ಮೊರಂತಬೆಟ್ಟು ಲೋಕಯ್ಯ ಅಪ್ಪಣ್ಣ ಸುವಣ೯ ನಿಧನ
Wednesday, February 25, 2026
ಮೂಡುಬಿದಿರೆ: ಕೃಷಿಕರು, ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಮೂಡುಬಿದಿರೆ ಸ್ಥಾಪಕ ಸದಸ್ಯ ಮತ್ತು ಗೌರವ ಸಲಹೆಗಾರರಾಗಿದ್ದ ಮೊರಂತಬೆಟ್ಟು ಲೋಕಯ್ಯ ಅಪ್ಪಣ್ಣ ಸುವರ್ಣ (93) ಅವರು ಮಂಗಳವಾರ ಸಂಜೆ ವಯೋಸಹಜ ಅನಾರೋಗ್ಯದಿಂದ ನಿಧನರಾದರು.
ಸಮಾಜಮುಖಿ ಚಟುವಟಿಕೆಗಳಲ್ಲಿ ಸದಾ ತೊಡಗಿಸಿಕೊಂಡಿದ್ದ ಲೋಕಯ್ಯ ಸುವರ್ಣ ಅವರು ಬಿಲ್ಲವ ಸಂಘದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿ, ಸಂಘದ ಬೆಳವಣಿಗೆಗೆ ಮಾರ್ಗದರ್ಶನ ನೀಡಿದ್ದರು. ಸರಳ, ಸಜ್ಜನ ಹಾಗೂ ಮೃದುಸ್ವಭಾವದ ವ್ಯಕ್ತಿತ್ವದಿಂದ ಎಲ್ಲರ ಮನ ಗೆದ್ದಿದ್ದರು.
ಮೃತರು ಪತ್ನಿ ಪ್ರಮೀಳ, ಪುತ್ರ ಚೇತನ್ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಪುತ್ರಿ ಪ್ರಿಯಾ ಅವರು ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದರು.