ದರೆಗುಡ್ಡೆ: ಉತ್ತಮ ಸೇವೆ ನೀಡಿ ಅವಧಿ ಪೂಣ೯ಗೊಳಿಸಿರುವ ಪಂಚಾಯತ್ ಸದಸ್ಯರಿಗೆ ಅಭಿನಂದನೆ
Monday, February 9, 2026
ಮೂಡುಬಿದಿರೆ: ದರೆಗುಡ್ಡೆ ಗ್ರಾ. ಪಂಚಾಯತ್ ನಲ್ಲಿ ಕಳೆದ ಐದು ವಷ೯ಗಳಲ್ಲಿ ಅಭಿವೃದ್ಧಿ ಕಾಯ೯ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಉತ್ತಮ ಸೇವೆಯನ್ನು ನೀಡುತ್ತಾ ಇದೀಗ ಅವಧಿ ಪೂಣ೯ಗೊಳಿಸಿರುವ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು ಸಹಿತ ಉಪಾಧ್ಯಕ್ಷರು ಮತ್ತು ಸದಸ್ಯರನ್ನು ಪಂಚಾಯತ್ ವತಿಯಿಂದ ಸೋಮವಾರ ಅಭಿನಂದಿಸಿ ಗೌರವಿಸಲಾಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜು ಮತ್ತು ಸಿಬಂದಿ ವಗ೯ದವರು, ಆಶಾ ಮತ್ತು ಅಂಗನವಾಡಿ ಕಾಯ೯ಕತೆ೯ಯರು ಈ ಸಂದಭ೯ದಲ್ಲಿದ್ದರು.