.13-14:- ಕೋಟ ಶಾಂತಮೂರ್ತಿ ಶ್ರೀ ಶನೀಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕ ವರ್ಧಂತ್ಯೋತ್ಸವ
ಫೆ.13 ರಂದು ಬೆಳಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಪೂಜೆ ಪುಣ್ಯಾಹ, 6 ಕಾಯಿ ಗಣಹೋಮ, ಚಂಡಿಕಾ ಹೋಮ, ಶ್ರೀ ಕನ್ನಿಕಾ ಪರಮೇಶ್ವರಿಗೆ 108 ಕಶಲ ಸ್ಥಾಪನೆ, ಕಲಾಹೋಮ, ಕಲಶಾಭಿಷೇಕ, ಪರಿವಾರ ದೇವರುಗಳಾದ ಗಣಪತಿ, ನಂದಿ, ಈಶ್ವರ, ಆಂಜನೇಯ ದೇವರಿಗೆ 25 ಕಲಶ ಸ್ಥಾಪನೆ, ಕಲಾಹೋಮ.
ನವಗ್ರಹ, ಕಾಕವಾಹನ ದೇವರಿಗೆ 9 ಕಲಶ ಸ್ಥಾಪನೆ, ಕಲಾಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ ಹಾಗೂ ಸಂಜೆ ಶ್ರೀ ಶನೀಶ್ವರ ದೇವರಿಗೆ 108 ಕಲಶ ಸ್ಥಾಪನೆ, ಕಲಾಹೋಮ, ಛಾಯದೇವಿ, ಯಕ್ಷಿ ದೇವಿಗೆ 25 ಕಲಶ ಸ್ಥಾಪನೆ, ಕಲಾಹೋಮ, ಕ್ಷೇತ್ರಪಾಲ ದೇವರಿಗೆ 9 ಕಲಶ ಸ್ಥಾಪನೆ, ಕಲಾಹೋಮ, ಕಲಶಾಭಿಷೇಕ, ವಾಸ್ತುಪೂಜೆ, ಸುದರ್ಶನ ಹೋಮ, ದಿಗ್ಬಲಿ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಫೆ.14 ರಂದು ಬೆಳಗ್ಗೆ 4:55ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ಶನಿದೇವರಿಗೆ 108 ಕಲಶಾಭಿಷೇಕ, ಪ್ರಸನ್ನ ಪೂಜೆ, ವಿಶೇಷ ಹೂವಿನ ಅಲಂಕಾರ ಪೂಜೆ ನಡೆಯಲಿದೆ.
ಬೆಳಗ್ಗೆ 9:00ಕ್ಕೆ ಸಾಮೂಹಿಕ "ಶನಿ ಶಾಂತಿ" ,ಪೂರ್ಣಾಹುತಿ, ಪ್ರಸಾದ ವಿತರಣೆ. ಬೆಳಗ್ಗೆ 10ಕ್ಕೆ ಹರಕೆಯ ತುಲಾಭಾರ ಸೇವೆ ಹಾಗೂ ದರ್ಶನ ಸೇವೆ ನಡೆಯಲಿದೆ.
ಮಧ್ಯಾಹ್ನ 12:30ಕ್ಕೆ ಸರಿಯಾಗಿ ಶ್ರೀ ದುರ್ಗಾಪರಮೇಶ್ವರಿ ಚಂಡೆ ಬಳಗ -ಮೊಗವೀರ ಪೇಟೆ ಕೊಕ್ಕರ್ಣೆ ತಂಡದವರಿಂದ ಚಂಡೆವಾದನ ದೊಂದಿಗೆ ವಿಶೇಷ ಮಹಾಪೂಜೆ, 1 ಗಂಟೆಯಿಂದ *"ಸಾರ್ವಜನಿಕ ಮಹಾ ಅನ್ನಸಂತರ್ಪಣೆ"* ಕಾರ್ಯಕ್ರಮ ನಡೆಯಲಿದೆ. ಹಾಗೂ ಮಧ್ಯಾಹ್ನ 1 ಘಂಟೆಗೆ ಗಣೇಶ್ ಕೊಮೆ ಸಾರಥ್ಯದ ಶ್ರೀ ಧರ್ಮಶಾಸ್ತ ಸ್ವರಾಂಜಲಿ ಮ್ಯೂಸಿಕಲ್ಸ್ ಕೋಟ ಇವರಿಂದ ಭಕ್ತಿ ಗಾನಾವಳಿ ನಡೆಯಲಿದೆ.
ರಾತ್ರಿ 7 ಗಂಟೆಗೆ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಾಲಾಡಿ ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಶ್ರೀ ಶನೀಶ್ವರ ದೇವಸ್ಥಾನದ ಪಾತ್ರಿಗಳಾದ ಭಾಸ್ಕರ್ ಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.