ಅತ್ಯುತ್ತಮ ಎಸ್.ಡಿ.ಯಂ.ಸಿ ಪ್ರಶಸ್ತಿಗೆ ಕೇಮಾರು ಶಾಲೆ ಆಯ್ಕೆ
Sunday, February 22, 2026
ಮೂಡುಬಿದಿರೆ: ಕೇಮಾರು ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ರೇಣುಕಾ ಅಮೀನ್ ರವರ ನೇತೃತ್ವದ ಎಸ್.ಡಿ.ಎಂ.ಸಿ ಸಮಿತಿ 2025-26 ನೇ ಸಾಲಿನ ‘ಅತ್ಯುತ್ತಮ ಶಾಲಾಭಿವೃದ್ಧಿ ಸಮಿತಿ’ ಪ್ರಶಸ್ತಿಗೆ ಆಯ್ಕೆಯಾಗಿದೆ.
ಕಾರಣೀಭೂತರಾದ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವಸದಸ್ಯರು ಮತ್ತು ಮಕ್ಕಳ ಪೋಷಕರು, ಶಾಲಾಭ್ಯುದಯ ಸಮಿತಿ, ಹಳೆ ವಿದ್ಯಾರ್ಥಿ ಸಂಘ, ಯುವ ಉತ್ಸಾಹಿ ಬಳಗ ಕೇಮಾರು, ಶಾಲಾಭಿಮಾನಿಗಳು, ಹಾಗೂ ಊರ ಪರವೂರ ದಾನಿಗಳಿಗೆಲ್ಲರಿಗೂ ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ.ಕೆ ಹಾಗೂ ಸಹಶಿಕ್ಷಕಿಯರು ಅಕ್ಷರದಾಸೋಹ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವೃಂದದವರು ಶಾಲಾ ಪರವಾಗಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.