ಫೆ.26 ರಂದು ಮೂಡುಬಿದಿರೆಯಲ್ಲಿ  ವಿರಾಟ್ ಸಂತ ಸಮಾವೇಶ

ಫೆ.26 ರಂದು ಮೂಡುಬಿದಿರೆಯಲ್ಲಿ ವಿರಾಟ್ ಸಂತ ಸಮಾವೇಶ


ಮೂಡುಬಿದಿರೆ: ಧವಳತ್ರಯ ಟ್ರಸ್ಟ್  ಹಾಗೂ ಭಾರತೀಯ ಸಂತ ಮಹಾಪರಿಷತ್‌ಗಳ ಸಂಯುಕ್ತ ಆಶ್ರಯದಲ್ಲಿ ಫೆ. 26ರಂದು ಜೈನ ಕಾಶಿ ಮೂಡುಬಿದಿರೆಯಲ್ಲಿ ವಿರಾಟ್ ಸಂತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೂಡುಬಿದಿರೆ ಜೈನಮಠದ ಪೀಠಾಧೀಶರಾದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ. 


ಅವರು ಮಂಗಳವಾರ ಜೈನ ಮಠದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿಸನಾತನ ಧರ್ಮದ ಏಕತೆ ಹಾಗೂ ಧಾರ್ಮಿಕ ಒಗ್ಗೂಡುವಿಕೆಯ ಉದ್ದೇಶದಿಂದ ಮಹಾವೀರ ಭವನದಲ್ಲಿ ಈ ಸಂತ ಸಮ್ಮೇಳನ ನಡೆಯಲಿದ್ದು ನಾಲ್ಕು ಜಿಲ್ಲೆಗಳ 50ಕ್ಕೂ ಹೆಚ್ಚು  ಸಂತರುಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಅಂದು ಬೆಳಿಗ್ಗೆ 9 ಗಂಟೆಗೆ ಬಡಗು ಬಸದಿ ಬಳಿಯಿಂದ ಮೂಡುಬಿದಿರೆ ಜೈನ ಮಠದವರೆಗೆ ಸಕಲ ಬಿರುದು ಬಾವಲಿ, ಕುಣಿತ ಭಜನೆ ಹಾಗೂ ಮಂಗಳ ವಾದ್ಯಗಳೊಂದಿಗೆ ಭವ್ಯ ಶೋಭಾಯಾತ್ರೆ ನಡೆಯಲಿದೆ.  ಶೋಭಾಯಾತ್ರೆಗೆ ಭಟ್ಟಾರಕ ಶ್ರೀಗಳು ಚಾಲನೆ ನೀಡಲಿದ್ದಾರೆ. ನಂತರ ಮಹಾವೀರ ಭವನದಲ್ಲಿ ಸಂತ ಸಮಾವೇಶ ಹಾಗೂ ಧಾರ್ಮಿಕ ವಿಚಾರ ಸಂಕಿರಣ ಜರುಗಲಿದೆ. ಹರಿಹರ ಮಠದ ಸ್ವಯಂ ಪ್ರಕಾಶ ಸಚ್ಚಿದಾನಂದ ಸ್ವಾಮೀಜಿ ಸಮಾವೇಶ ಉದ್ಘಾಟಿಸಲಿದ್ದಾರೆ. ವಿವಿಧ ಸಂತರು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಭಾಗವಹಿಸಲಿದ್ದಾರೆ ಎಂದು ಸ್ವಾಮೀಜಿ ಮಾಹಿತಿ ನೀಡಿದರು.

ಸನಾತನ ಧರ್ಮದ ಸಂಸ್ಕೃತಿ, ಧಾರ್ಮಿಕತೆ ಹಾಗೂ ಸಮಾಜದ ಏಕತೆಯನ್ನು ಬಲಪಡಿಸುವ ಉದ್ದೇಶದಿಂದ ಸಮಾವೇಶ ಆಯೋಜಿಸಲಾಗಿದ್ದು, ಧರ್ಮಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧರ್ಮಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಸ್ವಾಗತ ಸಮಿತಿ ವಿನಂತಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಸಂಚಾಲಕ ಎಂ. ಬಾಹುಬಲಿ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಎಂ. ಶಾಂತಾರಾಮ ಕುಡ್ವ, ಸಹ ಸಂಚಾಲಕ ದಯಾನಂದ ಪೈ, ಜೊತೆ ಕಾರ್ಯದರ್ಶಿ ರಾಘವೇಂದ್ರ ಭಂಡಾರ್ಕರ್, ಪುತ್ತಿಗೆ ಚಿಕ್ಕಮೇಳದ ಸುರೇಂದ್ರ ಪೈ ,  ಬ್ಯಾಂಕ್ ನಿವೃತ್ತ ಅಧಿಕಾರ ಸುಧೀರ್ ನಾಯಕ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article