ಮಾರ್ನಾಡು ಅಮನಬೆಟ್ಟಿನಲ್ಲಿ 4ನೇ ವರ್ಷದ ಶ್ರೀ ಸತ್ಯನಾರಾಯಣ ಮತ್ತು ಶನೈಶ್ಚರ ಪೂಜೆ: ಸಾಧಕರಿಗೆ ಸನ್ಮಾನ

ಮಾರ್ನಾಡು ಅಮನಬೆಟ್ಟಿನಲ್ಲಿ 4ನೇ ವರ್ಷದ ಶ್ರೀ ಸತ್ಯನಾರಾಯಣ ಮತ್ತು ಶನೈಶ್ಚರ ಪೂಜೆ: ಸಾಧಕರಿಗೆ ಸನ್ಮಾನ


ಮೂಡುಬಿದಿರೆ: ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿ ಟ್ರಸ್ಟ್ ಅಮನಬೆಟ್ಟು ಮಾರ್ನಾಡು ಆಶ್ರಯದಲ್ಲಿ ಶನಿವಾರ ನಡೆದ 4ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶ್ರೀ ಶನೈಶ್ಚರ ಪೂಜೆ ಅಂಗವಾಗಿ ಸಂಜೆ ಅಮನಬೆಟ್ಟು ಬಾಕ್ಯಾರಿನಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.


ಸಾಣೂರಿನ ರಾಜೇಶ್ವರಿ ನ್ಯಾಶನಲ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಧಾಮಿ೯ಕ ಉಪನ್ಯಾಸ ನೀಡಿ “ ಹಿಂದೂ ಸಮಾಜವು ಇಂದು ಹಲವಾರು ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸುತ್ತಿದೆ. ಗ್ರಾಮೀಣ ಮಟ್ಟದಲ್ಲಿ ಧಾರ್ಮಿಕ ಆಚರಣೆಗಳ ಮೂಲಕ ಒಗ್ಗಟ್ಟನ್ನು ಬೆಳೆಸಿದರೆ ಹಿಂದೂ ಸಮಾಜ ಇನ್ನಷ್ಟು ಬಲಗೊಳ್ಳಲಿದೆ” ಎಂದರು.


ಕಾರ್ಯಕ್ರಮದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿ ಟ್ರಸ್ಟ್ ಅಧ್ಯಕ್ಷ ರಮೇಶ್ ಪಿ. ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.

ಮಾರ್ನಾಡು ಉದ್ಯಮಿ ಸೂರಜ್ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 

ಸಾಧಕರಿಗೆ ಸನ್ಮಾನ:

 ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ  ಸದಾಶಿವ ಶೆಟ್ಟಿ (ಕೃಷಿ ಕ್ಷೇತ್ರ), ದೇವಾನಾಥ ಸುವರ್ಣ (ಶಿಕ್ಷಣ ಕ್ಷೇತ್ರ),  ಸಾನ್ವಿಕ್ ಆರ್. ಪೂಜಾರಿ  (ಕ್ರೀಡಾ ಕ್ಷೇತ್ರ), ಪವನ್ ಆರ್. ಕೋಟ್ಯಾನ್ (ಕಲೆ),  ಕೆಲ್ಲಪುತ್ತಿಗೆಯ ಪ್ರೇಮಾ (ನಾಟಿ ವೈದ್ಯೆ) ಹಾಗೂ ಅಚ್ಚರಕಟ್ಟೆಯ ಜಾನಪದ ಕಲಾವಿದೆ ಶೋಭಾ ಅವರಿಗೆ ಭಗವದ್ಗೀತೆ ಸಹಿತ ಫಲಪುಷ್ಪದೊಂದಿಗೆ ಸನ್ಮಾನಿಸಲಾಯಿತು. 

ಸಾಧಕಿ ಅನ್ವಿತಾ ಅವರ ಪರವಾಗಿ ಅವರ ತಾಯಿಯನ್ನು ಗೌರವಿಸಲಾಯಿತು.  

ವೇದಿಕೆಯಲ್ಲಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿ ಟ್ರಸ್ಟ್ ಗೌರವಾಧ್ಯಕ್ಷ ದಯಾನಂದ ಪೈ, ಪಡುಮಾರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ವಾಸುದೇವ ಭಟ್, ಮೂಡುಮಾರ್ನಾಡು ಗಣೇಶೋತ್ಸವ ಸಮಿತಿ ಅಧ್ಯಕ್ಷ ದೇವರಾಜ್ ಸುವರ್ಣ, ಅಲಂಗಾರು ಆರ್.ಆರ್. ಪ್ಯಾಶನ್ ಮಾಲಕ ರಾಜೇಶ್ ಕೋಟ್ಯಾನ್, ಬೆಂಗಳೂರು ಉದ್ಯಮಿ ಹೇಮರಾಜ್ ರಾವ್,  ಅಮನಬೆಟ್ಟು ಶನೈಶ್ಚರ ಪೂಜಾ ಸಮಿತಿ ಟ್ರಸ್ಟ್ ಸಂಚಾಲಕ ಭವಿಷ್ಯತ್ ಕೋಟ್ಯಾನ್, ಅಮನಬೆಟ್ಟಿನ ಮಹಿಳಾ ಸಂಚಾಲಕಿ ಶಶಿಕಲಾ ಗಿರೀಶ್ ಪೂಜಾರಿ, ಪಡುಮಾರ್ನಾಡು ಯುವಕ ಮಂಡಲ ಅಧ್ಯಕ್ಷ ಭರತ್ ಶೆಟ್ಟಿ ಹಾಗೂ ಪಡುಮಾರ್ನಾಡು ಯುವತಿ ಮಂಡಲ ಅಧ್ಯಕ್ಷೆ ಆಶಾ ಸುರೇಂದ್ರ ಉಪಸ್ಥಿತರಿದ್ದರು.

ಮಧ್ಯಾಹ್ನ ಅಮನಬೆಟ್ಟು ಬಾಕ್ಯಾರಿನಲ್ಲಿ ವೇ. ಮೂ. ಅನಂತ ಪದ್ಮನಾಭ ಆಸ್ರಣ್ಣರ ನೇತೃತ್ವದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆಯಿತು. ಬಳಿಕ ಸಾಯಂಕಾಲ ವಿಧಿವಿಧಾನಗಳೊಂದಿಗೆ ಶ್ರೀ ಶನೈಶ್ಚರ ಪೂಜೆ ನೆರವೇರಿತು.

ಕಾರ್ಯಕ್ರಮದ ಅಂಗವಾಗಿ ಉಷಾ ಡಿ. ಪೈ ಧ್ವಜಾರೋಹಣ ನೆರವೇರಿಸಿದರು. ನಂತರ ಭಜನಾ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಸಭೆಯ ಬಳಿಕ ನಾಳ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ 'ಅಮರಶಿಲ್ಪಿ ವೀರ ಶಂಭು–ಕಲ್ಕುಡ’ ಎಂಬ ತುಳು ಪೌರಾಣಿಕ ಯಕ್ಷಗಾನ ಪ್ರದರ್ಶನ ಜರುಗಿತು.

ವೈಷ್ಣವ್ ಸ್ವಾಗತಿಸಿದರು. ಪ್ರಜ್ವಲ್, ಸುನೀತಾ, ವೈಷ್ಣವ್ ಹಾಗೂ ಶೋಭಾ ಅನಿಲ್ ಸನ್ಮಾನಪತ್ರ ವಾಚಿಸಿದರು. ರಾಮ್ ಮಾರ್ನಾಡು ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article