ಒರಿಗಾಮಿ ಕಲೆಯ ಹಿಂದೆ ಗಣಿತ ಕಾರ್ಯಾಗಾರ

ಒರಿಗಾಮಿ ಕಲೆಯ ಹಿಂದೆ ಗಣಿತ ಕಾರ್ಯಾಗಾರ


ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಗಣಿತ ವಿಭಾಗದ ವತಿಯಿಂದ ಒರಿಗಾಮಿ ಕಲೆಯ ಹಿಂದೆ ಇರುವ ಗಣಿತ ಎಂಬ ಕಾರ್ಯಾಗಾರ ಆಯೋಜಿಸಲಾಯಿತು. 


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ ಆಂಟೋನಿ ಪ್ರಕಾಶ್ ಮೊಂತೆರೋ ಅವರು ಮಾತನಾಡಿ, ಗಣಿತದ ಪರಿಕಲ್ಪನೆಗಳನ್ನು ಪ್ರಾಯೋಗಿಕ ಕಲಿಕೆಯೊಂದಿಗೆ ಸಂಪರ್ಕಿಸುವಂತಹ ಅರ್ಥಪೂರ್ಣ ಮತ್ತು ಸೃಜನಾತ್ಮಕ ಶೈಕ್ಷಣಿಕ ಕಾರ್ಯಕ್ರಮ ಇದಾಗಿದೆ ಎಂದರು. 


ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ ಅಡೆಲೆಡ್ ಸಲ್ಡಾನ ಅವರು ‘ಒರಿಗಾಮಿ’ ಕಲೆಯ ಹಿಂದೆ ಅಡಗಿರುವ ಗಣಿತದ ತತ್ವಗಳನ್ನು ಸುಂದರವಾಗಿ ವಿವರಿಸಿದರು. ರೇಖಾಗಣಿತ ,ಕೋನಗಳು , ಪರಿವರ್ತನೆಗಳು ಮುಂತಾದ ಗಣಿತದ ಅಂಶಗಳನ್ನು ಒರಿಗಾಮಿ ಮೂಲಕ ಹೇಗೆ ಅರ್ಥೈಸಬಹುದು. ಸರಳ ಕಾಗದ ಮಡಿತಗಳೊಳಗೆ ಅಡಗಿರುವ ಗಣಿತದ ಸೌಂದರ್ಯ ಮತ್ತು ಶೈಲಿಯನ್ನು ಅವರು ವಿವರಿಸಿದರು.


ಕಾರ್ಯಕ್ರಮದ ವೇದಿಕೆಯಲ್ಲಿ ಗಣಿತ ವಿಭಾಗದ ಮುಖ್ಯಸ್ಥೆ ತನುಜಾ ಎನ್.ಪಿ. ಉಪಸ್ಥಿತರಿದ್ದರು. ಈ ಕಾರ್ಯಾಗಾರವು ವಿದ್ಯಾರ್ಥಿಗಳಲ್ಲಿ ಗಣಿತದ ಬಗ್ಗೆ ಆಸಕ್ತಿ ಮತ್ತು ಸೃಜನಾತ್ಮಕ ಚಿಂತನೆ ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸಿತು. ಬಿಎಸ್ಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ವಿದ್ಯಾರ್ಥಿನಿಯರಾದ ಮಾನಸ ಮತ್ತು ಅಪರ್ಣ ಪ್ರಾರ್ಥನೆ ಸಲ್ಲಿಸಿದರು. ದ್ವಿತೀಯ ಬಿಎಸ್ಸಿ ಆಯಿಷತ್ ಜಬೀನಾ ಸ್ವಾಗತಿಸಿ ಸುಷ್ಮಾ ವಾಗ್ಲೆ ವಂದಿಸಿದರು. ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ ಶ್ರೀವಿದ್ಯಾ ಎನ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article