ಶಾಲಾ ಶಿಕ್ಷಣ ಇಲಾಖೆ ನೌಕರ ಸಂಘದ ಅಧ್ಯಕ್ಷರಾಗಿ ನಾಗರತ್ನ ಶಿರೂರು ಆಯ್ಕೆ

ಶಾಲಾ ಶಿಕ್ಷಣ ಇಲಾಖೆ ನೌಕರ ಸಂಘದ ಅಧ್ಯಕ್ಷರಾಗಿ ನಾಗರತ್ನ ಶಿರೂರು ಆಯ್ಕೆ


ಮೂಡುಬಿದಿರೆ: ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷರಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಿಜಾರು ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ  ನಾಗರತ್ನ ಶಿರೂರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. 

ಇತ್ತೀಚೆಗೆ ಮೂಡುಬಿದಿರೆಯಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಸಭೆಯಲ್ಲಿ ಇವರನ್ನು ಆಯ್ಕೆ ಮಾಡಲಾಯಿತು.  ಮಹೇಶ್ವರಿ ಅವರು ತಾಲೂಕು ಕಾರ್ಯದರ್ಶಿಯಾಗಿ ಮತ್ತು  ಮಾಲತೇಶ ಅವರು ಕೋಶಾಧಿಕಾರಿಯಾಗಿ ಆಯ್ಕೆಯಾಗಿರುತ್ತಾರೆ. 

ಗೌರವಾಧ್ಯಕ್ಷರಾಗಿ  ನವೀನ್ ಅಂಬೂರಿ, ಜಿಲ್ಲಾ ಪರಿಷತ್ ಸದಸ್ಯರಾಗಿ ಶ್ರೀ ಶರಣಯ್ಯ, ಹಿರಿಯ ಉಪಾಧ್ಯಕ್ಷರಾಗಿ  ನವೀನ್ ಎಂ. ಹೆಗ್ಡೆ ಉಪಾಧ್ಯಕ್ಷರಾಗಿ,ಭರತ್ ಕುಮಾರ್ ಎಸ್.,  ರೇಣುಕಾ ಬಿ. ಅವರನ್ನು ಆಯ್ಕೆ ಮಾಡಲಾಯಿತು. ಜಂಟಿ ಕಾರ್ಯದರ್ಶಿಗಳಾಗಿ  ಹೆಲೆನ್ ಡಿಸೋಜಾ,  ವಿನುತ ಎಸ್., ಸಂಘಟನಾ ಕಾರ್ಯದರ್ಶಿಗಳಾಗಿ ರಾಘವೇಂದ್ರ ಪೈ,  ಪ್ಲೇವಿ ಡಿಸೋಜ, ಪ್ರೇಮ ಪಿ., ಕ್ರೀಡಾ ಕಾರ್ಯದರ್ಶಿಯಾಗಿ  ಬಸವರಾಜ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ  ಯೋಗಿತಾ ಎನ್., ಆಂತರಿಕ ಲೆಕ್ಕಪರಿಶೋಧಕರಾಗಿ  ಕಸ್ತೂರಿ ಎಚ್. ಅವರನ್ನು ಆಯ್ಕೆ ಮಾಡಲಾಯಿತು. 

ಜಿಲ್ಲಾಧ್ಯಕ್ಷರಾದ  ಪ್ರೇಮನಾಥ ಶೆಟ್ಟಿ ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ  ಮೋಹನ ಕೊನವಳ್ಳಿ ಅವರ ಮಾರ್ಗದರ್ಶನದಲ್ಲಿ ಸಭೆ ನಡೆಯಿತು. ಮೂಡುಬಿದಿರೆ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಡಾ. ದೊರೆಸ್ವಾಮಿ ಕೆ.ಎನ್. ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article