ಮೂಡುಬಿದಿರೆ ಕಾಳಿಕಾಂಬಾ ಸೇವಾ ಸಮಿತಿ ಕ್ರೀಡಾಕೂಟ
Monday, February 9, 2026
ಮೂಡುಬಿದಿರೆ: ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಮಹೋತ್ಸವದಂಗವಾಗಿ ಶ್ರೀಕಾಳಿಕಾಂಬಾ ಸೇವಾ ಸಮಿತಿ ವತಿಯಿಂದ ಶ್ರೀ ಮಹಾವೀರ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದ್ದ ಕ್ರೀಡಾಕೂಟವನ್ನು ದೇವಸ್ಥಾನ ಆಡಳಿತ ಮೊಕ್ತೇಸರ ಎಂ.ಕೆ. ಬಾಲಕೃಷ್ಣ ಆಚಾರ್ಯ ಉಳಿಯ ಉದ್ಘಾಟಿಸಿದರು. ಸೇವಾಸಮಿತಿ ಅಧ್ಯಕ್ಷ ಶ್ರೀನಾಥ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಮೊಕ್ತೇಸರರಾದ ಶಿವರಾಮ ಆಚಾರ್ಯ, ಯೋಗೀಶ ಆಚಾರ್ಯ, ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ಅಧ್ಯಕ್ಷೆ ಶಾಂತಲಾ ಎಸ್. ಆಚಾರ್ಯ, ದೇವಳದ ಆಡಳಿತ ಸಮಿತಿ ಸದಸ್ಯರಾದ ಎನ್. ಸುರೇಶ್ ಗಂಟಾಲ್ಕಟ್ಟೆ, ಎನ್. ಶಿವಪ್ರಸಾದ್ ಆಚಾರ್ಯ, ರಾಜೇಶ್ ಪುತ್ತಿಗೆಮನೆ, ಚಂದಿತ್ಲುಗುರುದತ್ತ ಆಚಾರ್ಯ, ಜಯಶ್ರೀ ಜೆ. ಆಚಾರ್ಯ ಮುಖ್ಯಅತಿಥಿಗಳಾಗಿದ್ದರು. ಸೇವಾ ಸಮಿತಿ ಉಪಾಧ್ಯಕ್ಷ ಭಾಸ್ಕರ ಆಚಾರ್ಯ ಹೊಸಬೆಟ್ಟು, ಪ್ರ. ಕಾರ್ಯದರ್ಶಿ ಸುಧಾಕರ ಹೊಸಬೆಟ್ಟು, ಜತೆ ಕಾರ್ಯದರ್ಶಿ ಸರ್ವೋತ್ತಮ ಆಚಾರ್ಯ, ಕ್ರೀಡಾಕಾರ್ಯದರ್ಶಿಗಳಾದ ವಿಕ್ರಂ ಶಿರ್ತಾಡಿ, ಸುಧೀಂದ್ರ ನಾರಂಪಾಡಿ, ಸದಸ್ಯರು ಉಪಸ್ಥಿತರಿದ್ದರು.
ಜಗದೀಶ ಆಚಾರ್ಯ ನಿರೂಪಿಸಿದರು. ಕ್ರಿಕೆಟ್ ನಲ್ಲಿ 20, ಶಟ್ಲ್ ಬ್ಯಾಡ್ಮಿಂಟನ್ (ಒಳಾಂಗಣ)ನಲ್ಲಿ 32 ತಂಡಗಳಿದ್ದವು.