ಹಳ್ಳಿಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ: ಡಾ. ಸತೀಶ್ಚಂದ್ರ ಎಸ್.

ಹಳ್ಳಿಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ: ಡಾ. ಸತೀಶ್ಚಂದ್ರ ಎಸ್.


ಉಜಿರೆ: ವಿಶ್ವ ಸಂಸ್ಥೆ ಪ್ರಸ್ತಾಪ ಮಾಡಿರುವ 20030ರ ವೇಳೆಗೆ ಬಡತನ ನಿರ್ಮೂಲನೆ, ಪರಿಸರ ಸಂರಕ್ಷಣೆ ಮತ್ತು ಸಮೃದ್ಧಿಯನ್ನು ಸಾಧಿಸಲು 17 ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ರೂಪಿಸಿದೆ. ಇದರಲ್ಲಿ ಪ್ರಮುಖವಾಗಿ 5 ತತ್ವಗಳಾದ ಸಮಾಜ, ಭೂಮಿ, ಪಾಲುದಾರಿಕೆ, ಸಮೃದ್ಧಿ ಮತ್ತು ಶಾಂತಿಯ ವಿಚಾರದಲ್ಲಿ ಅಭಿವೃದ್ಧಿ ಹೊಂದಲು ಉಲ್ಲೇಖಿಸಲಾಗಿದೆ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹೇಳಿದರು.

ಅವರು ಇಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ಅರ್ಥಶಾಸ್ತ್ರ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗಗಳ ಸಹಭಾಗಿತ್ವದಲ್ಲಿ ನವದೆಹಲಿಯ ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಮಂಡಳಿ ಪ್ರಾಯೋಜಕತ್ವದಲ್ಲಿ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಹಾಗೂ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ. ಅವರ ಮಾರ್ಗದರ್ಶನದಲ್ಲಿ ಎರಡು ದಿನಗಳ ‘ಗ್ರಾಮೀಣ ಜೀವನೋಪಾಯ ಮತ್ತು ಸುಸ್ಥಿರತೆ: ಜಾಗತಿಕ ದೃಷ್ಟಿಕೋನ’ಎಂಬ ವಿಚಾರದ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಹಳ್ಳಿಯ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ. ಜನರ ಬಡತನ ನಿರ್ಮೂಲನೆ, ಹಸಿವನ್ನು ನೀಗಿಸಿ ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶ ಹೆಚ್ಚಿಸುವುದು, ಆರೋಗ್ಯಕರ ಜೀವನ ಮತ್ತು ಯೋಗಕ್ಷೇಮ ಉತ್ತೇಜಿಸುವುದು, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ ಸಾಧಿಸುವುದರ ಜೊತೆಗೆ ಮಹಿಳೆಯರನ್ನು ಸಬಲಗೊಳಿಸುವುದು, ಶುದ್ಧ ನೀರು ಮತ್ತು ನೈರ್ಮಲ್ಯ, ಪರಿಸರ, ಭೂಮಿಯ ಸಂರಕ್ಷಣೆ, ಸುಸ್ಥಿರ ಇಂಧನ ಲಭ್ಯತೆ. ಹವಾಮಾನ ಬದಲಾವಣೆ ತಡೆಯಲು ತುರ್ತು ಕ್ರಮ, ಮೂಲಸೌಕರ್ಯ ಸಂಪನ್ಮೂಲಗಳ ಮಿತಬಳಕೆ, ಸಾಗರ ಮತ್ತು ಜಲ ಸಂಪನ್ಮೂಲಗಳ ಸಂರಕ್ಷಣೆ. ಅರಣ್ಯ ಮತ್ತು ಜೈವಿಕ ವೈವಿಧ್ಯತೆಯ ಸಂರಕ್ಷಣೆ. ದೇಶಗಳ ಒಳಗಿನ ಮತ್ತು ನಡುವಿನ ಅಸಮಾನತೆ ಕಡಿಮೆ ಮಾಡುವುದರ ಜೊತೆಗೆ ಶಾಂತಿ ಮತ್ತು ಪಾಲುದಾರಿಕೆ ದೇಶದ ಅಭಿವೃದ್ಧಿಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಇದು ಶಾಂತಿ, ನ್ಯಾಯ ಮತ್ತು ಜಾಗತಿಕ ಪಾಲುದಾರಿಕೆಯನ್ನು ಬಲಪಡಿಸುತ್ತದೆ. ‘ಗ್ರಾಮೀಣ ಜೀವನೋಪಾಯ ಮತ್ತು ಸುಸ್ಥಿರತೆಯ ಜಾಗತಿಕ ದೃಷ್ಟಿಕೋನ’ ವಿಚಾರ ಸಂಕಿರಣ ಇವೆಲ್ಲ ವಿಚಾರಗಳ ಚರ್ಚೆಗೆ ಪೂರಕ ಅಂಶಗಳಾಗಿವೆ ಎಂದರು.

ಮುಖ್ಯ ಅತಿಥಿಗಳಾಗಿ ಅಮೇರಿಕಾದ ಮೆಕ್ಸಿಕೋ ಸಿಟಿಯ ಲ್ಯಾಟಿನ್ ಅಮೆರಿಕನ್ ಫ್ಯಾಕಲ್ಟಿ ಆಫ್ ಸೋಷಿಯಲ್ ಸೈನ್ಸ್ ಪ್ರಾಧ್ಯಾಪಕ ಪ್ರೊ. ಮೇರಿಯಾನೋ ರೋಜಾನ್ ಮಾತನಾಡಿ, ವಿದ್ಯಾರ್ಥಿ ಸಮೂಹದ ಸಕಾರಾತ್ಮಕ ಚಿಂತನೆಗಳ ದೂರ ದೃಷ್ಟಿಯೇ  ಭಾರತದ ಭವಿಷ್ಯ. ಯುವ ಸಮುದಾಯ ಪ್ರತಿಯೊಂದು ಕಾರ್ಯಯೋಜನೆಯಲ್ಲೂ ವಿನೂತನ ಮತ್ತು ಭಿನ್ನವಾಗಿ ಕಾರ್ಯ ರೂಪಕ್ಕೆ ತರಲು ಪ್ರಯತ್ನಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ. ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಗ್ರಾಮೀಣ ಭಾಗಗಳ ಅಭಿವೃದ್ದಿ ಅವಿಭಾಜ್ಯ ಅಂಗ. ದೇಶದ ಪ್ರಗತಿಯಲ್ಲಿ ಹಳ್ಳಿಗಳ ಬೆಳವಣಿಗೆಯನ್ನೂ ಸಮರೂಪದಲ್ಲಿ ಸಾಗಿಸಬೇಕು. ಅದಕ್ಕನುಗುಣವಾಗಿ ಹಳ್ಳಿಗಳಲ್ಲಿ ಕೃಷಿ, ಹೈನುಗಾರಿಕೆ, ಮೂಲಭೂತ ಸೌಕರ್ಯ, ಕೌಶಲ್ಯಾಧಾರಿತ ಶಿಕ್ಷಣ, ಮಹಿಳೆಯರ ಸಬಲೀಕರಣ, ಔದ್ಯೋ ಗೀಕರಣ  ಇತ್ಯಾದಿ ಸಹಜತೆಗಳನ್ನು ಅನುವು ಮಾಡಿಕೊಡಬೇಕು ಎಂದರು. 

ಮುಖ್ಯ ಅತಿಥಿ ಅಮೇರಿಕಾದ ಮೆಕ್ಸಿಕೋ ಸಿಟಿಯ ಲ್ಯಾಟಿನ್ ಅಮೆರಿಕನ್ ಫ್ಯಾಕಲ್ಟಿ ಆಫ್ ಸೋಷಿಯಲ್ ಸೈನ್ಸ್ ಪ್ರಾಧ್ಯಾಪಕ ಪ್ರೊ. ಮೇರಿಯಾನೋ ರೋಜಾನ್ ಮತ್ತು ಶ್ರೀಲಂಕಾ ದೇಶದ ಬಟ್ಟಿಕಲೋವಾದ ಪ್ರಾಕ್ಟಿಷನರ್ ಮತ್ತು ಅಭಿವೃದ್ಧಿ ಸಲಹೆಗಾರ ನಳಿನಿ ರತ್ನರಾಜ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಅತಿಥಿಗಳ ಸಮ್ಮುಖದಲ್ಲಿ ಐಎಸ್‌ಬಿಎನ್ ಕೃತಿ ಬಿಡುಗಡೆ ಗೊಳಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article