ಮೂಡುಬಿದಿರೆ: ಶ್ರೀ ಕಾಳಿಕಾಂಬಾ ನಗರ ನಾಮಫಲಕ ಅನಾವರಣ
ವಾರ್ಡ್ ಸದಸ್ಯೆ ಶ್ವೇತಾ ಪ್ರವೀಣ್ ಅವರು ಫಲಕಕ್ಕೆ ಹಾರಾರ್ಪಣೆಗೈದರು.
ದೇವಸ್ಥಾನದ ಮೊಕ್ತೇಸರ ಶಿವರಾಮ ಆಚಾರ್ಯ ಉಳಿಯ ಮಾತನಾಡಿ, ಪುರಾತನ ಕಾಲದಿಂದಲೂ ಈ ಭಾಗವನ್ನು ಆಚಾರಿಕೇರಿ, ವಿಶ್ವಕರ್ಮ ಅಗ್ರಹಾರ ಎಂದೇ ಕರೆಯಲಾಗುತ್ತಿದ್ದು ಈ ಭಾಗದವರು ಕಾಳಿಕಾಂಬಾ ದೇವಸ್ಥಾನದ ಬಳಿ ಎಂಬ ವಿಳಾಸವನ್ನೇ ಬಳಸುತ್ತಿರುವುದನ್ನು ಉಲ್ಲೇಖಿಸಿ, ನಾಮಕರಣದ ಬಗ್ಗೆ ಪರಿಸರದ ನಿವಾಸಿಗಳ ಕೋರಿಕೆಯನ್ನು ಮನ್ನಿಸಿ ಒಪ್ಪಿಗೆ ಇತ್ತ ಪುರಸಭಾ ಮುಖ್ಯಾಧಿಕಾರಿಯವರು, ಸಹಕಾರವಿತ್ತ ವಾರ್ಡ್ ಸದಸ್ಯರ ಸಹಿತ ಪುರಸಭೆಗೆ ಕೃತಜ್ನತೆ ಸಲ್ಲಿಸಿದರು.
ಪುರಸಭಾ ಸದಸ್ಯ ಪುರಂದರ ದೇವಾಡಿಗ, ನಿವಾಸಿ ಗೋಪಾಲ್ ಎಂ., ದೇವಸ್ಥಾನದ ತಂತ್ರಿವರ್ಯ ಕೇಶವ ಆಚಾರ್ಯ, ಆಡಳಿತ ಮೊಕ್ತೇಸರ ಬಾಲಕೃಷ್ಣ ಆಚಾರ್ಯ, ಯೋಗೀಶ ಆಚಾರ್ಯ, ಸದಸ್ಯರಾದ ರಾಜೇಶ್, ಸುರೇಶ್ ಎನ್., ಗುರುದತ್, ಶಿವಪ್ರಸಾದ್, ಸುರೇಂದ್ರ, ಜಯಶ್ರೀ ಜಗನ್ನಾಥ್, ಮಾಜಿ ಆಡಳಿತ ಮೊಕ್ತೇಸರ ಎನ್.ಜಯಕರ ಆಚಾರ್ಯ, ಸಮಿತಿಗಳ ಪ್ರಮುಖರಾದ ಶ್ರೀನಾಥ್ ಆಚಾರ್ಯ, ಭಾಸ್ಕರ ಆಚಾರ್ಯಹೊಸಬೆಟ್ಟು, ಶಾಂತಲಾ ಎಸ್. ಆಚಾರ್ಯ, ಗೀತಾ ಯೋಗೀಶ್, ಯಮುನಾ ಯೋಗೀಶ್, ಹಿರಿಯ ಪತ್ರಕರ್ತ ಧನಂಜಯ ಮೂಡುಬಿದಿರೆ ಮೊದಲಾದವರಿದ್ದರು.