ನೀಕೆ೯ರೆ ಸೇತುವೆ ಕಾಮಗಾರಿ: ಸಂಪಿಗೆ-ಅಶ್ವತ್ಥಪುರ ವಾಹನ ಸಂಚಾರ ನಿಬ೯ಂಧ

ನೀಕೆ೯ರೆ ಸೇತುವೆ ಕಾಮಗಾರಿ: ಸಂಪಿಗೆ-ಅಶ್ವತ್ಥಪುರ ವಾಹನ ಸಂಚಾರ ನಿಬ೯ಂಧ

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಸಂಪಿಗೆ–ಅಶ್ವತ್ಥಪುರ–ನೀರ್ಕೆರೆ–ಮಂಜನಕಟ್ಟೆ ರಸ್ತೆಯಲ್ಲಿರುವ ನೀರ್ಕೆರೆ ಸೇತುವೆ ಕಾಮಗಾರಿಯ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಎಲ್ಲಾ ತರದ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಸುಮಾರು ರೂ.9.90 ಕೋಟಿ ಅಂದಾಜು ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಸಾರ್ವಜನಿಕರ ಸುರಕ್ಷತೆ ಮತ್ತು ಸಂಚಾರದ ಸುಗಮತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ಬ್ಯಾರಿಕೇಡ್‌ಗಳು ಹಾಗೂ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗುತ್ತದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019ರ ಸೆಕ್ಷನ್ 198(ಎ) ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಪರ್ಯಾಯ ಮಾರ್ಗಗಳು:

ನೀರ್ಕೆರೆ–ಸಂಪಿಗೆ ಮಾರ್ಗದಲ್ಲಿ ಸಂಚರಿಸುವ ವಾಹನಗಳು ನೀರ್ಕೆರೆ–ಮುದಿಪು–ಮುಲ್ಕಿ ಮೂಲಕ ರಾಷ್ಟ್ರೀಯ ಹೆದ್ದಾರಿಯನ್ನು ಬಳಸಬೇಕು. ಮಂಜನಕಟ್ಟೆ–ಅಶ್ವತ್ಥಾಪುರ ಭಾಗದ ವಾಹನಗಳು ಸಮೀಪದ ಪರ್ಯಾಯ ರಸ್ತೆಗಳ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ. ಈ ಆದೇಶವು ಫೆಬ್ರವರಿ 23, 2026ರಿಂದ ಫೆಬ್ರವರಿ 22, 2028ರವರೆಗೆ, ಅಂದರೆ 24 ತಿಂಗಳ ಅವಧಿಗೆ ಜಾರಿಯಲ್ಲಿರಲಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article