ಮಾಣೂರು ಬ್ರಹ್ಮಕಲಶೋತ್ಸವ: ರಥೋತ್ಸವ ಸಂಭ್ರಮ

ಮಾಣೂರು ಬ್ರಹ್ಮಕಲಶೋತ್ಸವ: ರಥೋತ್ಸವ ಸಂಭ್ರಮ


ನೀರುಮಾರ್ಗ: ನೀರುಮಾರ್ಗ ಸಮೀಪದ ಮಾಣೂರು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಪುನಃಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮದೊಂದಿಗೆ ಸೋಮವಾರ ಸಂಭ್ರಮದ ಹಗಲು ರಥೋತ್ಸವ ಕ್ಷೇತ್ರದ ತಂತ್ರಿ ಶಿಬರೂರು ವೇದವ್ಯಾಸ ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆಯಿತು.


ಫೆ.8ರಂದು ಮಧ್ಯಾಹ್ನ ‘ಜಾರೋಹಣದೊಂದಿಗೆ ಜಾತ್ರೋತ್ಸವ ಆರಂಭಗೊಂಡಿತು. ಫೆ.9 ರಂದು ಮಧ್ಯಾಹ್ನ 12ಕ್ಕೆ ಮಾಣೂರು ರಥೋತ್ಸವ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ, ಸಂಜೆ 5.30 ರಿಂದ ದೇವರಿಗೆ ಹೂವಿನ ಪೂಜೆ, ದೊಡ್ಡ ರಂಗಪೂಜೆ, ಬಲಿ ಉತ್ಸವಾದಿಗಳು, ಗಜ ವಾಹನ ಸೇವೆ, ಪ್ರಥಮ ತೆಪ್ಪೋತ್ಸವ ಕೆರೆದೀಪೋತ್ಸವ, ಶಯನೋತ್ಸವ ನಡೆಯಿತು.

ಈ ಸಂದರ್ಭ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಶಿಧರ ಭಟ್ ಬೊಳ್ಮಾರಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಟ್ರಸ್ಟಿ ಕೃತಿನ್ ಡಿ. ಅಮೀನ್, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಆನಂದ್ ಸರಿಪಲ್ಲ, ಪ್ರಧಾನ ಅರ್ಚಕ ರಾಜೇಶ್ ಭಟ್, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಕುಂಞಣ್ಣ ಶೆಟ್ಟಿ ಕೋರೆಟ್ಟುಗುತ್ತು, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಭಾಸ್ಕರ್ ಜೆ. ಮಾಣೂರು, ಮುರಳೀಧರ ಕೆಂಪುಗುಡ್ಡೆ, ಉಮಾನಾಥ ಸುವರ್ಣ, ರಾಧಾಕೃಷ್ಣ ಮಾಡ್ರಬೈಲ್, ಕೃಷ್ಣನಾಯ್ಕ್, ಮೋಹಿನಿ ಮೋನಪ್ಪ, ಧನವಂತಿ ವೇಣುಗೋಪಾಲ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article